HEALTH TIPS

ಕೋವಿಡ್ ಪರೀಕ್ಷೆಗೆ ಹೊಸ ತಂತ್ರಜ್ಞಾನ ಅವಿಷ್ಕರಿಸಿದ ಶ್ರೀಚಿತ್ರಾ- ಟಾಟಾ ಸಮೂಹದೊಂದಿಗೆ ತಂತ್ರಜ್ಞಾನ ವಿತರಣೆಗೆ ಸಜ್ಜು


          ತಿರುವನಂತಪುರ: ಶ್ರೀ ಚಿತ್ರ ತಿರುನಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಭಿವೃದ್ದಿಪಡಿಸಿದ ಕೋವಿಡ್ ಪರೀಕ್ಷಾ ಕಿಟ್‍ಗಳನ್ನು ವ್ಯಾವಹಾರಿಕ ಉದ್ದೇಶದೊಂದಿಗೆ ಬೃಹತ್ ಮಟ್ಟದಲ್ಲಿ ತಯಾರಿಸಲು ಸಿದ್ದತೆಗಳು ನಡೆದಿದೆ.  ಟಾಟಾ ಸಮೂಹದ ಸಹಯೋಗದೊಂದಿಗೆ ರಿವರ್ಸ್ ಟ್ರಾನ್ಸ್‍ಸ್ಕ್ರಿಪ್ಟೇಸ್ ಲೂಪ್ ಮೀಡಿಯೇಟ್ಸ್ ಆಂಪ್ಲಿಫಿಕೇಷನ್ (ಆರ್ಟಿ-ಲ್ಯಾಂಪ್) ತಂತ್ರಜ್ಞಾನವನ್ನು ಬಳಸಿಕೊಂಡು ಕಿಟ್‍ಗಳ ಬೃಹತ್ ಉತ್ಪಾದನೆ ಉದ್ದೇಶಿಸಲಾಗಿದೆ. ಈ ಪರೀಕ್ಷೆಗೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಮತ್ತು ಕೋವಿಡ್ ಪರೀಕ್ಷೆಯು ಭಾರತದಾದ್ಯಂತ ಲ್ಯಾಬ್‍ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ನಿಖರತೆಗಳೊಂದಿಗೆ ಲಭ್ಯಗೊಳಿಸುವ ನಿರೀಕ್ಷೆಯಿದೆ ಎಂದು ಟಾಟಾ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.
        ಈ ಶೀಘ್ರ ಪರಿಶೋಧನಾ ಕಿಟ್ ನ ವಿಶೇಷತೆಯೆಂದರೆ ರೋಗಿಯನ್ನು ಪತ್ತೆಹಚ್ಚಿದ ಆಸ್ಪತ್ರೆಯಲ್ಲೇ ಮಾದರಿಯನ್ನು ಪರಿಶೀಲಿಸಬಹುದು. ಇಂತಹ ನೂತನ ತಂತ್ರಜ್ಞಾನಕ್ಕೆ ಚಿತ್ರ ಜೀನ್ ಲ್ಯಾಂಪ್ ಆಂಡ್ ಟೆಸ್ಟ್ ಎಂದು ಹೆಸರಿಡಲಾಗಿದ್ದು ಪ್ರಸ್ತುತ ಬಳಕೆಯಲ್ಲಿರುವ ಪಿಸಿಆರ್ ತಂತ್ರಜ್ಞಾನಕ್ಕೆ ಹೋಲಿಸಿದರೆ ಚಿತ್ರ ಜೀನ್ ಲ್ಯಾಂಪ್ ಆಂಡ್ ಟೆಸ್ಟ್‍ಗೆ ತೊಡಕುಗಳು ಕಡಿಮೆಯಾಗಿರುತ್ತವೆ.  ಕೋವಿಡ್ 19 ಟೆಸ್ಟ್ ಈಗಿನ ಅತಿ ವೆಚ್ಚ ಮತ್ತು ಸುಲಭ ಸಾಧ್ಯ ವಿಧಾನಗಳ ಮೂಲಕ ಈ ವಿಧಾನ ಜನಪರವಾಗಿದೆ ಎಂದು ಶ್ರೀಚಿತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಕಾರ್ಯದರ್ಶಿ  ಪ್ರೊ.ಅಶುತೋಷ್ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
      ನೂತನ ತಂತ್ರಜ್ಞಾನದಲ್ಲಿ ವೈರಲ್ ಡಿಎನ್‍ಎಯ ಐಸೊಥರ್ಮಲ್ ಮಾದರಿಗಳನ್ನು ಸೃಷ್ಟಿಸಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಮತ್ತು ಈ ಪರೀಕ್ಷೆಯು ಮ್ಯಾಗ್ನೆಟಿಕ್ ನ್ಯಾನೊಪರ್ಟಿಕಲ್ಸ್‍ನ ಆಧಾರದ ಮೇಲೆ ಆರ್‍ಎನ್‍ಎ ಹೊರತೆಗೆಯುವಿಕೆಯನ್ನು ಆಧರಿಸಿರುವುದರಿಂದ, ಹೆಚ್ಚಿನ ನಿಖರತೆ ಮತ್ತು ಹೆಚ್ಚಿನ ಸಾಂದ್ರತೆಯ ಆರ್‍ಎನ್‍ಎಗಳನ್ನು ಸ್ವ್ಯಾಬ್ ಮಾದರಿಯಲ್ಲಿ ಕಂಡುಹಿಡಿಯಬಹುದು ಎಂದು ಪತ್ರಿಕಾ ಪ್ರಕಟಣೆಯ ತಿಳಿಸಲಾಗಿದೆ. ಟಾಟಾ-ಸನ್ಸ್ ಇನ್ರ್ಪಾ ಸ್ಟ್ರಕ್ಷರಲ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಅಧ್ಯಕ್ಷ ಬನ್ಮಾಲಿ ಅಗ್ರವಾಲಾ ಮಾತನಾಡಿ, ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಟಾಟಾ ಸಮೂಹ ಬದ್ಧವಾಗಿದೆ. ಸ್ಥಳೀಯ ಎರಡನೇ ತಲೆಮಾರಿನ ಕಿಟ್‍ಗಳ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಪರೀಕ್ಷೆಯನ್ನು ವೇಗಗೊಳಿಸಲು ಹೆಚ್ಚಿನ ಪರೀಕ್ಷೆ ಮಾಡಲು ಮತ್ತು ಶ್ರೀ ಚಿತ್ರಾ ಅವರೊಂದಿಗೆ ಪಾಲುದಾರರಾಗಲು ಹೆಚ್ಚಿನ ಪರೀಕ್ಷಾ ಕಿಟ್‍ಗಳ ತಯಾರಿ ಅಗತ್ಯವಿದೆ ಎಂದು  ಹೇಳಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries