HEALTH TIPS

ಮನೆಯಿಂದ ಹೊರ ತೆರಳುವಾಗ ಡಬಲ್ ಮಾಸ್ಕಿಂಗ್ ಬಳಸುವುದು ಮುಖ್ಯ: ಡಬಲ್ ಮಾಸ್ಕಿಂಗ್ ಎಂದರೆ ಎರಡು ಮಾಸ್ಕ್ ಗಳನ್ನು ಧರಿಸುವುದು ಎಂದರ್ಥವಲ್ಲ: ಸಿಎಂ

                                    

              ತಿರುವನಂತಪುರ; ಮನೆಯಿಂದ ಹೊರ ತೆರಳುವಾಗ ಪ್ರತಿಯೊಬ್ಬರೂ ಡಬಲ್ ಮಾಸ್ಕ್ ಧರಿಸುವುದು ಮುಖ್ಯ ಮತ್ತು ಕಡ್ಡಾಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪುನರುಚ್ಚರಿಸಿರುವರು. ಈ ರೀತಿಯ ಮಾಸ್ಕ್ ಧರಿಸಿ ಮತ್ತು ಆಗಾಗ್ಗೆ ಕೈ ತೊಳೆಯುವುದರಿಂದ ಸೋಂಕಿನಿಂದ ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಬಹುದು ಎಂದು ಸಿಎಂ ಹೇಳಿದರು.

                          ಸಿಎಂ ಮಾತುಗಳು:

*ಮನೆಯಿಂದ ಹೊರತೆ ತುರ್ತು ಅಗತ್ಯಗಳಿಗೆ ತೆರಳುವಾಗ ಡಬಲ್ ಮಾಸ್ಕಿಂಗ್ ಬಳಸುವುದು ಮುಖ್ಯ ಎಂದು ಹಲವು ಬಾರಿ ವಿವರಿಸಲಾಗಿದೆ.  ಡಬಲ್-ಮಾಸ್ಕಿಂಗ್ ಎರಡು ತುಂಡು ಮಾಸ್ಕ್ ಗಳನ್ನು ಧರಿಸುವುದು ಎಂದು ಅರ್ಥವಲ್ಲ. ಶಸ್ತ್ರಚಿಕಿತ್ಸೆಯ ಸಂದರ್ಭ ಬಳಸುವ ಮಾಸ್ಕ್  ನ್ನು ಅನ್ವಯಿಸಿದ ನಂತರ, ಅದರ ಮೇಲೆ ಬಟ್ಟೆಯ ಮಾಸ್ಕ್ ಧರಿಸುವುದಾಗಿದೆ. ನಾವು ಈ ರೀತಿಯ ಮಾಸ್ಕ್ ಗÀಳನ್ನು ಧರಿಸಿ ಕೈಗಳನ್ನು ಆಗಾಗ್ಗೆ ತೊಳೆಯುತ್ತಿದ್ದರೆ, ರೋಗ ಹರಡುವುದನ್ನು ಬಹಳ ಮಟ್ಟಿಗೆ ತಡೆಯಬಹುದು. *

       "ಮಾಸ್ಕ್ ಧರಿಸುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳು ಮುಂದೆ ಬರಬೇಕೆಂದು ನಾವು ಕೋರುತ್ತೇವೆ. ಚಲನಚಿತ್ರ ಮತ್ತು ಇತರ ಸಾಂಸ್ಕøತಿಕ ಕಲಾವಿದರು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಬರಹಗಾರರು ಮತ್ತು ಪತ್ರಕರ್ತರು ಸೇರಿದಂತೆ ಎಲ್ಲಾ ವರ್ಗದ ಜನರು ಮಾಸ್ಕ್ ಗಳನ್ನು ಧರಿಸುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದೆ ಬರಬೇಕು.  ಹೆಸರಾಂತ ಯೇಲ್ ವಿಶ್ವವಿದ್ಯಾಲಯದ ಅಧ್ಯಯನವು ಇಂತಹ ಮಧ್ಯಸ್ಥಿಕೆಗಳು ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಕಂಡುಹಿಡಿದಿದೆ. ಈ ಹಂತದಲ್ಲಿ ಅಂತಹ ಅಗತ್ಯದ ನೆರವನ್ನು  ಎಲ್ಲರಿಂದಲೂ ಕೋರಲಾಗಿದೆ. ಕಚೇರಿ, ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಗಮನವನ್ನು ಕಳೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವುದು ಕಂಡುಬರುತ್ತಿದೆ. ಮಾಸ್ಕ್ ಗಳನ್ನು ಧರಿಸುವಾಗ ಕೆಲಸದ ಸ್ಥಳದಲ್ಲಿ ಯಾವುದೇ ಅಸಡ್ಡೆ ಅಥವಾ ಅತಿ ನಿಕಟತೆ ಇರಬಾರದು. ಜೊತೆ-ಜೊತೆಯಾಗಿ ಕುಳಿತು ಆಹಾರ-ಪಾನೀಯ ಸೇವಿಸುವುದನ್ನು ನಿಯಂತ್ರಿಸಬೇಕು.*

               ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ವರ್ತಿಸುವ ಸಮಯ ನಮ್ಮ ಮುಂದಿದೆ. ಭಯಕ್ಕೆ ಬಲಿಯಾಗಬಾರದು. ಆದರೆ ಕೆಲವು ಜನರು, ತಿಳುವಳಿಕೆ ಕೊರತೆಯಿಂದ ಜನರನ್ನು ಆಧಾರರಹಿತ ಭಯಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ದೋಷಗಳನ್ನು ಎತ್ತಿ ತೋರಿಸುವ ಟೀಕೆಗಳು ಅನಿವಾರ್ಯ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಸಮಯದಲ್ಲಿ ಅಸತ್ಯ ಮತ್ತು ಉತ್ಪ್ರೇಕ್ಷಿತ ಸಂದೇಶಗಳನ್ನು ಹರಡುವುದು ಕ್ಷಮಿಸಲಾಗದ ಅಪರಾಧ. ಇಂತಹ ಕೃತ್ಯ ಎಸಗುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ. *

                "ದೇಶದಲ್ಲಿ ಕೋವಿಡ್ ಹರಡುವಿಕೆ ತುಂಬಾ ಹೆಚ್ಚಿದೆ.  ದೇಶದಲ್ಲಿ ದೈನಂದಿನ ಸಾವಿನ ಸಂಖ್ಯೆ 3,500 ಕ್ಕಿಂತ ಹೆಚ್ಚಳಗೊಂಡಿದೆ. ಪ್ರತಿದಿನ ಸುಮಾರು ನಾಲ್ಕು ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಈ ಹಂತದಲ್ಲಿ, ಅಮೇರಿಕನ್ ಜರ್ನಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಮತ್ತು ನೈರ್ಮಲ್ಯ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನ ಪೆÇ್ರಸೀಡಿಂಗ್ಸ್‍ನ ಸಂಶೋಧನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ವಿಶ್ವದ ವಿವಿಧ ಭಾಗಗಳಲ್ಲಿ ಮಾಸ್ಕ್  ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂಬುದು ಗಮನಾರ್ಹ.* ಮಾಸ್ಕ್ ನ ವೈಜ್ಞಾನಿಕ ಬಳಕೆಯ ಮಹತ್ವವನ್ನು ಅಧ್ಯಯನವು ಒತ್ತಿಹೇಳುತ್ತದೆ ಎಂದು ಸಿಎಂ ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries