HEALTH TIPS

No title

                   ಶಬರಿಮಲೆ ತೀಪರ್ು : ಜಾರಿ ಬಗ್ಗೆ  ಸಮಾಲೋಚಿಸಲು ದೇವಸ್ವಂ ಮಂಡಳಿ ಅ.3ರಂದು ತುತರ್ು ಸಭೆ
    ಕಾಸರಗೋಡು: ಶಬರಿಮಲೆ ಶ್ರೀ ಧರ್ಮಶಾಸ್ತಾ  ಸನ್ನಿಧಿಗೆ ಎಲ್ಲ  ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋಟರ್್ ನೀಡಿರುವ ಮಹತ್ವದ ತೀಪರ್ಿನ ಹಿನ್ನೆಲೆಯಲ್ಲಿ  ಅದನ್ನು  ಜಾರಿಗೊಳಿಸುವ ಬಗ್ಗೆ  ಚಚರ್ೆ ನಡೆಸಲು ತಿರುವಿದಾಂಕೂರು ದೇವಸ್ವಂ ಮಂಡಳಿಯು ಅಕ್ಟೋಬರ್ 3ರಂದು ತುತರ್ು ಸಭೆ ನಡೆಸಲಿದೆ.
ಸುಪ್ರೀಂಕೋಟರ್್ ನೀಡಿರುವ ತೀರ್ಪನ್ನು  ಜಾರಿಗೊಳಿಸಬೇಕಾಗಿರುವ ಹೊಣೆಗಾರಿಕೆ ದೇವಸ್ವಂ ಮಂಡಳಿಗೆ ಸೇರಿದ್ದಾಗಿದೆ. ಅದನ್ನು  ಮಂಡಳಿಯು ಕಾರ್ಯರೂಪಕ್ಕೆ ತರಲಿದೆ ಎಂದು ರಾಜ್ಯ ಮುಜುರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
   ಇದೇ ವೇಳೆ ಸುಪ್ರೀಂಕೋಟರ್್ನ ತೀರ್ಪನ್ನು  ಅದೇ ರೀತಿಯಲ್ಲಿ  ಅನುಷ್ಠಾನಕ್ಕೆ ತರುವುದು ದೇವಸ್ವಂ ಮಂಡಳಿಗೆ ಒಂದು ದೊಡ್ಡ  ಸವಾಲಾಗಲಿದೆ. ಎಲ್ಲ  ಮಹಿಳೆಯರು ಶಬರಿಮಲೆಗೆ ತೆರಳಿದರೆ ಅದಕ್ಕೆ ಹೊಂದಿಕೊಂಡು ಶಬರಿಮಲೆ ಮತ್ತು  ಪಂಪಾದಲ್ಲಿ  ಹೆಚ್ಚಿನ ಮೂಲಭೂತ ಸೌಕರ್ಯ ಏರ್ಪಡಿಸಬೇಕಾಗಿ ಬರಲಿದೆ.
   ಮಹಿಳೆಯರಿಗೆ ಪ್ರತ್ಯೇಕ ಸುರಕ್ಷಿತ ವಾಸ ಸೌಲಭ್ಯ, ಸ್ನಾನದ ಕೊಠಡಿ, ಶೌಚಾಲಯ ಇತ್ಯಾದಿ ಸೌಕರ್ಯಗಳನ್ನು  ಒದಗಿಸಿಕೊಡಬೇಕಾಗಿ ಬರಲಿದೆ. ಅಲ್ಲದೆ ವಿಶೇಷ ಮಹಿಳಾ ಪೊಲೀಸರನ್ನು  ಶಬರಿಮಲೆಯಲ್ಲಿ  ಕರ್ತವ್ಯಕ್ಕಾಗಿ ನೇಮಿಸಬೇಕಾಗಿ ಬರಲಿದೆ. ಶಬರಿಮಲೆಯಲ್ಲಿ  ಅಗತ್ಯದ ಸ್ಥಳ ಸೌಕರ್ಯ ಕೊರತೆಯೂ ಇದೆ. ಈ ಸಮಸ್ಯೆ ತಿರುವಿದಾಂಕೂರು ದೇವಸ್ವಂ ಮಂಡಳಿ ಮಾತ್ರವಲ್ಲ, ಕೇರಳದ ಗೃಹ, ಮುಜುರಾಯಿ, ನೀರಾವರಿ ಇಲಾಖೆಗಳಿಗೂ ಒಂದು ದೊಡ್ಡ  ಸವಾಲಾಗಲಿದೆ.
   ಕಳೆದ ಎರಡು ವರ್ಷಗಳ ಹಿಂದೆ ಶಬರಿಮಲೆ ಮತ್ತು ಸುತ್ತುಮುತ್ತಲಿನ ಪ್ರದೇಶವು ರಕ್ಷುತಾರಣ್ಯ ವ್ಯಾಪ್ತಿಯ ಅತಿ ಮುಖ್ಯ ಕೇಂದ್ರವಾಗಿ ಗುರುತಿಸಲ್ಪಟ್ಟು ಕಾಡು ಪ್ರಾಣಿಗಳಿಗೆ ಓಡಾಡಲು ತೊಂದರೆಗಳಾಗದಂತೆ ಸರಕಾರ ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ರಕ್ಷಿತಾರಣ್ಯ ವಿಭಾಗ ನಿದರ್ೇಶನ ನೀಡಿದ ಹಿನ್ನೆಲೆಯಲ್ಲಿ ರೆಸಾಟರ್್ ಸಹಿತ ಇತರ ಯಾವುದೇ ಕಟ್ಟಡಗಳನ್ನು ನಿಮರ್ಿಸಲು ನಿರ್ಬಂಧ ವಿಧಿಸಲಾಗಿತ್ತು. ಜೊತೆಗೆ ಈಗಿರುವ ಅನಗತ್ಯ ಕಟ್ಟಡಗಳನ್ನು ಮುರಿದು ತೆಗೆಯಲೂ ಅದು ನಿದರ್ೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕಾನೂನು ಜಾರಿಯಾಗುವಾಗ ಉಂಟಾಗುವ ತೊಡಕುಗಳಿಗೆ ಕೈಗೊಳ್ಳುವ ಕ್ರಮದ ಬಗ್ಗೆಯೂ ಚಚರ್ೆ ನಡೆಯಲಿದೆ.   
   ತೀಪರ್ು ಬಗ್ಗೆ  ಮೇಲ್ಮವಿಗೆ ಸಿದ್ಧತೆ : ಶಬರಿಮಲೆಗೆ ಎಲ್ಲ  ವಯೋಮಿತಿಯವರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋಟರ್್ ನೀಡಿದ ತೀರ್ಪನ್ನು  ಪ್ರಶ್ನಿಸಿ ಮರುಪರಿಶೀಲನಾ ಅಜರ್ಿ ಸಲ್ಲಿಸಲು ಪಂದಳಂ ರಾಜ ಕುಟುಂಬ ತೀಮರ್ಾನಿಸಿದೆ. ಜೊತೆಗೆ  ಶ್ರೀ ಅಯ್ಯಪ್ಪ  ಧರ್ಮ ಸೇನೆ ಕೂಡ ತೀಪರ್ಿನ ವಿರುದ್ಧ  ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಮಧ್ಯೆ ನ್ಯಾಯಾಲಯದ ತೀಪರ್ಿಗೆ ಶಬರಿಮಲೆ ತಂತ್ರಿವರ್ಯ ರಾಜೀವರ್ ಕಂಠರರ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಆದರೆ ಕೇರಳದ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರಕಾರ  ತೀರ್ಪನ್ನು  ಸ್ವಾಗತಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries