HEALTH TIPS

No title

            ನೇತಾಜಿಯನ್ನು ಕೊಂದದ್ದು ರಷ್ಯಾ ಮಾಜಿ ಅಧ್ಯಕ್ಷ ಸ್ಟಾಲಿನ್: ಸುಬ್ರಮಣ್ಯನ್ ಸ್ವಾಮಿ
    ಅಗರ್ತಲಾ: ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದನು. ನೇತಾಜಿ 1945ರ ವಿಮಾನ ದುರಂತದಲ್ಲಿ ಸಾವನ್ನಪ್ಪಿರಲಿಲ್ಲ ಎಂದು ಬಿಜೆಪಿ ಮುಖಂಡರಾದ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.
    ಅಗರ್ತಲಾದಲ್ಲಿ ಸಂಸ್ಕೃತ್ ಗೌರವ ಸಂಘಟನೆ  ಭಾನುವಾರ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಬೋಸ್ ತಾವು ಸೋವಿಯತ್ ರಾಷ್ಟ್ರದಲ್ಲಿ ರಕ್ಷಣೆ ಪಡೆದಿದ್ದು ಅವರು ಅಲ್ಲಿಯೇ ಹತ್ಯೆಗೀಡಾದರು ಎಂದರು.
  ಬೋಸ್ 1945 ರಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ.ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು. ಇದನ್ನು ಅಂದು ನೆಹರೂ ಮತ್ತು ಜಪಾನಿಯರು ಹುಟ್ಟು ಹಾಕಿದ್ದಾರೆ. ಸುಭಾಷ್ ಚಂದ್ರ ಬೋಸ್ ರಷ್ಯಾದಲ್ಲಿ ಆಶ್ರಯ ಬಯಸಿದ್ದರು. ಕಮಿನಿಸ್ಟ್ ರಷ್ಯಾದಲ್ಲಿ ಬೋಸ್ ಇದ್ದದ್ದು ನೆಹರೂ ಅವರಿಗೆ ಸಹ ತಿಳಿದಿತ್ತು. ಅಲ್ಲಿ ಅವರನ್ನು ರಷ್ಯಾದ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ವ್ಯವಸ್ಥಿತ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ ಎಂದು ಸ್ವಾಮಿ ಹೇಳಿದ್ದಾರೆ.
     75 ವರ್ಷಗಳ ಹಿಂದೆಯೇ ಸಿಂಗಾಪುರದಲ್ಲಿ ರೂಪುಗೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸಕರ್ಾರದ ಕಾರಣ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು.  ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಆಟ್ಲೆ 1948 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ "ಬ್ರಿಟೀಷ್ ವಸಾಹತುಷಾಹಿ ಜನರಿಗಿಂತ ದೊಡ್ಡ ಪ್ರಮಾಣದಲ್ಲಿದ್ದ ಭಾರತೀಯರೇನಾದರೂ ಶಸ್ತ್ರಾಸ್ತ್ರ ಹಿಡಿದು ಬ್ರಿಟೀಷರ ವಿರುದ್ಧ ಹೋರಾಡಿದರೆ ಆಗ ಅದು ಬ್ರಿಟೀಷರಿಗೆ ಮಾರಕವಾಗಲಿತ್ತು" ಎಂದು ಒಪ್ಪಿಕೊಂಡಿದ್ದರು ಎನ್ನುವುದಾಗಿ ಸ್ವಾಮಿ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries