HEALTH TIPS

No title

               43ನೇ ಮನ್ ಕಿ ಬಾತ್: 'ಕಾಮನ್'ವೆಲ್ತ್ ಕ್ರೀಡಾಕೂಟ 2018' ಭಾರತೀಯ ಸಾಧಕರನ್ನು ಕೊಂಡಾಡಿದ ಪ್ರಧಾನಿ ಮೋದಿ
    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 43ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ನಕ್ಷತ್ರದಂತೆ ಮಿಂಚಿದ ಭಾರತೀಯ ಸಾಧಕರನ್ನು ಕೊಂಡಾಡಿದ್ದಾರೆ.
    ನಮ್ಮ ಕ್ರೀಡಾಪಟುಗಳು ದೇಶದ ನಿರೀಕ್ಷೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಇದರಂತೆ ಒಂದಾಂದರಂತೆ ಒಂದು ಒಂದಾರಂತೆ ಒಂದು ಪದಕಗಳನ್ನು ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. 2018 ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದ್ದಾರೆಂದು ಹೇಳಿದ್ದಾರೆ.
ಒಂದೊಮ್ಮೆ ಸಮಯವಿತ್ತು... ಇಂದು ಯಾವ ಕ್ರೀಡಾಪಟು ಆಡುತ್ತಾರೆಂದು ಆಲೋಚಿಸುತ್ತಿದ್ದೆವು. ಆದರೆ, ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ವಾತಾವರಣ ನಿಮರ್ಾಣವಾಗಿದೆ. ಇಡೀ ದೇಶ ಹಾಗೂ ದೇಶದ ಜನತೆ ಹಬ್ಬವನ್ನು ಆಚರಿಸುತ್ತಿದೆ.
   ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಅತ್ಯುದ್ಭುತವಾಗಿ ಸಾಧನೆ ಮಾಡಿದ್ದಾರೆ. ದೇಶದ ಹೆಮ್ಮೆ ಹೆಚ್ಚಿಸಿದ ಎಲ್ಲಾ ಮಹಿಳಾ ಕ್ರೀಡಾಪಟುಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
   26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಬಾರತಕ್ಕೆ ಗೆದ್ದು ತಂದ ಭಾರತೀಯ ಕ್ರೀಡಾಪಟುಗಳು, ಅಲ್ಲಿ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಮೊಳಗಿಸಿದ ಕ್ಷಣ ಬಹಳಷ್ಟು ವಿಶೇಷ ಹೆಮ್ಮೆ ಹಾಗೂ ಸಂತೋಷವನ್ನು ತಂದಿತು. ಮಹಿಳಾ ಕ್ರೀಡಾಪಡುಗಳು ಭಾರತದ ಹೆಮ್ಮೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ದೇಶದ ಮೂಲಗಳಿಂದಗಳಿಂದ, ಸಣ್ಣ ಸಣ್ಣ ನಗರಗಳಿಂದ ಬಂದಿರುತ್ತಾರೆ, ಇಂತಹ ಕ್ರೀಡಾಪಟುಗಳು ಸಾಕಷ್ಟು ಸಂಕಷ್ಟಗಳು ಹಾಗೂ ಏಳುಬೀಳುಗಳ್ನು ನೋಡಿರುತ್ತಾರೆ. 2018 ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದ ಮೂರನೇ ಯಶಸ್ವೀ ಕ್ರೀಡಾಕೂಟವಾಗಿದೆ ಎಂದು ತಿಳಿಸಿದ್ದಾರೆ.
   ಬಳಿಕ 1998ರ ಭಾರತದ ಅಣುಶಕ್ತಿ ಪರೀಕ್ಷೆ ಕುರಿತು ಮಾತನಾಡಿದ ಅವರು, ಪರೀಕ್ಷೆಗಳು ಮುಖ್ಯವಾಗಿದ್ದವು. ಆದರೆ, ಆ ಪರೀಕ್ಷೆಗೆ ಅನುಸರಿಸಿದ್ದ ವಿಧಾನಗಳೂ ಕೂಡ ಅತ್ಯಂತ ಪ್ರಮುಖವಾಗಿತ್ತು. ಈ ಪರೀಕ್ಷೆ ವಿಶ್ವಕ್ಕೆ ಭಾರತದ ಶಕ್ತಿ ಅರಿಯುವಂತಾಗಿತ್ತು. ಮೇ ತಿಂಗಳಿಗೆ ಅಣುಶಕ್ತಿ ಪರೀಕ್ಷಿಸಿ 20 ವರ್ಷಗಳು ಕಳೆಯುತ್ತವೆ. ದೇಶದ ಸಾಧನೆಗಳನ್ನು ಹೆಮ್ಮೆ ಪಡುವುದನ್ನು ನಾವು ಮುಂದುವರೆಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ನಾಯಕತ್ವ ಹಾಗೂ ಎಲ್ಲಾ ವಿಜ್ಞಾನಿಗಳ ಶ್ರಮಕ್ಕೆ ನಾವು ಸೆಲ್ಯೂಟ್ ಹೊಡೆಯುತ್ತೇವೆಂದಿದ್ದಾರೆ.
ಬಳಿಕ ಜಲ ಸಂರಕ್ಷಣೆ ಕುರಿತು ಪ್ರಸ್ತಾಪಿಸಿದ ಮೋದಿಯವರು, ತಮಿಳುನಾಡಿ ಕೆಲವು ದೇಗುಲಗಳಲ್ಲಿ ಅನುಸರಿಸುತ್ತಿರುವ ಜಲ ಸಂರಕ್ಷಣೆ ಕ್ರಮಗಳ ಬಗ್ಗೆ ವಿವರಿಸಿದರು. ರವೀಂದ್ರನಾಥ ಠಾಗೋರ್ ಅವರನ್ನು ನೆನಪಿಸಿಕೊಂಡ ಪ್ರಧಾನಿ ರಮ್ಜಾನ್ ಉಪವಾಸ ಹಾಗೂ ಬುದ್ಧ ಪೂಣರ್ಿಮಾ ಕುರಿತಂತೆ ಮಾತನಾಡಿದರು.
   ತಮ್ಮ ಭಾಷಣದಲ್ಲಿ ಯೋಗ ಪ್ರಯೋಜನಗಳನ್ನು ವಿವರಿಸಿದ ಮೋದಿಯವರು ತ್ರಿಕೋನಾಸನ ಭಂಗಿಗಳನ್ನು ಚಿತ್ರಿಸುವ 3ಡಿ ಅನಿಮೇಟೆಡ್ ವಿಡಿಯೋ ಬಗ್ಗೆ ಪ್ರಸ್ತಾಪಿಸಿದರು.
ಆರೋಗ್ಯ ವಲಯದ ಬಗ್ಗೆ ಗಮನಹರಿಸಬೇಕಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಜಾಗೃತಿಗಳು ಅಗತ್ಯವಾಗಿದೆ. ಫಿಟ್ ಇಂಡಿಯಾ ಮೂವ್'ಮೆಂಡ್'ಗೆ ಆದ್ಯತೆ ನೀಡಿ ಎಂದು ಹೇಳಿದರು. ಇದಕ್ಕೆ ಬೆಂಬಲ ನೀಡುವಂತೆ ಕಳೆದ ತಿಂಗಳು ಮಾಡಿದ್ದ ಮನವಿಗೆ ಸ್ಪಂದಿಸಿರುವುದಕ್ಕೆ ದೇಶದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿಯೂ ತಿಳಿಸಿದರು.
ಬಳಿಕ ಸ್ವಚ್ಛ ಭಾರತದ ಅಭಿಯಾನ ಕುರಿತಂತೆ ಸ್ವಚ್ಛ ಭಾರತ್ ಇಂಟನರ್್ ಶಿಪ್'ನ್ನು ಪ್ರಧಾನಿ ಮೋದಿಯವರು ಇದೇ ವೇಳೆ ಘೋಷಣೆ ಮಾಡಿದ್ದಾರೆ.
ಯುವಕ-ಯುವತಿ ಜೊತೆಗಾರರಿಗಾಗಿ ಇಂದು ನಾನು ವಿಶೇಷವಾಗಿ ನಿಮಗೆಂದೇ ಇಂಟನರ್್'ಶಿಪ್'ನ್ನು ಘೋಷಣೆ ಮಾಡುತ್ತಿದ್ದೇನೆ. ಭಾರತ ಸಕರ್ಾರ ಮೂರು ಸಚಿವಾಲಯಗಳು ಸ್ವಚ್ಛ ಭಾರತ ಸಮ್ಮರ್ ಇಂಟನರ್್ ಶಿಪ್ ನಡೆಸಲಿದೆ. ದೇಶ ಹಾಗೂ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಬಯಸುತ್ತಿರುವ ಕಾಲೇಜು ವಿದ್ಯಾಥರ್ಿಗಳು ಎನ್'ಸಿಸಿ, ಎನ್'ಎಸ್ಎಸ್, ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕರ್ತರು, ಹಾಗೂ ದೇಶದ ಜನತೆಗೆ ಇದೊಂದು ಅವಕಾಶವಾಗಿದೆ ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries