HEALTH TIPS

ಕೊರೋನಾ ಬಿಕ್ಕಟ್ಟು ಉಲ್ಬಣಿಸಿದರೆ ಬಡವರ ಕೈಗೇ ನೇರ ನಗದು!

   
          ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಬಿಕ್ಕಟ್ಟು ಉಲ್ಬಣಿಸಿದರೆ ದೇಶದ ಬಡವರ ಕೈಗೇ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸಲಾಗುತ್ತದೆ ಎಂದು ಕೇಂದ್ರ ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
        ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ದೇಶದ ಕೋಟ್ಯಂತರ ಬಡವರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಅಕ್ಷರಶಃ ನಿರಾಶ್ರಿತರಾಗಿದ್ದರು. ಒಪೆÇ್ಪತ್ತಿನ ಊಟವೂ ಇಲ್ಲದೆ ಕಂಗಾಲಾಗಿದ್ದರು. ಅಲ್ಲದೆ ತಮ್ಮ ತಮ್ಮ ತವರಿಗೆ ತೆರಳಲು ಈಗಲೂ ಹೆಣಗಾಡುತ್ತಿದ್ದಾರೆ.  ಕೋವಿಡ್ 19 ಸಾಂಕ್ರಾಮಿಕ ಲಾಕ್ ಡೌನ್ ನಿಂದಾಗಿ ಸಮಾಜದ ಈ ವರ್ಗ ಬೀದಿಗೆ ಬಿದ್ದಿತ್ತು. ಅವರ ನಿತ್ಯ ಸಂಪಾದನೆ ಸ್ಥಗಿತವಾಗಿತ್ತು. ಕುಟುಂಬ ಪೆÇೀಷಣೆ ಕಷ್ಟಕರವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಈ ಆರ್ಥಿಕ ಪ್ಯಾಕೇಜ್  ಸಂಪೂರ್ಣವಾಗಿ ಸಂತ್ರಸ್ಥರ ಕೈ ಗೆ ತಲುಪುತ್ತಿಲ್ಲ.
            ಹೀಗಾಗಿ ಕೇಂದ್ರ ವಿತ್ತ ಸಚಿವಾಲಯ ದೇಶದ ಬಡವರ ಕೈಗೇ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವಂತೆ ಕೇಂದ್ರ ವಿತ್ತ ಸಚಿವಾಲಯ ಕಾರ್ಮಿಕ ಸಚಿವಾಲಯದಿಂದ ಲಾಕ್ ಡೌನ್ ಸಂದರ್ಭದಲ್ಲಿ  ಉಂಟಾದ ಉದ್ಯೋಗ ನಷ್ಟ ಮತ್ತು ವೇತನ ಕಡಿತದ ದತ್ತಾಂಶ ಕೇಳಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಮುದ್ರಣಗೊಂಡ ನೋಟುಗಳನ್ನು ಚಲಾವಣೆಗೆ ತರುವ ಚಿಂತನೆಯಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿವೆ. ಬಹುಶಃ ಕೇಂದ್ರ ಸರ್ಕಾರ ಕೊರೋನಾ ವೈರಸ್ ಉಲ್ಫಣವಾದಾಗ  ನೇರವಾಗಿ ಬಡವರ ಕೈಗೇ ನಗದು ಹಂಚುವ ಕುರಿತು ಚಿಂತನೆಯಲ್ಲಿ ತೊಡಗಿರಬಹುದು ಎಂದು ಹೇಳಲಾಗುತ್ತಿದೆ.
            ಚೀನಾ ಹೂಡಿಕೆದಾರರಿಗೆ ಯಾವುದೇ ನಿಬರ್ಂಧವಿಲ್ಲ:
    ಇದೇ ವೇಳೆ ವಿತ್ತ ಸಚಿವಾಲಯ ಚೀನಾ ಮೂಲದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ರೀತಿಯ ನಿಬರ್ಂಧ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries