HEALTH TIPS

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ಇಂದು ನನಸಾಗಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

 
        ಅಹ್ಮದಾಬಾದ್: ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯ ಕೇವಾಡಿಯಾ ಎಂಬ ಪಟ್ಟಣದಲ್ಲಿರುವ ಪಟೇಲ್ ಅವರ ಏಕತೆ ಪ್ರತಿಮಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
        ಪಟೇಲ್ ಅವರ ಪ್ರತಿಮೆಗೆ ಪುಷ್ಪಗುಚ್ಛವಿರಿಸಿ ಪ್ರದಕ್ಷಿಣೆ ಬಂದರು. ನಂತರ ಕೇವಾಡಿಯಾದಲ್ಲಿ ನಡೆದ ಏಕತಾ ದಿವಸ ಪರೇಡ್ ನಲ್ಲಿ ಭಾಗವಹಿಸಿ ನೆರೆದ ಜನತೆಗೆ ಏಕತೆಯ ಪ್ರಮಾಣವನ್ನು ಬೋಧಿಸಿದರು. ನಂತರ ಮಾತನಾಡಿದ ಪ್ರಧಾನಿ, ನಮ್ಮ ದೇಶದ ಬಹುದೊಡ್ಡ ನಾಯಕ ಸರ್ದಾರ್ ಪಟೇಲ್ ಅವರ ಜಯಂತಿ ಸಂದರ್ಭದಲ್ಲಿ ಅವರಿಗೆ ನಮನಗಳು. ನಮ್ಮ ದೇಶಕ್ಕೆ ಅವರ ಕೊಡುಗೆ ಸ್ಮರಣೀಯವಾದದ್ದು ಎಂದು ಹೇಳಿದರು.ವೈವಿಧ್ಯತೆಯಲ್ಲಿ ಏಕತೆ ಭಾರತದ ಗುರುತಾಗಿದೆ. ನಾನು ನನ್ನ ದೇಶದ ಏಕತೆಗಾಗಿ ಈ ಪ್ರತಿಜ್ಞೆ   ತೆಗೆದುಕೊಳ್ಳುತ್ತಿದ್ದೇನೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕೆಲಸಗಳಿಂದ ಹಲವು ಪ್ರಾಂತೀಯ ರಾಜ್ಯಗಳು ಇಂದು ಒಂದಾಗಿವೆ. ದೇಶದ ಆಂತರಿಕ ಭದ್ರತೆಗೆ ನನ್ನಿಂದಾದ ಕೊಡುಗೆಯನ್ನು ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇನೆ ಎಂದರು. ಸಂವಿಧಾನ ವಿಧಿ 370 ಜಮ್ಮು-ಕಾಶ್ಮೀರವನ್ನು ವಿಭಜಿಸಿ ಅದು ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಚಟುವಟಿಕೆಗಳಿಗೆ ಹೆಬ್ಬಾಗಿಲಾಗಿತ್ತು. ಇಡೀ ದೇಶದಲ್ಲಿ ಜಮ್ಮು-ಕಾಶ್ಮೀರವೊಂದರಲ್ಲಿಯೇ 40 ಸಾವಿರಕ್ಕೂ ಅಧಿಕ ನಾಗರಿಕರನ್ನು ಭಯೋತ್ಪಾದಕರು ಸಾಯಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದರಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ನನಸಾಗಿದೆ. ಎಲ್ಲರನ್ನೂ ಒಳಗೊಂಡ ಸಮಗ್ರ ಭಾರತದ ಕನಸು ಕಾಣುತ್ತಿದ್ದರು. ಜಮ್ಮು-ಕಾಶ್ಮೀರವನ್ನು ಭಾರತದೊಳಗೆ ಸೇರಿಸಬೇಕೆಂದು ಅವರ ಇಚ್ಛಾಶಕ್ತಿಯಾಗಿತ್ತು. ಅವರ ಜಯಂತಿಯ ದಿನವಾದ ಇಂದು ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವ ನಿರ್ಧಾರವನ್ನು ಪಟೇಲ್ ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದರು. ಕಳೆದ ಭಾನುವಾರ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕೂಡ ಈ ವಿಷಯ ಪ್ರಸ್ತಾಪಿಸಿದ್ದ ಮೋದಿ, ಏಕತೆಗಾಗಿ ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕರೆ ನೀಡಿದ್ದರು.
      ಇದಕ್ಕೂ ಮುನ್ನ ಟ್ವೀಟ್ ಮಾಡಿದ ಅವರು, ಭಾರತವನ್ನು ಏಕೀಕರಿಸಿದ ಅಚಲ ವ್ಯಕ್ತಿ ಅವರು. ರೈತರ ನಾಯಕ, ಉತ್ತಮ ಆಡಳಿತಗಾರ ಮತ್ತು ಬಡವರ ಹಕ್ಕುಗಳನ್ನು ಕಾಪಾಡುವಾಗ ರಾಜಿಯಾಗದ, ಸರ್ದಾರ್ ಪಟೇಲ್ ಅವರ ಸಾಟಿಯಿಲ್ಲದ ಕೊಡುಗೆಯನ್ನು ಭಾರತ ಯಾವಾಗಲೂ ನೆನಪಿಸಿಕೊಳ್ಳುತ್ತದೆ ಎಂದು ಕೊಂಡಾಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries