HEALTH TIPS

ಇಡೀ ಪ್ರಪಂಚ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದರೂ, ಈ ಒಂದು ದೇಶದಲ್ಲಿ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ!

 


        ನವದೆಹಲಿ: ಇಡೀ ಜಗತ್ತಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಎಲ್ಲ ದೇಶಗಳಲ್ಲೂ ಪ್ರತೀ ನಿತ್ಯ ಲಕ್ಷಾಂತರ ಸಂಖ್ಯೆ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಈ ಒಂದು ದೇಶದಲ್ಲಿ ಕಳೆದ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ.

     ಕೊರೋನಾ ವೈರಸ್ ನ ತವರು ಚೀನಾ ಪಕ್ಕದಲ್ಲೇ ಇರುವ ತೈವಾನ್ ನಲ್ಲಿ ಕಳೆದ 200 ದಿನಗಳಿಂದ ಸ್ಥಳೀಯ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ. ಈಡೀ ಪ್ರಪಂಚದಲ್ಲಿ ಕೊರೋನಾ ವೈರಸ್ ನ ಎರಡನೇ ಅಲೆ ಆರಂಭವಾಗಿದೆಯಾದರೂ ತೈವಾನ್ ನಲ್ಲಿ ಮಾತ್ರ ಈ ಅಲೆ ಯಾವುದೇ ರೀತಿಯ  ಪರಿಣಾಮ ಬೀರಿಲ್ಲ. ತೈವಾನ್ ನಲ್ಲಿ ಕಳೆದ 200 ದಿನಗಳಿಂದ ಹೊಸ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಏಪ್ರಿಲ್ 12ರಂದು ಕೊನೆಯ ಬಾರಿಗೆ ತೈವಾನ್‍ನಲ್ಲಿ ಸ್ಥಳೀಯವಾಗಿ ಪ್ರಸರಣಗೊಂಡ ಕೋವಿಡ್ 19 ಸೋಂಕು ವರದಿಯಾಗಿತ್ತು. ಅಂದಿನಿಂದ ಇಂದಿನವರೆಗೂ ಇಲ್ಲಿ ಹೊಸ ಸೋಂಕಿತರು ಕಂಡುಬಂದಿಲ್ಲ.  ಜಗತ್ತಿನ ಬಲಾಢ್ಯ ಮತ್ತು ಆತ್ಯಾಧುನಿಕ ವೈದ್ಯಕೀಯ ಸಾಮಥ್ರ್ಯವಿರುವ ದೇಶಗಳೇ ಎರಡನೆಯ ಅಲೆಯ ಕೋವಿಡ್ ಸೋಂಕಿನ ಪ್ರಕರಣಗಳನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ತೈವಾನ್ ಕೋವಿಡ್ ನಿರ್ವಹಣೆ ಮಾಡಿರುವ ಬಗೆ ಅಚ್ಚರಿ ಮೂಡಿಸಿದೆ.

      ಪ್ರಸ್ತುತ ತೈವಾನ್‍ನಲ್ಲಿ ಕೇವಲ 553 ಕೊರೊನಾ ವೈರಸ್ ಪ್ರಕರಣಗಳು ಮತ್ತು ಏಳು ಸಾವಿನ ಪ್ರಕರಣಗಳು ಮಾತ್ರ ವರದಿಯಾಗಿವೆ. ಈ ಬಗ್ಗೆ ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದು, ತೈವಾನ್ ನಲ್ಲಿ 23 ಮಿಲಿಯನ್ ಜನಸಂಖ್ಯೆ ಇದ್ದು, ಅತ್ಯಂತ ಕಡಿಮೆ ಸೋಂಕಿತರನ್ನು ಹೊಂದಿರುವ ದೇಶ ಎಂಬ ಕೀರ್ತಿಗೆ  ತೈವಾನ್ ಭಾಜನವಾಗಿದೆ.

          ಇಷ್ಟಕ್ಕೂ ತೈವಾನ್ ತೆಗೆದುಕೊಂಡ ಕ್ರಮಗಳೇನು?

       ಈ ಹಿಂದೆ ಸಾರ್ಸ್ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ತೈವಾನ್ ಅತ್ಯಂತ ಮಾರಕ ಪರಿಸ್ಥಿತಿಯನ್ನು ಎದುರಿಸಿತ್ತು. ಅದರಿಂದ ಪಾಠ ಕಲಿತಿದ್ದ ದೇಶವು, ಕೋವಿಡ್ ಹರಡುವ ಮುನ್ನವೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ತೈವಾನ್ ದೇಶವು ಕೋವಿಡ್ ನಿಯಂತ್ರಣದ  ಶಿಷ್ಟಾಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಸರಿಸಿದ್ದು, ಕೊರೊನಾ ವೈರಸ್ ಸೋಂಕು ಹರಡುವ ಆರಂಭದಲ್ಲಿಯೇ ತನ್ನ ಗಡಿಗಳನ್ನು ಮುಚ್ಚಿದ್ದಲ್ಲದೆ, ಪ್ರಯಾಣ ಚಟುವಟಿಕೆಗಳ ಮೇಲೆ ಕಠಿಣ ನಿಬರ್ಂಧಗಳನ್ನು ವಿಧಿಸಿತ್ತು. ಜನವರಿಯಲ್ಲಿ ವೈರಸ್ ಹರಡುವಿಕೆ ಹೆಚ್ಚಾದಂತೆಯೇ ಅದು ತನ್ನ  ಪ್ರಜೆಗಳಲ್ಲದವರಿಗೆ ಗಡಿಗಳನ್ನು ಮುಚ್ಚಿಬಿಟ್ಟಿತು. ಅಲ್ಲಿಂದ ಇಲ್ಲಿಯವರೆಗೂ ಗಡಿಯಲ್ಲಿನ ಓಡಾಟವನ್ನು ಅತ್ಯಂತ ಕಠಿಣವಾಗಿ ಅದು ನಿಬರ್ಂಧಿಸುತ್ತಿದೆ. ಜತೆಗೆ ತೈವಾನ್ ಅತ್ಯಂತ ಕಠಿಣ ಸಂಪರ್ಕ ಪತ್ತೆ ಕಾರ್ಯಾಚರಣೆ ನಡೆಸಿದ್ದು ಕೂಡ ಅದಕ್ಕೆ ಅನುಕೂಲ ಮಾಡಿಕೊಟ್ಟಿತು. ತಂತ್ರಜ್ಞಾನ ಪ್ರೇರಿತ ಕ್ವಾರೆಂಟೈನ್ ಮತ್ತು  ವ್ಯಾಪಕವಾಗಿ ಮಾಸ್ಕ್ ಧರಿಸುವಿಕೆಯ ಚಟುವಟಿಕೆಯನ್ನು ಅನುಸರಿಸಲಾಗಿತ್ತು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಪರಿಣತರು ಸೂಚಿಸಿದ ಎಲ್ಲ ನಿಯಮಗಳನ್ನೂ ತೈವಾನ್ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು.

            ಮಾಸ್ಕ್ ಉತ್ಪಾದನೆ ಹೆಚ್ಚಳ:

     ತೈವಾನ್‍ನಲ್ಲಿ ಆರಂಭದಿಂದಲೂ ಪ್ರತಿಯೊಬ್ಬರಿಗೂ ಮಾಸ್ಕ್ ಹಂಚಿಕೆ ಮಾಡಲಾಗಿತ್ತು. ಹಾಗೆಯೇ ಪ್ರತಿಯೊಬ್ಬರೂ ಅದನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಲಾಯಿತು. ದೇಶದೊಳಗೆ ಮಾಸ್ಕ್‍ಗಳ ಲಭ್ಯತೆ ಹೆಚ್ಚಾಗಿರುವಂತೆ ನೋಡಿಕೊಳ್ಳಲು ಮಾಸ್ಕ್‍ಗಳ ರಫ್ತನ್ನು ನಿಷೇಧಿಸಿತು. ನಾಲ್ಕು ತಿಂಗಳೊಳಗೆ  ದೇಶದಲ್ಲಿನ ಕಂಪೆನಿಗಳು ಪ್ರತಿ ದಿನಕ್ಕೆ 2 ಮಿಲಿಯನ್‍ನಿಂದ 20 ಮಿಲಿಯನ್‍ಗೆ ಮಾಸ್ಕ್ ಉತ್ಪಾದನೆಯನ್ನು ಹೆಚ್ಚಿಸಿದವು. ಇದರಿಂದ ನಾಗರಿಕರಿಗೆ ಮಾಸ್ಕ್ ಕೊರತೆಯಾಗದಂತೆ ಅಲ್ಲಿನ ಸರ್ಕಾರ ನೋಡಿಕೊಂಡಿತು.

          ಸೋಂಕಿತರ ಸಂಪರ್ಕಿತರ ಯಶಸ್ವಿ ಪತ್ತೆ:

     ಸಂಪರ್ಕಿತರ ಪತ್ತೆಯು ತೈವಾನ್ ಅತ್ಯುತ್ತಮವಾಗಿ ನಿಭಾಯಿಸಿದ ಮತ್ತೊಂದು ವಿಭಾಗ. ಪ್ರತಿ ಖಚಿತ ಪ್ರಕರಣಕ್ಕೆ ಸರಾಸರಿ 20-30 ಸಂಪರ್ಕಗಳು ಸಂಬಂಧಿಸಿರುತ್ತವೆ. ಆದರೆ ತೈವಾನ್‍ನಲ್ಲಿ ಸರ್ಕಾರವು ಪ್ರತಿ ಒಂದು ಪ್ರಕರಣಕ್ಕೆ ಕನಿಷ್ಠ 150 ಮಂದಿ ಸಂಪರ್ಕಿತರನ್ನು ಪತ್ತೆ ಹಚ್ಚಿತ್ತು. ಹಾಗೆ ಸೋಂಕಿತರೊಂದಿಗೆ  ಯಾವುದೇ ರೀತಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕಠಿಣ 14 ದಿನಗಳ ಕ್ವಾರೆಂಟೈನ್‍ಗೆ ಒಳಪಡಿಸಿತು. ಅವರಲ್ಲಿ ನೆಗೆಟಿವ್ ಇದ್ದರೂ ಹೊರಗೆ ಬರಲು ಅವಕಾಶ ನೀಡಿರಲಿಲ್ಲ. ಇದೇ ವಿಚಾರದಲ್ಲಿ ಜಗತ್ತಿನ ಹೆಚ್ಚಿನ ದೇಶಗಳು ವಿಫಲವಾಗಿದ್ದವು.

      ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆಯ ಪ್ರಾಧ್ಯಾಪಕ ಪೀಟರ್ ಕೊಲಿಗ್ನಾನ್ ಅವರು ಕೋವಿಡ್ ಸೋಂಕಿನ ಸಮುದಾಯ ಪ್ರಸರಣವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಏಕೈಕ ಪ್ರಮುಖ ದೇಶ ತೈವಾನ್ ಎಂದು ಬಣ್ಣಿಸಿದ್ದಾರೆ.  ಅಲ್ಲದೆ ಕೊರೋನಾ  ಸೋಂಕು ನಿಗ್ರಹಿಸಲು ತೈವಾನ್ ಸರ್ಕಾರ ಎಲ್ಲ ಕಠಿಣ ಕ್ರಮಗಳೂ ಇತರೆ ದೇಶಗಳು ಅನುಕರಣೀಯ.. ತೈವಾನ್ ಸರ್ಕಾರದ ದಿಟ್ಟ ನಿಲುವನ್ನು ಇತರೆ ದೇಶಗಳಿಗೆ ಮಾದರಿ ಎಂದು ಹೇಳಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries