HEALTH TIPS

ಕಾಶ್ಮೀರದಲ್ಲೀಗ ಯಾವ ನಿಬರ್ಂಧವಿಲ್ಲ, 370ನೇ ವಿಧಿ ರದ್ದತಿಗೆ ಜಾಗತಿಕ ಬೆಂಬಲವಿದೆ: ಅಮಿತ್ ಶಾ

   
       ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಈಗ ಯಾವುದೇ ನಿಬರ್ಂಧಗಳಿಲ್ಲ ಮತ್ತು 370 ನೇ ವಿಧಿ ದ್ದುಗೊಳಿಸುವ ಕ್ರಮಕ್ಕೆ ಇಡೀ ಜಗತ್ತು ಬೆಂಬಲ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
     ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ಹೆಜ್ಜೆಯಿಂದಾಗಿ ಮುಂದಿನ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾಗಲಿದೆ ಎಂದು ಶಾ ಪ್ರತಿಪಾದಿಸಿದರು.
     ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ 1948 ರಲ್ಲಿ ವಿಶ್ವಸಂಸ್ಥೆಯನ್ನು ಸಂಪರ್ಕಿಸಿದ್ದ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ನಡೆ ಹಿಮಾಲಯಕ್ಕಿಂತ ದೊಡ್ಡ ತಪ್ಪು ಎಂದು ಶಾ ದೂಷಿಸಿದ್ದಾರೆ. "1948 ರಲ್ಲಿ ಭಾರತ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ಒಯ್ದಿತ್ತು.ಇದು ಹಿಮಾಲಯಕ್ಕೂ ದೊಡ್ಡ ತಪ್ಪಾಗಿತ್ತು." ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ (ಎನ್‍ಎಂಎಂಎಲ್) ಸಕಲ್ಪ ಫಾರ್ಮರ್ ಸಿವಿಲ್ ಸವೆರ್ಂಟ್ ಫೋರಮ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
     ಕಾಶ್ಮೀರದಲ್ಲಿನ ನಿಬರ್ಂಧಗಳ ಬಗೆಗೆ ಪ್ರತಿಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ.ಎಂದಿರುವ ಶಾ. "ನಿಬರ್ಂಧಗಳು ಎಲ್ಲಿವೆ? ಇದು ನಿಮ್ಮ ಮನಸ್ಸಿನಲ್ಲಿ ಮಾತ್ರ. ಯಾವುದೇ ನಿಬರ್ಂಧಗಳಿಲ್ಲ. ನಿಬರ್ಂಧಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ" ಎಂದರು."ಕಾಶ್ಮೀರದ ಎಲ್ಲಾ 196 ಪೊಲೀಸ್ ಠಾಣೆಗಳಲ್ಲಿ ಕಫ್ರ್ಯೂ ತೆಗೆದುಹಾಕಲಾಗಿದೆ, ಮತ್ತು ಎಂಟು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಮಾತ್ರ ಸೆಕ್ಷನ್  144 ಅನ್ನು ವಿಧಿಸಲಾಗಿದ್ದು, ಅಲ್ಲಿ ಐದು ಅಥವಾ ಹೆಚ್ಚಿನ ವ್ಯಕ್ತಿಗಳು ಸೇರಲು ಸಾಧ್ಯವಿಲ್ಲ.ಜನರು ಕಾಶ್ಮೀರದಲ್ಲಿ ಎಲ್ಲಿ ಬೇಕಾದಲ್ಲಿ ಓಡಾಡಲು ಮುಕ್ತ ವಾತಾವರಣವಿದೆ.ಭಾರತದ ಉಳಿದ ಭಾಗಗಳಿಂದ ಅನೇಕ ಪತ್ರಕರ್ತರು ಸಹ ನಿಯಮಿತವಾಗಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ"  ಶಾ ಹೇಳಿದ್ದಾರೆ.
      ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನವನ್ನು ಉಲ್ಲೇಖಿಸಿ, 370 ನೇ ವಿಧಿ ಕುರಿತು ಭಾರತದ ಕ್ರಮವನ್ನು ಎಲ್ಲಾ ವಿಶ್ವ ನಾಯಕರು ಬೆಂಬಲಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
     ಎಲ್ಲಾ ವಿಶ್ವ ನಾಯಕರು ಏಳು ದಿನಗಳ ಕಾಲ (ನ್ಯೂಯಾಕ್ರ್ನಲ್ಲಿ) ಒಟ್ಟುಗೂಡಿದ್ದರು. ಒಬ್ಬ ನಾಯಕ ಕೂಡ ಈ ವಿಷಯವನ್ನು  (ಜಮ್ಮು ಮತ್ತು ಕಾಶ್ಮೀರದ) ವಿರೋಧಿಸಿಲ್ಲ.. ಇದು ಪ್ರಧಾನಮಂತ್ರಿಯ ದೊಡ್ಡ ರಾಜತಾಂತ್ರಿಕ ವಿಜಯವಾಗಿದೆ" ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಷ್ಟು ಹಳೆಯದಾದ ಉಗ್ರಗಾಮಿತ್ವದಲ್ಲಿ 41,800 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವರು ಹೇಳಿದರು ಆದರೆ ಜವಾನರು,(ಸೈನಿಕರು) ಅವರ ವಿಧವೆಯರು ಅಥವಾ ಅನಾಥ ಮಕ್ಕಳ ಹಕ್ಕುಗಳ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಯಾರೂ ಎತ್ತಲಿಲ್ಲ. ಆದರೆ ಜನರು ಕೆಲವು ದಿನಗಳವರೆಗೆ ಮೊಬೈಲ್ ಸಂಪರ್ಕದಿಂದ ವಂಚಿತರಾದಾಗ ಮಾತ್ರ ಎಲ್ಲರೂ ಪ್ರತಿಭಟಿಸಲು ಕೂಗೆಬ್ಬಿಸಲು ಮುಂದಾಗುತ್ತಾರೆ. ಫೋನ್ ಸಂಪರ್ಕದ ಕೊರತೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ 10,000 ಹೊಸ ಲ್ಯಾಂಡ್‍ಲೈನ್ ಸಂಪರ್ಕಗಳನ್ನು ನೀಡಲಾಗಿದ್ದು, ಕಳೆದ ಎರಡು ತಿಂಗಳಲ್ಲಿ 6,000 ಪಿಸಿಒಗಳು ಸಹ ಬಂದಿವೆ ಎಂದು ಶಾ ಹೇಳಿದರು. "370 ನೇ ವಿಧಿ ನಿರ್ಧಾರವು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತದೆ" ಎಂದು ಅವರು ಹೇಳಿದರು, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಶೀಘ್ರದಲ್ಲೇ ಸಂಪೂರ್ಣವಾಗಿ ಸಾಮಾನ್ಯವಾಗಲಿದೆ.
      1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ 631 ರಾಜ ರಾಜ್ಯಗಳಿದ್ದವು ಅವುಗಳಲ್ಲಿ  630 ಅನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಒಂದನ್ನು ಪ್ರಧಾನಿ ನೆಹರೂ ನಿರ್ವಹಿಸಿದ್ದರು. "630 ರಾಜ ರಾಜ್ಯಗಳನ್ನು ಸಂಪೂರ್ಣವಾಗಿ ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಲಾಯಿತು. ಆದರೆ 1947 ರಿಂದ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯಾಗಿ ಉಳಿದಿದೆ" ಎಂದು ಅವರು ಹೇಳಿದರು. ಅಕ್ಟೋಬರ್ 27, 1947 ರಂದು ಭಾರತೀಯ ಸೇನೆಯು ಕಾಶ್ಮೀರವನ್ನು ತಲುಪಿ ಪಾಕಿಸ್ತಾನದ ದಾಳಿಕೋರರನ್ನು ಸೋಲಿಸಿತ್ತು.ಅದು ಪಿಒಕೆ ಕಡೆಗೆ ಸಾಗುತ್ತಿತ್ತು ಮತ್ತು ಅವರು ವಿಜಯದ ಅಂಚಿನಲ್ಲಿದ್ದರು. "ಆದರೆ ಇದ್ದಕ್ಕಿದ್ದಂತೆ ಅಂದಿನ ಸರ್ಕಾರ ಕದನ ವಿರಾಮವನ್ನು ಘೋಷಿಸಿತು. ನಾವು ಯುದ್ಧವನ್ನು ಗೆಲ್ಲಲು ಹೊರಟಿದ್ದಾಗ ಕದನ ವಿರಾಮವನ್ನು ಘೋಷಿಸುವ ಅವಶ್ಯಕತೆ ಏನಿತ್ತು? ಕದನ ವಿರಾಮವನ್ನು ಘೋಷಿಸದಿದ್ದರೆ, ಪಿಒಕೆ ಈಗ ಭಾರತದ ಭಾಗವಾಗುತ್ತಿತ್ತು" ಎಂದು ಅವರು ಹೇಳಿದರು.
      "370 ನೇ ವಿಧಿ, ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣವಾಗಿ ಸಂಯೋಜಿಸಲಾಗಿಲ್ಲ. 370 ನೇ ವಿಧಿಯಿಂದಾಗಿ ಅಲ್ಲಿ ಭ್ರಷ್ಟಾಚಾರವು ಪ್ರವರ್ಧಮಾನಕ್ಕೆ ಬಂದಿದೆ. 370 ನೇ ವಿಧಿಯ ಕಾರಣದಿಂದಾಗಿ ದೇಶದ ಜನರು ಯಾವಾಗಲೂ 'ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ' ಎಂದು ಹೇಳಬೇಕಾಗಿತ್ತು. ನಾವು ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್ ಅಥವಾ ದೆಹಲಿಯ ಬಗ್ಗೆ ಮಾತನಾಡುವಾಗ ಹಾಗೆ ಹೇಳಬೇಕಾಗಿಲ್ಲ" ಎಂದು ಹೇಳಿದರು. 
         370 ನೇ ವಿಧಿಯು ಹಿಂದಿನ ಜನ ಸಂಘ ಮತ್ತು ನಂತರ ಬಿಜೆಪಿಗೆ ಮೊದಲಿನಿಂದಲೂ ಒಂದು ಸಮಸ್ಯೆಯಾಗಿದೆ ಎಂದು ಅವರು ಹೇಳಿದರು. "ನಾವು ಇದರ ವಿರುದ್ಧ 11 ಆಂದೋಲನಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಜನ ಸಂಘ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಕೂಡ ಅದಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ನಾವು ಮೂರನೇ ತಲೆಮಾರಿನ ನಾಯಕರು.  ನೆಹರೂ ಅವರು ತಪ್ಪುಗಳನ್ನು ಅರಿತುಕೊಂಡಾಗ (ಮಾಜಿ ಮುಖ್ಯಮಂತ್ರಿ) ಶೇಖ್ ಅಬ್ದುಲ್ಲಾ ಅವರನ್ನು 11 ವರ್ಷಗಳ ಕಾಲ ಜೈಲಿನಲ್ಲಿರಿಸಿದ್ದರು.ಈಗ ಇನ್ನೂ ಎರಡು ತಿಂಗಳಾಗಿಲ್ಲ.ಆದರೆ ಜನರು ತುಂಬಾ ಮಾತನಾಡಿದ್ದಾರೆ "ಎಂದು ಅವರು ಹೇಳಿದರು.
     1987ರ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತು ಹೇಳಿದ ಶಾ . "ಆ ಚುನಾವಣೆಗಳಲ್ಲಿ, 10 ಮತಗಳಿದ್ದರೂ ಶಾಸಕರನ್ನು ಆಯ್ಕೆ ಮಾಡಲಾಯಿತು. 1987 ರ ಚುನಾವಣೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಮೂಲ ಕಾರಣ" ಎಂದು ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries