HEALTH TIPS

No title

         ಒಡುವಾರ್ ಬಂಜನ್ ಕುಟುಂಬಸ್ಥರ ಮೂಲಸ್ಥಾನ:ಪ್ರತಿಷ್ಠಾ ದಿನಾಚರಣೆ ಬ್ರಹ್ಮಕಲಶೋತ್ಸವ, ನೇಮೋತ್ಸವ
     ಉಪ್ಪಳ: ಒಡುವಾರ್ ಬಂಜನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ಮಲರಾಯ,ಪಂಜುಲರ್ಿ,ಕುಪ್ಪೆ ಪಂಜುಲರ್ಿ,ಪರಿವಾರ ದೈವಗಳ ಹಾಗೂ ನಾಗದೇವರ 12ನೇ ವರ್ಷದ ಪ್ರತಿಷ್ಟಾ ದಿನಾಚರಣೆ,ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಮಂಡೆಕಾಪಿನಲ್ಲಿ  ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
   ಪ್ರಥಮ ದಿನದಂದು ವೈದಿಕ ಧಾಮರ್ಿಕ ಕಾರ್ಯಕ್ರಮಗಳಂಗವಾಗಿ ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವೈದಿಕ ಬೆಳಗ್ಗೆ ವೆಂಕಟರಮಣ ದೇವರ ಹುಂಡಿಗೆ ಕಾಣಿಕೆ,ಗಣಪತಿ ಹವನ,ಮತ್ತು ಬ್ರಹ್ಮಕಲಾಭಿಷೇಕ,ದೈವಗಳ ಸನ್ನಿಧಿಯಲ್ಲಿ ಮತ್ತು ನಾಗಸನ್ನಿಧಿಯಲ್ಲಿ ತಂಬಿಲಸೇವೆಯ ಬಳಿಕ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಸಂಜೆ  ಸ್ಥಳೀಯ ಭಜನಾ ತಂಡದಿಂದ ಮತ್ತು ಶ್ರೀ ಷಣ್ಮುಖ ಭಜನಾ ಸಂಘ ಮುಗು ಇವರಿಂದ ಭಜನೆ ಕಾರ್ಯಕ್ರಮ,ರಾತ್ರಿ ಮಲರಾಯ ದೈವದ ಭಂಡಾರ ಏರಿದ ಬಳಿಕ ಅನ್ನ ಸಂತರ್ಪಣೆ ನಡೆಯಿತು.
   ದ್ವಿತೀಯ ದಿನದಂದು ಬೆಳಗ್ಗೆ ಶ್ರೀಧಾಮ ಮಾಣಿಲದ ಶ್ರೀ ಮೋಹನ್ ದಾಸ್ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮತ್ತು ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಮಲರಾಯ ದೈವ ಮತ್ತು ಬಂಟ ದೈವಗಳ ನರ್ತನ ಸೇವೆ, ಪ್ರಸಾದ ವಿತರಣೆ, ಪರಿವಾರ ದೈವಗಳ ಭಂಡಾರ ಏರಿ ರಾತ್ರಿ ಕುಪ್ಪೆ ಪಂಜುಲರ್ಿ,ವರ್ಣರ ಪಂಜುಲರ್ಿ,ಮುಕಾಂಬಿ ಗುಳಿಗ ಮತ್ತು ಕಲ್ಲರ್ುಟರ್ಿ ದೈವಗಳ ನರ್ತನ ಸೇವೆ ನಡೆಯಿತು.
   ತೃತೀಯ ದಿನದ ಂದು ಬೆಳಗ್ಗೆ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನ ಸಂತರ್ಪಣೆ,ಸಂಜೆ ಕೊರತಿ ದೈವದ ಭಂಡಾರ ಏರಿದ ಬಳಿಕ ಕೊರತಿ ದೈವದ ನರ್ತನ ಸೇವೆ ಪ್ರಸಾದ ವಿತರಣೆ,ರಾತ್ರಿ ರಾಹು ಗುಳಿಗನ ತಂಬಿಲ, ಪಿತೃ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries