HEALTH TIPS

ಕುಸಿಯುತ್ತಿರುವ ಅಂತರ್ಜಲಮಟ್ಟ-ತಡೆಗೋಡೆ ಸಪ್ತಾಹಕ್ಕೆ ಜಿಲ್ಲೆಯಲ್ಲಿ ಚಾಲನೆ

      ಕಾಸರಗೋಡು: ಕುಸಿಯುತ್ತಿರುವ ಅಂತರ್ಜಲಮಟ್ಟ ಹೆಚ್ಚಿಸುವುದೊಂದೇ ಜಿಲ್ಲೆಯಲ್ಲಿ ಜಲಸಂರಕ್ಷಣೆಗಿರುವ ಏಕೈಕ ಮಾರ್ಗ ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ.
     ಅವರು ಜಲಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಿಲಿಕೋಡ್ ಗ್ರಾಮಪಂಚಾಯಿತಿಯ ಪಾಡಿಕ್ಕೀಲ್-ಅಯ್ಯಂಡಾಕುಳಂನ ಪಳ್ಳಿಕಂಡ ತೋಡಿನಲ್ಲಿ  ಆಯೋಜಿಸಲಾಗಿದ್ದ ತಡೆಗೋಡೆ  ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಸಣ್ಣ ಹಾಗೂ ದೊಡ್ಡ ಸಹಿತ 12 ನದಿಗಳು ಹರಿಯುತ್ತಿದ್ದರೂ, ಜನವರಿ-ಫೆಬ್ರವರಿ ತಿಂಗಳಿಗೆ ಬರಡಾಗುತ್ತಿರುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಜಿಲ್ಲೆಯ ನದಿಗಳನ್ನು ವರ್ಷಪೂರ್ತಿ ಹರಿಯುವಂತೆ ಮಾಡಲು ಜಿಲ್ಲೆಯಲ್ಲಿ ವಯಾಪಕವಾಗಿ ಸಣ್ಣ ಹಾಗೂ ದೊಡ್ಡ ತಡೆಗೋಡೆ ನಿರ್ಮಾಣ ಅನಿವಾರ್ಯ ಎಂದು ತಿಳಿಸಿದರು.
     ಪಿಲಿಕೋಡ್ ಗ್ರಾಪಂ ಅಧ್ಯಕ್ಷ ಟಿ.ಪಿ ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ತಡೆಗೋಡೆ ಉತ್ಸವ ಗಾನವನ್ನು ಜಿಲ್ಲಾಧಿಕಾರಿ ಡಾ. ಡಿ. ಸುಜಿತ್‍ಬಾಬು ಬಿಡುಗಡೆಗೊಳಿಸಿದರು. ಗ್ರಾಪಂ ಉಪಾಧ್ಯಕ್ಷೆ ಪಿ.ಶೈಲಜಾ ಉತ್ಸವಗಾನದ ಪೆನ್‍ಡ್ರೈವ್ ಸ್ವೀಕರಿಸಿದರು. ಕಾಸರಗೋಡು ಅಭಿವೃದ್ಧೀ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ ರಾಜ್‍ಮೋಹನ್, ಸಥಾಯೀ ಸಮಿತಿ ಅಧ್ಯಕ್ಷ ಕೆ. ಕುಞÂರಾಮನ್, ಎಂ.ಟಿ.ಪಿ ಮೈಮೂನತ್, ಗ್ರಾಪಂ ಸದಸ್ಯ ಶಾಂತಾ, ಟಿ.ಪಿ ರಆಘವನ್ ಉಪಸ್ಥಿತರಿದ್ದರು.
          ಜಾಗೃತಿ ಗಾಯನ:
    ತಡೆಗೋಡೆ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಯಾರಿಸಿದ ತಡೆಗೋಡೆ ಉತ್ಸವ ಗಾನವನ್ನು ಪ್ರತಿಯೊಬ್ಬ ತಮ್ಮ ಮೊಬೈಲ್ ಮೂಲಕ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿಮಾಡಿದ್ದಾರೆ. ಕನ್ನಡ ಮತ್ತು ಮಲಯಾಳದಲ್ಲಿ ಹಾಡು ಒಳಗೊಂಡಿದ್ದು, ಜನವರಿ 4ರ ವರೆಗೆ ಮೊಬೈಲ್ ರಿಂಗ್‍ಟೋನ್ ಆಗಿ ಬಳಸಿಕೊಳ್ಳುವ ಮೂಲಕ ನೀರಿನ ಬಗ್ಗೆ ಜಾಗೃತಿ ಮೂಡಿಸುವಂತೆ ಕೋರಿದ್ದಾರೆ.ನೈಸರ್ಗಿಕ ಜಲಸಂರಕ್ಷಣೆ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದ್ದು, ಕಾಸರಗೋಡು ಜಿಲ್ಲೆ ಇತರರಿಗೆ ಮಾದರಿಯಾಗುವ ರೀತಿ ನಡೆಯಲಿರುವ 'ತಡೆಗೋಡೆ ಉತ್ಸವ'ಸಪ್ತಾಹ ಆರಂಭಗೊಳ್ಳಲಿದೆ. ಜಿಲ್ಲೆಯ ಎಲ್ಲವಿ.ಸಿ.ಬಿ,  ಚೆಕ್ ಡ್ಯಾಮ್‍ಗಳು, ರೆಗ್ಯುಲೇಟರ್‍ಗಳ ಶಟರ್ ಗಳನ್ನು ಮುಚ್ಚುಗಡೆ ನಡೆಸಿ ಗರಿಷ್ಠ ಮಟ್ಟದಲ್ಲಿ ಜಲಸಂರಕ್ಷಣೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries