HEALTH TIPS

ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ!

             
         ಬೀಜಿಂಗ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸಕರ್ಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚಚರ್ೆಗೆ ಕಾರಣವಾಗಿದೆ.
          ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಕ್ಕುಇನ ಚೀನಾ ರಾಯಭಾರ ಕಛೇರಿ ಮೇಲೆ ಭಯೋತ್ಪಾದಕ ದಾಳಿ ನಡೆಇದ್ದು ಆ ಸಂಬಂಧ ವರದಿ ಪ್ರಸಾರ ಮಾಡುವ ಸಮಯದಲ್ಲಿ ಚೀನಾ ಸಕರ್ಾರಿ ಸ್ವಾಮ್ಯದ ಸಿಜಿಟಿಎನ್ ಸುದ್ದಿವಾಹಿನಿ ಪಿಓಕೆಯನ್ನು ಭಾರತದ ಭಾಗ ಎಂದು ತೋರಿಸುವ ನಕ್ಷೆ ಯನ್ನು ಪ್ರಸಾರ ಮಾಡಿದೆ.
       ಜಮ್ಮು ಕಾಶ್ಮೀರ ನಖ್ಷೆಯೊಡನೆ ಪಾಕ್ ಆಕ್ರಮಿತ ಕಾಶ್ಮೀರವನ್ನೂ ತೋರಿಸಿ ಇದು ಭಾರತ ಆಡಳಿತ ಪ್ರದೇಶ ಎಂದು ಸುದ್ದಿ ವಾಹಿನಿ ಹೇಳಿದೆ.
         ಚೀನಾ ರಾಯಭಾರಿ ಕಛೇರಿ ಮೇಲಿನ ದಾಳಿಯ ವೇಳೆ ತನ್ನ ನಾಗರಿಕರ ರಕ್ಷಣೆಗೆ ಪಾಕಿಸ್ತಾನ ವಿಫಲವಾಗಿದ್ದು ಈ ಸಂಬಂಧ ಚೀನಾ ಪಾಕ್ ವಿರುದ್ಧ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ.
             ಡಿಸೆಂಬರ್ 10ಕ್ಕೆ ಭಾರತ-ಚೀನಾ ಸೇನಾ ಸಮರಾಭ್ಯಾಸವಿದೆ, ಅಲ್ಲದೆ ಕತರ್ಾರ್ ಪುರ್ ಕಾರಿಡಾರ್ ಸಂಬಂಧ ಸಹ ಚಚರ್ೆ ನಡೆಯುತ್ತಿದೆ. ಈ ವೇಳೆ ಚೀನಾ ಪಿಓಕೆಯನ್ನು ಭಾರತದ ಭಾಗವೆಂದು ತೋರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇನ್ನು ಸಿಜಿಟಿಎನ್ ನಲ್ಲಿ ಇದಾಗಲೇ ಸಿದ್ದವಾಗಿರುವ ನಕಾಶೆಗಳಿರುತ್ತದೆ. ಅದನ್ನು ಬದಲಿಸಲು ವಾಹಿನಿ ಸಿಬ್ಬಂದಿಗಳಿಗೆ ಸಾಧ್ಯವಿಲ್ಲ ಎನ್ನಲಾಗಿದೆ.ಉನ್ನತಾಧಿಕಾರಿಗಳ ಸೂಚನೆ ಇಲ್ಲದೆ ಪ್ರೊಡಕ್ಷನ್ ಸಿಬ್ಬಂದಿಗಳು ಈ ಸಂಬಂಧ ನಿಧರ್ಾರ ಕೈಗೊಳ್ಳುವಂತಿಲ್ಲ ಎಂದು ಮೂಲಗಳು ಹೇಳಿದೆ.
         ಮತ್ತೊಂದು ವಿಶೇಷವೆಂದರೆ ಚೀನಾ ತನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ನೀತಿ ಬದಲಾಯಿಸುವ ಮುನ್ನ ದೇಶದ ಅಧಿಕೃತ ಮಾದ್ಯಮಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸುತ್ತಾರೆ.ಆದರೆ ಈಗ ಮಾಡಿದ ಬದಆವಣೆ ಅದೇನೂ ಅಧಿಕೃತ ಎನ್ನಲಾಗುವುದಿಲ್ಲ  ಆದರೆ ಚೀನಾ ಈ ಹಿಂದೆ ಎಂದೂ ಈ ರೀತಿಯಾಗಿ ಪಿಓಕೆಯನ್ನು ಭಾರತದ್ದೆಂದು ತೋರಿಸುವ ನಕ್ಷೆ ಪ್ರಸಾರ ಮಾಡಿರಲಿಲ್ಲ ಎಂಬ ಅಂಶ ಗಮನಾರ್ಹವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries