HEALTH TIPS

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ-ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನಕ್ಕೆ ಸಿದ್ದತೆ

 
         ಕುಂಬಳೆ: ಮಹಾನ್ ಮಾತವತಾ ವಾದಿಯಾದ ರಸಋಷಿ ರಾಷ್ಟ್ರಕವಿ ಕುವೆಂಪು ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಕನ್ನಡ ಭಾಷೆ, ಸಂಸ್ಕøತಿ, ಅಂತರಾಳದ ಸಂವೇದನೆಯ ಪ್ರಚೋದಕವಾಗಿದೆ. ಸಮಾಜದ ತಳಮಟ್ಟದ ವ್ಯಕ್ತಿಯ ಬಗ್ಗೆ ಹೊಸ ದೃಷ್ಟಿಯ ಪರಿಕಲ್ಪನೆಯಡಿ ಕುವೆಂಪು ಸೃಷ್ಟಿಸಿದ ಸೃಜನಾತ್ಮಕತೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ, ಸಂಶೋಧಕಿ ಡಾ.ಯು.ಮಹೇಶ್ವರಿ ಅವರು ತಿಳಿಸಿದರು.
       ರಾಷ್ಟ್ರೀಯ ಕನ್ನಡ ಪರಿಷತ್ತು ಕಾಸರಗೋಡು, ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ಭಾನುವಾರ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆ ಹಾಗೂ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ಕವಿ ಮಾನ್ಯರನ್ನು ನೆನಪಿಸಿ ಅವರು ಮಾತನಾಡಿದರು.
      ಸಮಗ್ರ ಕನ್ನಡ ನೆಲ, ಭಾಷೆ, ಸಂಸ್ಕøತಿಯ ತಲಸ್ಪರ್ಶಿ ಚಿಂತಕರಾಗಿದ್ದ ಕುವೆಂಪು ಅವರು ತಮ್ಮ ಸುಧೀರ್ಘ ಅಧ್ಯಯನ ಮತ್ತು ವಿಶಾಲ ವ್ಯಾಪಕತೆಯ ಚಿಂತನೆಗಳಿಂದ ನೈಜತೆಯ ದರ್ಶನ ಪಡೆದವರು. ಅವರ ಬರಹಗಳು ಎಲ್ಲಾ ಕಾಲಕ್ಕೂ ಸಲ್ಲುವ ಮಾನವತಾವಾದದ ಪ್ರತಿಮೆಗಳಾಗಿ ಜನಸಾಮಾನ್ಯರಿಗೆ ನಿಕಟವಾಗಿದೆ ಎಂದು ಅವರು ತಿಳಿಸಿದರು. ಕನ್ನಡದ ಬೇರುಗಳು ವ್ಯಾಪಿಸಿದಲ್ಲೆಲ್ಲ ರಸಋಷಿ ಕುವೆಂಪು ಅವರ ಚಿಂತನೆ-ಬರಹಗಳು ಎಂದಿಗೂ ಶಕ್ತಿನೀಡಿ ಬದುಕಲು ಪ್ರೇರೇಪಿಸುತ್ತದೆ ಎಂದು ಅವರು ತಿಳಿಸಿದರು.
       ಸಭೆಯಲ್ಲಿ ಮುಂದಿನ ಏಪ್ರಿಲ್ ತಿಂಗಳಲ್ಲಿ ಅನಂತಪುರ ಪರಿಸರವನ್ನು ಕೇಂದ್ರವಾಗಿಸಿ ಹಮ್ಮಿಕೊಳ್ಳಲಾಗುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳದ ಸಮಗ್ರ ಕಾರ್ಯಯೋಜನೆಗಳ ಬಗ್ಗೆ ರೂಪುರೇಖೆ ಚರ್ಚಿಸಿ ಸಿದ್ದಪಡಿಸಲಾಯಿತು. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಜಗತ್ತಿನಾದ್ಯಂತದ ಕನ್ನಡಿಗರ ಪಾಲ್ಗೊಳ್ಳುವಿಕೆಯ ಮೂಲಕ ವರ್ತಮಾನದ ಕನ್ನಡ ಅಸ್ಮಿತೆಯ ದರ್ಶನ, ತಲ್ಲಣ ಮತ್ತು ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಗಂಭೀರ ಚಿಂತನೆಗಳು ನಡೆಯಲಿದೆ. ಕಾಸರಗೋಡಿನ ಎಲ್ಲಾ ಕ್ಷೇತ್ರಗಳ ಕನ್ನಡಿಗರು, ಸಂಘಸಂಸ್ಥೆಗಳ ಸಹಿತ ವಿವಿಧ ಆಯಾಮಗಳ ಪ್ರಾತಿನಿಧ್ಯಗಳೊಂದಿಗೆ ಸಮ್ಮೇಳನ ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
    ಸಭೆಯಲ್ಲಿ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಸಂಯೋಜಕ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಥೋಮಸ್ ಡಿಸೋಜ, ಕನ್ನಡ ಅಧ್ಯಾಪಕ ಸಂಘದ ಪ್ರತಿನಿಧಿ ವಿಶಾಲಾಕ್ಷ ಪುತ್ರಕಳ, ಲಕ್ಷ್ಮಣ ಪ್ರಭು ಕುಂಬಳೆ, ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಕೋಣೆಕಣಿಯ ಗುರುಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದು ಮಾಹಿತಿ ಮಾರ್ಗದರ್ಶನ ನೀಡಿದರು. ಕಸಾಪ ಗಡಿನಾಡ ಘಟಕದ ಕಾರ್ಯದರ್ಶಿ ನವೀನ ಮಾಸ್ತರ್ ಮಾನ್ಯ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಖಜಾಂಜಿ ರವಿ ನಾಯ್ಕಾಪು,ಡಾ.ರಾಜೇಶ ಆಳ್ವ ಬದಿಯಡ್ಕ,  ಅಧ್ಯಾಪಕ ಸಂಘದ ಕುಂಬಳೆ ಘಟಕದ ಪ್ರದೀಪ್ ಮಾಸ್ತರ್ ಬೇಳ, ಸತೀಶ್ ಕೂಡ್ಲು, ಸೌಮ್ಯಾಪ್ರಸಾದ್, ಸತ್ಯನಾರಾಯಣ ಕಾಸರಗೋಡು, ವಿಷ್ಣುಪ್ರಕಾಶ್ ಮುಳ್ಳೇರಿಯ, ಕನ್ನಡ ಅಂಗನವಾಡಿ ಶಿಕ್ಷಕಿಯರ ಸಂಘಟನೆಯ ನೇತಾರರಾದ ಜಲಜಾಕ್ಷಿ ಟೀಚರ್, ರೂಪಲತಾ ಟೀಚರ್, ಶ್ರೀಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries