HEALTH TIPS

ರಾಜ್ಯ ಕಲೋತ್ಸವ ನಗರಿಯಲ್ಲಿ ಇಂದು ಯಕ್ಷ ವೈಭವ-ಅಗಲ್ಪಾಡಿಯ ವಿದ್ಯಾರ್ಥಿಗಳಿಂದ ಸ್ಪರ್ಧೆ

 
      ಮುಳ್ಳೇರಿಯ: ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಕಲಾಪ್ರತಿಭೆಗಳನ್ನು ಪ್ರದರ್ಶಿಸುವ ಶಾಲಾ ಕಲೋತ್ಸವದ ಕಾರ್ಯಕ್ರಮಗಳು ಕಾಞಂಗಾಡಿನಲ್ಲಿ ಆರಂಭವಾಗಿದ್ದು, ಇಂದು (ನ.29) ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯನ್ನು ನೀಡಲಿದ್ದಾರೆ. ಕಲೋತ್ಸವದ 12ನೇ ವೇದಿಕೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಏಕಾದಶಿ ದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ. ಕಳೆದ ಬಾರಿ ಆಲಪ್ಪುಳದಲ್ಲಿ ನಡೆದ ರಾಜ್ಯ ಶಾಲಾ ಕಲೋತ್ಸವದಲ್ಲಿ 11 ತಂಡಗಳೊಂದಿಗೆ ಸ್ರ್ಪಸಿ `ಮುರಾಸುರ ವಧೆ' ಪ್ರಸಂಗದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಇದೇ ಶಾಲೆಯ ವಿದ್ಯಾರ್ಥಿಗಳು ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ಈ ಬಾರಿ 10ಕ್ಕೂ ಹೆಚ್ಚು ತಂಡಗಳು ಪ್ರಬಲ ಪೈಪೋಟಿ ನೀಡಲಿವೆ. ವಿದ್ಯಾರ್ಥಿಗಳಾದ ಸುಪ್ರೀತಾ ಸುೀರ್ ವಿಷ್ಣುವಾಗಿ, ನಂದ ಕಿಶೋರ ಡಿ. ದೇವೇಂದ್ರನಾಗಿ, ಅಭಿಜ್ಞಾ ಭಟ್ ಬಿ. ದೇವೇಂದ್ರ ಬಲ, ಚೇತನ್ ಕುಮಾರ್ ಎ. ಮುರಾಸುರ, ಸಾಹಸ್ ಸಿ.ಎಚ್. ರಕ್ಕಸಬಲ, ಅನಂತ ಕೃಷ್ಣ ಬಿ. ಭೂತ ಹಾಗೂ ಕೆ.ಆರ್.ದೀಕ್ಷಾ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್ ಅಡ್ವಳ, ಚೆಂಡೆಯಲ್ಲಿ ಹರೀಶ್ ಅಡೂರು, ನೇಪಥ್ಯದಲ್ಲಿ ಜಗದೀಶ್ ಮತ್ತು ತಂಡ ಸಹಕರಿಸಲಿದ್ದಾರೆ. ಜನಪದ ಲೋಕ ಪ್ರಶಸ್ತಿವಿಜೇತ ನಾಟ್ಯಗುರು ಪ್ರಸಿದ್ಧ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಮಿಂಚಲಿದ್ದಾರೆ. ಇತ್ತೀಚೆಗೆ ಇರಿಯಣ್ಣಿಯಲ್ಲಿ ಜರಗಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನಾಲ್ಕು ತಂಡಗಳೊಂದಿಗೆ ಸ್ಪರ್ಧಿಸಿ ಅಗಲ್ಪಾಡಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.
          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries