HEALTH TIPS

ಕೊರೋನಾ ಪ್ರತಿರೋಧ: ಚಟುವಟಿಕೆಗಳು ಚುರುಕು


      ಕಾಸರಗೋಡು: ಜಿಲ್ಲಾ ಕರೋನಾ ನಿಯಂತ್ರಣ ಘಟಕಗಳಿಗೆ 122 ಕರೆಗಳು ಬಂದಿದ್ದು, ಮನಶಾಸ್ತ್ರಜ್ಞರು ಕೌನ್ಸಿಲಿಂಗ್ ನೀಡಿದ್ದಾರೆ. ಸಾರ್ವಜನಿಕರಿಗಾಗಿ ಏರ್ಪಡಿಸಲಾದ 5 ಸಹಾಯವಾಣಿಗಳಿಗೆ 574 ಕರೆಗಳು ಬಂದಿದ್ದು, ಅವರಿಗೆ ಅಗತ್ಯದ ಸಹಕಾರ ಒದಗಿಸಲಾಗಿದೆ. ಸಾರ್ವಜನಿಕರ ಸಂಶಯ ನಿವಾರಣೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಗಳು ಚಟುವಟಿಕೆ ನಡೆಸುತ್ತಿವೆ.
      ಆರೋಗ್ಯ ಇಲಾಖೆಯ ಫೆಸ್ ಬುಕ್ ಪೇಜ್ ನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಲೈವ್ ಮೂಲಕ ಬಂದು ಸಾರ್ವಜನಿಕರ ಸಂಶಯಗಳಿಗೆ , ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಮಧ್ಯಾಹ್ನ 2.30ರಿಂದ 3.30 ವರೆಗೆ ಅವರು ಲೈವ್ ನಲ್ಲಿ ಸಿಗುತ್ತಾರೆ.
       ವಾರ್ಡ್ ಮಟ್ಟದ ಜಾಗೃತಿ ಸಮಿತಿ ಗಳ ಚಟುವಟಿಕೆಗಳನ್ನು ಚುರುಕುಗೊಳಿಸಿ, ಆಶಾ ಕಾರ್ಯರ್ತರು ಸೇರಿರುವ ತಂಡ ಮನೆಗಳಲ್ಲಿ ನಿಗಾದಲ್ಲಿರುವವರನ್ನು ಸಂದರ್ಶಿಸಿ ಅವರ ತಪಾಸಣೆ ನಡೆಸಿ, ಅವರಿಗೆ ಬೇಕಾದ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.
    ಸ್ಥಳೀಯಾಡಳಿತೆ ಸಂಸ್ಥೇಗಳ ನೇತೃಥ್ವದಲ್ಲಿ ವಿವಿಧ ಗ್ರಾಮಪಂಚಾಯತ್ ಗಳಲ್ಲಿ ಸಮುದಾಯ ಅಡುಗೆಮನೆ ಆರಂಭಿಸಿದ್ದು, ಜನಜಾಗೃತಿ ಸಮಿತಿಗಳ ಸಹಕಾರದೊಂದಿಗೆ ಇತರ ರಾಜ್ಯಗಳ ಕಾರ್ಮಿಕರಿಗೆ ಮತ್ತು ಮನೆಗಳಲ್ಲಿ ಊಟಕ್ಕೆ ತತ್ವಾರವಿರುವವರಿಗೆ ಭೋಜನ ವಿತರಣೆ ನಡೆಸಲಾಗುತ್ತಿದೆ.  ಮದ್ಯಪಾನಿಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.
      ಜಿಲ್ಲೆಯ ಸಿಹಿಮೂತ್ರ ರೋಗಿಗಳು, ಹೈಪರ್ ಟೆನ್ಶನ್ಸ್ ರೋಗಿಗಳು, ಹೃದ್ರೋಗಿಗಳು, ಅಸ್ತಮಾ, ಇನ್ನಿತರ ಗಂಭೀರ ರೋಗಿಗಳು ಮನೆಗಳಲ್ಲೇ ಇರಬೇಕು, ಹೊರಗಿಳಿಯಕೂಡದು. ಅಂಥವರಿಗೆ ಔಷಧ ಕುಟುಂಬಶ್ರೀ ಮೂಲಕ ಲಭಿಸುವಂತೆ ಎಲ್ಲ ಜೆ.ಪಿ.ಎಚ್ ಎನ್/ಜೆ.ಎಚ್.ಐ. ಗಳಿಗೆ ದೂರವಾಣಿಗಳ ಮೂಲಕ ಆದೇಶ ನೀಡುವಂತೆ ಹೊಣೆ ನೀಡಲಾಗಿದೆ.
       ಹೋಟೆಲ್ ಗಳು, ವಿವಿಧ ಸಂಸ್ಥೇಗಳು, ಸಾಲು ಕೊಠಡಿಗಳು ಇತ್ಯಾದಿ ಅಪಾರ ಸಂಖ್ಯೆಗಳಲ್ಲಿ ಜನವಸತಿ ಹೂಡಿರುವ ಕೇಂದ್ರಗಳಲ್ಲಿ ಇಂಥವರು ನಿಗಾ ಇರಿಸಬೇಕು. ಆಗಾಗ ಕೈತೊಳುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗರೂಕತೆ ಪಾಲಿಸಬೇಕು.
      ಅಗತ್ಯ ಸಾಮಾಗ್ರಿಗಳು ಲಭಿಸುವ ಅಂಗಡಿಗಳಲ್ಲಿ ನೌಕರಿ ಮಾಡುವ ಮಂದಿ ಗ್ರಾಹಕರಿಂದ ದೂರ ಕಾಯ್ದುಕೊಳ್ಳಬೇಕು ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಗರ್ಭಿಣಿಯರು, ಹಿರಿಯರು, ಮಕ್ಕಳು ಹಚ್ಚುವರಿ ಜಾಗರೂಕತೆ ವಹಿಸಿಕೊಳ್ಳಬೇಕು. ಮಕ್ಕಳು ಯಾವ ಕಾರಣಕ್ಕೂ ಮನೆಗಳಲ್ಲಿ ನಿಗಾದಲ್ಲಿರುವವರ ಬಳಿಗೆ ಹೋಗಕೂಡದು. ಅಗತ್ಯವಿಲ್ಲದೇ ಆಸ್ಪತ್ರೆಗೆ ತೆರಳಕೂಡದು. ಯಾವುದೇ ರೀತಿಯ ರೋಗಲಕ್ಷಣಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಬೇಕು.
    ಸಾಬೂನು, ನೀರು ಬಳಸಿ ಕೈತೊಳೆಯಬೇಕು. ರೋಗಲಕ್ಷಣ ಹೊಂದಿರುವವರಿಂದ ಒಂದು ಮೀಟರ್ ದೂರ ಇರಬೇಕು. ಕಣ್ಣು, ಮೂಗು, ಬಾಯಿ ಅನಾವಶ್ಯಕವಾಗಿ ಸ್ಪರ್ಶಿಸುತ್ತಿರಬಾರದು.
               ನಿಗಾದಲ್ಲಿ ಇರುವವರ ಪರಿಚರಣೆ ನಡೆಸುವವರು ಗಮನಿಸಬೇಕಾದ ವಿಚಾರಗಳು:
      ಪರಿಚರಣೆ ವೇಳೆ ಮಾಸ್ಕ್ ಧರಿಸಬೇಕು. ಪರಿಚರಣೆಯ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ರೋಗಿಗಳು ಬಳಸಿದ ಮಾಸ್ಕ್ ಸಹಿತ ಸಾಮಾಗ್ರಿಗಳನ್ನು ಸಂಸ್ಕರಿಸಬೇಕು. ಪರಿಚರಣೆಯ ಮಂದಿಯಲ್ಲದೇ ಬೇರಾರೂ ರೋಗಿಯ ಕೊಠಡಿಯನ್ನು ಪ್ರವೇಶಿಸಕೂಡದು. ನಿಗಾದಲ್ಲಿ ಮನೆಗಳಲ್ಲಿ ಇರುವವರು ಇತರರೊಂದಿಗೆ ಬೆರೆಯಬಾರದು. ಚಿಕ್ಕಮಕ್ಕಳು, ವಯೋವೃದ್ಧರು, ಗರ್ಭಣಿಯರು ಇಂಥಾಮನೆಗಳಲ್ಲಿದ್ದರೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries