HEALTH TIPS

ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಎಸ್.ಪಿ.ಯಾಗಿ ಕನ್ನಡತಿ ಡಿ.ಶಿಲ್ಪಾ ನೇಮಕ


          ಕಾಸರಗೋಡು: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ(ಎಸ್.ಪಿ)ಯಾಗಿದ್ದ ಪಿ.ಎಸ್.ಸಾಬು ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಕರ್ನಾಟಕ ಮೂಲದ ಡಿ.ಶಿಲ್ಪಾ ಅವರನ್ನು ನೇಮಿಸಲಾಗಿದೆ. ಕನ್ನಡತಿಯಾಗಿರುವ ಡಿ.ಶಿಲ್ಪಾ ಅವರು ಜಿಲ್ಲೆಯ ಪ್ರಥಮ ಮಹಿಳಾ ಎಸ್.ಪಿ. ಯಾಗಿ ನೇಮಕಗೊಂಡಿದ್ದಾರೆ.
     ಮಾರ್ಚ್ ತಿಂಗಳಲ್ಲಿ ಪಿ.ಎಸ್.ಸಾಬು ಅವರನ್ನು ಕಾಸರಗೋಡು ಎಸ್.ಪಿ.ಯನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಇದೀಗ ಅವರನ್ನು ಆಲಪ್ಪುಳಕ್ಕೆ ವರ್ಗಾಯಿಸಲಾಗಿದೆ.
      ಡಿ.ಶಿಲ್ಪಾ ಅವರು ಇದೀಗ ಕಾಸರಗೋಡು ಎ.ಎಸ್.ಪಿ. ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎ.ಎಸ್.ಪಿ. ಯಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಡಿ.ಶಿಲ್ಪಾ ಅವರು ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಚುರುಕು ಸ್ವಭಾವದ, ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
     2016 ಐ.ಪಿ.ಎಸ್. ಬ್ಯಾಚ್‍ನಲ್ಲಿ ಶಿಲ್ಪಾ ಅವರನ್ನು ಪೆÇ್ರಬೇಷನ್ ಅಂಗವಾಗಿ ಕಾಸರಗೋೀಡು ಎಎಸ್‍ಪಿಯಾಗಿ ನೇಮಿಸಲಾಗಿತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿಲ್ಪಾ ಅವರನ್ನು ಕಣ್ಣೂರು ಜಿಲ್ಲಾ ಎಎಸ್‍ಪಿಯಾಗಿ ನೇಮಿಸಲಾಗಿತ್ತು. ಆ ಬಳಿಕ ಕೊರೊನಾ ಲಾಕ್ ಡೌನ್ ಘೋಷಣೆಯ ಬೆನ್ನಲ್ಲೇ ಅವರನ್ನು ಕಾಸರಗೋಡಿಗೆ ಐ.ಜಿ. ವಿಜಯ ಸಖಾರೆ ಅವರೊಂದಿಗೆ ನೇಮಿಸಲಾಯಿತು. ಶುಕ್ರವಾರ ರಾತ್ರಿ ಶಿಲ್ಪಾ ಅವರನ್ನು ಕಾಸರಗೋಡು ಎಸ್.ಪಿ.ಯಾಗಿ ನೇಮಿಸಲಾಗಿದೆ.
   ಮೂಲತಃ ಬೆಂಗಳೂರು ಎಚ್‍ಎಸ್‍ಆರ್ ಲೇ ಔಟ್ ನಿವಾಸಿಯಾಗಿರುವ ಡಿ.ಶಿಲ್ಪಾ ಅವರು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ, ಬಿಸಿನೆಸ್ ಆಂಡ್ ಎಡ್ಮಿನಿಸ್ಟ್ರೇóನ್ ನಲ್ಲಿ ಉನ್ಬನತ ಪದವಿಯನ್ನೂ ಪಡೆದವರಾಗಿದ್ದಾರೆ. ಬಳಿಕ ಹೈದರಾಬಾದ್ ಮ,ತ್ತು ತೃಶೂರ್ ಗಳಲ್ಲಿ ಪೋಲೀಸ್ ತರಬೇತಿ ಪಡೆದವರಾಗಿದ್ದಾರೆ. ತರಬೇತಿಯ ಬಳಿಕ ಮೊದಲ ಬಾರಿಗೆ ಕಾಸರಗೋಡಿನಲ್ಲೇ ಉದ್ಯೋಗ ಪಡೆದುಕೊಂಡ ಇವರು ತಮ್ಮ ದಕ್ಷ, ಪ್ರಾಮಾಣಿಕ ಸೇವೆಗಳ ಮೂಲಕ ಗಮನ ಸೆಳೆದವರಾಗಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries