HEALTH TIPS

ಇ-ಸಂಜೀವಿನಿ ಟೆಲಿಮೆಡಿಸಿನ್ ಸಹಾಯ ಪಡೆದುಕೊಳ್ಳಲು ಸೂಚನೆ

 

          ಕಾಸರಗೋಡು: ಹೆಚ್ಚುತ್ತಿರುವ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ವತಿಯಿಂದ ಜಾರಿಯಲ್ಲಿರುವ ಇ-ಸಂಜೀವಿನಿ ಟೆಲಿಮೆಡಿಸಿನ್ ವ್ಯವಸ್ಥೆಯ ಪ್ರಯೋಜನವನ್ನು ಗರಿಷ್ಠ ಮಟ್ಟದಲ್ಲಿ ಸಾರ್ವಜನಿಕರು ಪಡೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.



        ಇ-ಸಂಜೀವಿನಿ ಟೆಲಿಮೆಡಿಸಿನ್ ವ್ಯವಸ್ಥೆ ಸಂಪೂರ್ಣ ಉಚಿತವಾಗಿದ್ದು, ನೇರವಾಗಿ ಸಂದರ್ಶನ ನಡೆಸದೆ ಆನ್‍ಲೈನ್ ಮೂಲಕ ಕುಳಿತಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದೆ. ನಿಗದಿತ ಸಮಯದಲ್ಲಿ ವಿಡಿಯೋ ಕಾಳ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಅನಾರೋಗ್ಯದ ಮಾಹಿತಿ ನೀಡಿ ಸಲಹೆ ಪಡೆದುಕೊಳ್ಳಬಹುದಾಗಿದೆ. ಇ-ಸಂಜೀವಿನಿ ವೈದ್ಯರು ನೀಡುವ ಔಷಧೀಯ ವಿವಿರಗಳನ್ನು ಸನಿಹದ ಸರ್ಕಾರಿ ಆಸ್ಪತ್ರೆಗೆ ನೀಡಿದಲ್ಲಿ ಔಷಧ ಲಭ್ಯವಾಗಲಿದೆ. ಅಂತರ್ಜಾಲ ಸಂಪರ್ಕವಿರುವ ಸ್ಮಾರ್ಟ್‍ಫೋನ್ ಅಥವಾ ಲ್ಯಾಪ್‍ಟಾಪ್ ಹೊಂದಿದವರಿಗೆ ಆನ್‍ಲೈನ್ ಮೂಲಕ ತಿತಿತಿ.esಚಿಟಿರಿeevಚಿಟಿioಠಿಜ.iಟಿ ಎಂಬ ವೆಬ್‍ಸೈಟ್‍ನಲ್ಲಿ ಈ ಸಹಾಯ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 1056/0471 2552056 ಎಂಬ ಟಾಲ್‍ಫ್ರೀ ಸಂಬರ್‍ಗೆ ಕರೆಮಾಡಬಹುದಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries