HEALTH TIPS

ಲತಿಕಾ ಸುಭಾಷ್ ಕಾಂಗ್ರೆಸ್ ನಿಂದ ಔಟ್

       ತಿರುವನಂತಪುರ: ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಲತಿಕಾ ಸುಭಾಷ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ. ಲತಿಕಾ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ನಿನ್ನೆ ಘೋಷಿಸಿದರು. ಇದೇ ವೇಳೆ ಯಾವ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.


         ಲತಿಕಾರಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ ಬಳಿಕ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಲತಿಕಾ ಅವರ ಕೇಶಮುಂಡನ ಪ್ರಕರಣ ಕಾಂಗ್ರೆಸ್ ನಾಯಕತ್ವವನ್ನು ದೊಡ್ಡ ಬಿಕ್ಕಟ್ಟಿಗೆ ಸಿಲುಕಿಸಿತ್ತು. ನಾಯಕರು ಲತಿಕಾಳನ್ನು ಮನವೊಲಿಸಲು ಪ್ರಯತ್ನಿಸಿದರೂ, ಅವರು ಈ ಎಲ್ಲವನ್ನು ತಿರಸ್ಕರಿಸಿದ್ದರು ಮತ್ತು ಏಟ್ಟಮನೂರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇದರೊಂದಿಗೆ ಕಾಂಗ್ರೆಸ್ ಅವರ ವಿರುದ್ಧ ಕ್ರಮ ಕೈಗೊಂಡಿತು ಎನ್ನಲಾಗಿದೆ.

     ಏಟ್ಟಮನೂರಿನಲ್ಲಿ, ಕಾಂಗ್ರೆಸ್ ನಾಯಕತ್ವವು ಯುಡಿಎಫ್ ಘಟಕದ ಪಕ್ಷವಾದ ಕೇರಳ ಕಾಂಗ್ರೆಸ್ಗೆ ಸ್ಥಾನ ನೀಡಬೇಕಾಗಿ ಬಂದಿದ್ದರಿಂದ ಲತಿಕಾಗೆ ಸ್ಥಾನ ನೀಡಲಿಲ್ಲ ಎಂದು ವಿವರಿಸಿದೆ.




 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries