HEALTH TIPS

ಆರೋಗ್ಯ ಕಾರ್ಯಕರ್ತರ ಸಂಚಾರಕ್ಕೆ 2 ಕೆ.ಎಸ್.ಆರ್.ಟಿ. ಬಸ್ ಗಳ ಸಂಚಾರ

       
          ಕಾಸರಗೋಡು: ಕರೊನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಆರೋಗ್ಯ ಕಾರ್ಯಕರ್ತರ ಸಂಚಾರಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಮಾರ್ಚ್ 30ರಿಂದ ಸರ್ವೀಸ್ ನಡೆಸಲಿದೆ. ಕಾಸರಗೋಡು ಡಿಪೆÇೀದಿಂದ ಮತ್ತು ಪಯ್ಯನ್ನೂರು ಡಿಪೆÇೀಗಳಿಂದ ಈ ಸೇವೆ ನಡೆಯಲಿದೆ. ಕಾಸರಗೋಡು ಕೆ.ಎಸ್.ಆರ್.ಟಿ.ಸಿ. ಡಿಪೆÇೀದಿಂದ ಬೆಳಗ್ಗೆ 6.45ಕ್ಕೆ ಆರಂಭಗೊಳ್ಳುವ ಈ ಬಸ್ ಬೆಳಗ್ಗೆ 7.15ಕ್ಕೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತೆರಳಲಿದೆ. ಬೆಳಗ್ಗೆ 8ಗಂಟೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ, 9ಗಂಟೆಗೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೂ, 9.30ಕ್ಕೆ ನೀಲೇಶ್ವರ ತಾಲೂಕು ಆಸ್ಪತ್ರೆಗೂ ಸಂಚಾರ ನಡೆಸಲಿದೆ.
     ಸಂಜೆ 5 ಗಂಟೆಗೆ ನೀಲೇಶ್ವರ ತಾಲೂಕು ಆಸ್ಪತ್ರೆಗೆ, 5,30ಕ್ಕೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ, 6.30ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಸರ್ವೀಸ್ ನಡೆಸಲಿದೆ.ಪಯ್ಯನ್ನೂರು ಡಿಪೆÇೀದಿಂದ ಬೆಳಗ್ಗೆ 7.30ಕ್ಕೆ ಹೊರಡುವ ಬಸ್ 8.30ಕ್ಕೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ, 9.30ಕ್ಕೆಕಾಸರಗೋಡು ಜನರಲ್ ಆಸ್ಪತ್ರೆಗೆ, 10 ಗಂಟೆಗೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲಪಲಿದೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಿಂದ ಸಂಜೆ 5 ಗಂಟೆಗೆ, 5.30ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆ, 6.30ಕ್ಕೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ರಾತ್ರಿ 7.30ಕ್ಕೆ ಪಯ್ಯನ್ನೂರು ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೆÇೀಗೆ ಮರಳಿ ಸೇವೆ ಇರುವುದು ಎಂದು ಕಾಸರಗೋಡು ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೆÇೀ ಪ್ರಬಂಧಕ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries