HEALTH TIPS

ಡಿಆರ್ ಡಿಒ ದಿಂದ ಭೂದಾಳಿ ಸಾಮಥ್ರ್ಯದ ಬ್ರಹ್ಮೋಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ

     
     ನವದೆಹಲಿ: ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.
    ಒಡಿಶಾದ ಬಾಲಾಸೋರ್ ನಲ್ಲಿ ಬ್ರಹ್ಮೋಸ್ ಭೂದಾಳಿ ಮಾದರಿ ಕ್ಷಿಪಣಿಯನ್ನು ನಿನ್ನೆ ಪರೀಕ್ಷೆಗೊಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿ ಗುರಿ ಮುಟ್ಟಿದೆ ಎನ್ನಲಾಗಿದೆ. ಕ್ಷಿಪಣಿ ರವಾನೆ, ಸಂಗ್ರಹಣೆ ಮತ್ತು ಉಡಾವಣೆಗಾಗಿ ಸಾರಿಗೆ ಉಡಾವಣಾ ಡಬ್ಬಿ (ಟಿಎಲ್‍ಸಿ-ಟ್ರಾನ್ಸ್ ಪೋರ್ಟ್ ಲಾಂಚ್ ಕ್ಯಾನಿಸ್ಟರ್) ಮೂಲಕ ಉಡಾವಣೆ ಮಾಡಲಾಯಿತು. ಭೂ ದಾಳಿ ಸಾಮಥ್ರ್ಯದ ಈ ಬ್ರಹ್ಮೋಸ್ ಕ್ಷಿಪಣಿ ಸುಮಾರು 450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮಥ್ರ್ಯ ಹೊಂದಿದೆ. ಅಂತೆಯೇ ಆಗಸದಲ್ಲಿ ಗರಿಷ್ಠ 15 ಕಿ.ಮೀ ಎತ್ತರದವರೆಗೂ ಹಾರುವ ಈ ಕ್ಷಿಪಣಿ ಭೂಮಿಯ ಮೇಲ್ಮೈ ಮೇಲೆ ಕನಿಷ್ಠ 15 ಮೀಟರ್ ಎತರದಲ್ಲಿ ಹಾರಾಟ ನಡೆಸುವ ಸಾಮಥ್ರ್ಯಹೊಂದಿದೆ.
      ಈ ಬ್ರಹ್ಮೋಸ್ ಕ್ಷಿಪಣಿ ಅಪ್ ಗ್ರೇಡೆಡ್ ಗೈಡೆಡ್ ಸಿಸ್ಟಮ್ ಹೊಂದಿದ್ದು, ಇದರಿಂದ ಕ್ಷಿಪಣಿ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವಂತೆ ನಿಯಂತ್ರಿಸಬಹುದಾಗಿದೆ.2017 ಮಾರ್ಚ್ 11ರಂದು ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು.  ಇದೀಗ ಅದರ ದೂರಗಾಮಿ ಸಾಮಥ್ರ್ಯವನ್ನು ವೃದ್ಧಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗಿದೆ. ಈ ಕ್ಷಿಪಣಿಯ ವಿಶೇಷತೆ ಎಂದರೆ ಈ ಹಿಂದಿನ 290 ಕಿ.ಮೀ ದೂರ ಸಾಮಥ್ರ್ಯದ ಕ್ಷಿಪಣಿ ಬಳಕೆ ಮಾಡುತ್ತಿದ್ದ ಅಷ್ಟೇ ಪ್ರಮಾಣದ ಇಂಧನವನ್ನು ಈ ಕ್ಷಿಪಣಿಯೂ ಬಳಕೆ ಮಾಡಿಕೊಂಡು 450 ಕಿ.ಮೀ ದೂರದ ಗುರಿಗಳನ್ನು ಯಶಸ್ವಿಯಾಗಿ ಛಿದ್ರ ಮಾಡುತ್ತದೆ.  ಅಲ್ಲದೆ ಕ್ಷಿಪಣಿಯ ಇಂಧನ ಬಳಕೆಯನ್ನು ಕಂಪ್ಯೂಟರ್ ಆಧಾರಿತ ಪ್ರೋಗ್ರಾಮ್ ಗಳಿಂದ ನಿಯಂತ್ರಿಸಬಹುದು ಎಂದು ವಿಜ್ಞಾ ನಿಗಳು ಹೇಳಿದ್ದಾರೆ. ಜೊತೆಗೆ ಈ ಕ್ಷಿಪಣಿಯು ಸುಮಾರು 200 ರಿಂದ 300 ಕಿಲೋಗ್ರಾಂ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯು ಸಾಮಥ್ರ್ಯವನ್ನು ಕೂಡ ಹೊಂದಿದೆ.
      ಈ ಭೂ ದಾಳಿ ಸಾಮಥ್ರ್ಯದ ಕ್ಷಿಪಣಿಯು ಫೈರ್ ಅಂಡ್ ಫರ್ಗೆಟ್ (ಕ್ಷಿಪಣಿ ಉಡಾಯಿಸಿ, ಮರೆತು ಬಿಡಿ) ಸಾಮಥ್ರ್ಯವನ್ನು ಹೊಂದಿದೆ. ಅಂದರೆ ನಿಖರ ದಾಳಿಯನ್ನು ಕ್ಷಿಪಣಿಗೆ ತೋರಿ ಉಡಾವಣೆ ಮಾಡಿದರೆ ಕ್ಷಿಪಣಿ ಆ ಗುರಿಯು ಹೇಗೇ ಚಲಿಸಿದರೂ ಅದನ್ನು ಕ್ಷಣ ಮಾತ್ರದಲ್ಲಿ ಛಿದ್ರ ಮಾಡುತ್ತದೆ. ಇದಕ್ಕೆ ಕ್ಷಿಪಣಿಯಲ್ಲಿನ ನ್ಯಾವಿಗೇಷನ್ ಪ್ರೋಗ್ರಾಂ ಸಹಾಯಕವಾಗುತ್ತದೆ. ಅಲ್ಲದೆ ಈ ಕ್ಷಿಪಣಿಯು ಭೂಮಿ, ಸಮುದ್ರದ ಮೇಲಿನ ಗುರಿಗಳನ್ನು ಹೊಡೆದುರುಳಿಸುವ ಸಾಮಥ್ರ್ಯವನ್ನು ಹೊಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries