HEALTH TIPS

ಬಹುಭಾಷಾ ಸಂಗಮಭೂಮಿ ಕಾಸರಗೋಡಿನಲ್ಲಿ ಕೇರಳರಾಜ್ಯ 60ನೇ ಶಾಲಾ ಕಲೋತ್ಸವಕ್ಕೆ ಸಂಭ್ರಮದ ಚಾಲನೆ-ಕಡಲ ಅಬ್ಬರದ ನಡುವೆ ನಾಲ್ಕು ದಿನಗಳ ಕಾಲ ಮೇಳೈಸಲಿದೆ ಸಾಂಸ್ಕøತಿಕ ಬೆರಗು

     
       ಕಾಸರಗೋಡು: ಏಷ್ಯಾದಲ್ಲೇ ವಿದ್ಯಾರ್ಥಿಗಳ ಅತಿದೊಡ್ಡ ಕಲಾಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಕಾಞಂಗಾಡಿನ ಐಂಗೋತ್ ಮೈದಾನದಲ್ಲಿ ಸಜ್ಜುಗೊಳಿಸಲಾದ ಮಹಾಕವಿ ಪಿ.ಕುಞÂರಾಮನ್ ನಾಯರ್ ವೇದಿಕೆ ಸಹಿತ ಏಕ ಕಾಲಕ್ಕೆ ಆಸುಪಾಸಿನ 28ವೇದಿಕೆಗಳಲ್ಲಾಗಿ ಆರಂಭಗೊಂಡಿತು.
ರಾಜ್ಯ ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್  ಕಲೋತ್ಸವ ವೇದಿಕೆಯಲ್ಲಿ ದೀಪಬೆಳಗಿಸುವ ಮೂಲಕ ನಾಲ್ಕು ದಿವಸಗಳ ಕಾಲ ನಡೆಯುವ ಕಲಾಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು  ವಿಶ್ವದ ಸಾಂಸ್ಕøತಿಕ ಸಮ್ಮೇಳನಕ್ಕೆ ಸಾಕ್ಷಿಯಾಗಿ ಕೇರಳದ ಶಾಲಾ ಕಲೋತ್ಸವ ಇಂದು ನಮ್ಮ ಕಣ್ಣಮುಂದೆ ಅನಾವರಣಗೊಂಡಿದೆ. ಬಹುಭಾಷಾ ಸಂಸ್ಕøತಿಯ ಕಾಸರಗೋಡಿನ ಮಣ್ಣಿನಲ್ಲಿ ನಡೆಯುತ್ತಿರುವ ರಾಜ್ಯ ಶಾಲಾ ಕಲೋತ್ಸವ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದೆ. ಶಾಲಾ ಕಲೋತ್ಸವ ಸಾಂಸ್ಕøತಿಕ ವಲಯಕ್ಕೆ ಶಾಂತಿ, ಸೌಹಾರ್ದದ ಸಂದೇಶ ಸಾರುವುದರ ಜತೆಗೆ ಮಾನವತಾವಾದದ ಉದ್ದೀಪನಕ್ಕೆ  ಸಹಕಾರಿಯಾಗಲಿ ಎಂದು ಹಾರೈಸಿದರು.
      ಕಂದಾಯಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಕಲೋತ್ಸವ ನಾಡಿನಾದ್ಯಂತ ಸ್ನೇಹ, ಸೌಹಾರ್ದತೆಯ ಸಂದೇಶ ಪಸರಿಸಲು ಸಹಕಾರಿಯಾಗಲಿ ಎಂದು ತಿಳಿಸಿದರು.ಬಂದರು ಪ್ರಾಚ್ಯವಸ್ತು ಖಾತೆ ಸಚಿವ ಕಡನ್ನಪಳ್ಳಿರಾಮಚಂದ್ರನ್, ಮಲಯಾಳಂ ಚಿತ್ರರಂಗದ ಖ್ಯಾತ ನಟ ಜಯಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಟ ಜಯಸೂರ್ಯ ಮಾತನಾಡಿ, ಕಲೋತ್ಸವ ಕೇವಲ ಬಹುಮಾನ ಗಳಿಕೆ  ಉದ್ದೇಶವಾಗಿರದೆ, ಸ್ವಯಂ ಆತ್ಮಾವಲೋನಕ್ಕೆ ಮನಸ್ಸು ತೆರೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.
       ಉದ್ಘಾಟನಾ ಸಮಾರಂಭದ ಮೊದಲು ರ್ವನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಜೀವನ್ ಬಾಬುಧ್ವಜಾರೋಹಣನಡೆಸಿದರು.  ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಕೆ.ಕುಞÂರಾಮನ್, ಎಂ.ರಾಜಗೋಪಾಲನ್, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾದಿಕಾರಿಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ವಿವಿಧ ನಗರಸಭೆ ಅಧ್ಯಕ್ಷರಾದ ವಿ.ವಿ.ರಮೇಶನ್, ಬಿಫಾತಿಮಾ ಇಬ್ರಾಹಿಂ, ಪೆÇ್ರ.ಕೆ.ಪಿ.ಜಯರಾಜನ್, ಬ್ಲೋಕ್‍ಪಂಚಾಯತ್‍ಅಧ್ಯಕ್ಷರಾದ ಪಿ.ಗೌರಿ, ವಿ.ಪಿ.ಜಾನಕಿ, ಪಿ.ರಾಜನ್,ಸಿ.ಎಚ್.ಮಹಮ್ಮದ್ ಕುಂಞÂಚಾಯಿಂಡಡಿ, ಓಮನಾ ರಾಮಚಂದ್ರನ್, ಕೆ.ಎಂ ಅಶ್ರಫ್, ಎಸ್.ಸಿ.ಆರ್.ಡಿ. ನಿರ್ದೇಶಕ ಡಾ.ಎ.ಪ್ರಸಾದ್, ಸಮಗ್ರ ಶಿಕ್ಷಣ ಕೇರಳ ನಿರ್ದೇಶಕ ಎ.ಪಿ.ಕುಟ್ಟಿಕೃಷ್ಣನ್,ಕೈಟ್ ಸಿ.ಇ.ಒ.ಅನ್ವರ್ ಸಾದತ್, ಸಿಮ್ಯಾಟ್ ನಿರ್ದೇಶಕಡಾ.ಎಂ.ಎ.ಲಲ್, ಎಸ್.ಐ.ಇ.ಟಿ. ನಿರ್ದೇಶಕ ಬಿ.ಬಾಬುರಾಜ್, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
         ಗಮನಸೆಳೆದ ಸ್ವಾಗತ ನೃತ್ಯ:
      ಕಾಸರಗೋಡಿನ ಬಹುಭಾಷಾ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಸ್ವಾಗತನೃತ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.  ಕೆ.ಪಿ ಮಣಿಕಂಠದಾಸ್ ರಚಿಸಿದ ಹಾಡಿಗೆ ಖ್ಯಾತ ಹಿನ್ನೆಲೆಗಾಯಕ ರಾಮಚಂದ್ರಮಾಸ್ಟರ್ ಕಾಞಂಗಾಡ್ ಸಂಗೀತನಿರ್ದೇಶನ ನೀಡಿದ್ದು 60ಮಂದಿ ಶಿಕ್ಷಕರು ಸ್ವರಸಂಯೋಜನೆ ನಡೆಸಿದ್ದಾರೆ. 140ರಷ್ಟು ವಿದ್ಯಾರ್ಥಿಗಳು ನೃತ್ಯದಲ್ಲಿ ಪಾಲ್ಗೊಂಡಿದ್ದರು. ಕಲೋತ್ಸವದ ಮೊದಲ ದಿನದಿಂದಲೇ ಭಾರಿ ಸಂಖ್ಯೆಯಲ್ಲಿ ಜನರು ಕಲಾಕಾರ್ಯಕ್ರಮಕ್ಕೆ ಬಂದು ಸೇರಿದ್ದರು. ಕಾಞಂಗಾಡು-ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಅಂಚಿಗೆ ನಡೆಯುತ್ತಿರುವ ರಾಜ್ಯ ಶಾಲಾ ಕಲೋತ್ಸವದಿಂದ ಭಾರಿ ಟ್ರಾಫಿಕ್ ಜಾಮ್‍ಗೂ ಕಾರಣವಾಯಿತು. ಸಂಚಾರಿ ಪೊಲೀಸ್ ಹಾಗೂ ಪಿಂಕ್ ಪೊಲೀಸರ ತಂಡ ಟ್ರಾಫಿಕ್ ದಟ್ಟಣೆ ಕಡಿಮೆಮಾಡಲು ಹೆಣಗಾಡಬೇಕಾಯಿತು. ವಿಐಪಿಗಳ ಭದ್ರತೆಗೆ ಪ್ರತ್ಯೇಕ ಪೊಲೀಸರ ತಂಡ ಕಾರ್ಯಾಚರಿಸಿದರು.
        ಡಿ.1ರಂದುಸಂಜೆನಡೆಯುವ ಸಮಾರೋಪ ಸಮಾರಂಭವನ್ನು ಪ್ರತಿಪಕ್ಷ ನೇತಾರ ರಮೇಶ್ ಚೆನ್ನಿತ್ತಲಉದ್ಘಾಟಿಸುವರು. ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಚಿವ ಸಿ.ರವೀಂದ್ರನಾಥ್‍ವಿಜೇತರಿಗೆಬಹುಮಾನ ವಿತರಿಸಿ, ಕಲೋತ್ಸವದ ಕರಡು ದಾಖಲೆಗಳನ್ನು ಬಿಡುಗಡೆಗೊಳಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries