HEALTH TIPS

No title

               ಕನ್ನಡಕ್ಕೆ ಅ.ಜಾಲ ಮಾನ-  ರಾಷ್ಟ್ರಕವಿ ಕುವೆಂಪು ಗೆ ಗೂಗಲ್ ಗೌರವ; ಜನ್ಮದಿನಕ್ಕೆ ಕನ್ನಡದಲ್ಲೇ ಡೂಡಲ್
            ಡಿಸೆಂಬರ್ 29:  ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113ನೇ ಜನ್ಮದಿನೋತ್ಸ
    ಬೆಂಗಳೂರು: 20ನೇ ಶತಮಾನದ ಪ್ರಮುಖ ಸಾಹಿತಿ ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಮಣಿ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಖ್ಯಾತ ಅಂತಜರ್ಾಲ ಶೋಧ ತಾಣ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಕೆ ಮಾಡಿದೆ.
   ಶುಕ್ರವಾರ  ಡಿಸೆಂಬರ್ 29ರಂದು ರಸಋಷಿವ ಕುವೆಂಪು ಅವರ 113ನೇ ಜನ್ಮ ದಿನಾಚರಣೆಯಾಗಿದ್ದು, ಗೂಗಲ್ ತನ್ನ ಮುಖಪುಟದಲ್ಲಿ ಕುವೆಂಪು ಭಾವ ಚಿತ್ರವಿರುವ ಕನ್ನಡಲೇ ಗೂಗಲ್ ಎಂದು ಬರೆದಿರುವ ಡೂಡಲ್ ಮೂಲಕ  ವಿಶೇಷ ಗೌರವ ಸಲ್ಲಿಕೆ ಮಾಡಿದೆ. ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಕುವೆಂಪು ಕಂಗೊಳಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಬಂಡೆ ಮೇಲೆ ಕುಳಿತಿರುವ ಕುವೆಂಪು, ಅವರ ಹಿನ್ನಲೆಯಲ್ಲಿ ಅವರ ಕುಪ್ಪಳ್ಳಿ ನಿವಾಸ ಮತ್ತು ಪ್ರಕೃತಿ ಸೌದರ್ಯ  ಇರುವ ಭಾವಚಿತ್ರವನ್ನು ಗೂಗಲ್ ಮುಖಪುಟದಲ್ಲಿ ಬಳಕೆ ಮಾಡಿಕೊಂಡಿದೆ.
   1904 ಡಿಸೆಂಬರ್ 29ರಂದು ಕುಪ್ಪಳ್ಳಿಯಲ್ಲಿ ಕುವೆಂಪು ಅವರು ಜನಿಸಿದ್ದರು. ಶ್ರೀರಾಮಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ನಂತಹ ಮೇರು ಕೃತಿಗಳನ್ನು ರಚಿಸಿರುವ ಕುವೆಂಪು ಅವರು, ನಾಟಕ, ವಿಮಶರ್ೆ, ಪ್ರೇಮಗೀತೆ,  ಕಾದಂಬರಿ, ಕಾವ್ಯ, ವಿಮಶರ್ಾತ್ಮಕ ಪ್ರಬಂಧ, ಮಕ್ಕಳ ನಾಟಕ, ಸಾನೆಟ್ಟುಗಳು, ಮಹಾಕಾವ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರಾಗಿರುವ  ಕುವೆಂಪು ಅವರು, ಕನ್ನಡಕ್ಕೆ ತಮ್ಮ `ಶ್ರೀ ರಾಮಾಯಣ ದರ್ಶನಂ' ಕೃತಿಯ ಮೂಲಕ  ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
    ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾಗಿರುವ ಕುವೆಂಪು ಅವರಿಗೆ ಗೂಗಲ್ ಕನ್ನಡದಲ್ಲೇ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಕೆ ಮಾಡಿರುವುದು ವಿಶೇಷವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries