HEALTH TIPS

ಪಶು ಸಂಗೋಪನಾ ಇಲಾಖೆಯ ಡಾ. ಶಿವ ನಾಯ್ಕರಿಗೆ ಸೇವಾ ನಿವೃತ್ತಿ

             ಕಾಸರಗೋಡು: ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಸರಗೋಡು ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ತಿಲಕಪ್ರಾಯರಾಗಿ ಸೇವೆಸಲ್ಲಿಸಿದ ಡಾ.ಶಿವ ನಾಯ್ಕ ಸೋಮವಾರ ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದರು.ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯಲ್ಲಿ ಪಾಲಕ್ಕಾಡ್ ನಲ್ಲಿ  ರಾಜ್ಯದ ರಿಂಡರ್‍ಪೆಸ್ಟ್ ಚೆಕ್‍ಪೆÇೀಸ್ಟ್‍ಗಳ ಉಸ್ತುವಾರಿ ಜಂಟಿ ನಿರ್ದೇಶಕರಾಗಿದ್ದರು.  

                    1990 ರಲ್ಲಿ ಚೀಮನಿ ಪಶುವೈದ್ಯ ಶಾಲೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಡಾ.ಶಿವ ನಾಯ್ಕ ಅವರು, ಬಳಿಕ ಜಿಲ್ಲೆಯ ವಿವಿಧ ಪಶು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತ ಪದೋನ್ನತಿ ಹೊಂದಿ 2003ರಲ್ಲಿ ಸಹಾಯಕ ನಿರ್ದೇಶಕರಾಗಿ ಸಹಾಯಕ ಪಶು ಸಂಗೋಪನಾ ಯೋಜನಾಧಿಕಾರಿ, ಜಿಲ್ಲಾ ಮುಖ್ಯ ಪಶು ಸಂಗೋಪನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 

      ತಮ್ಮ ಸೇವಾವಧಿಯಲ್ಲಿ ಅವರು ಕಾಸರಗೋಡು ಜಿಲ್ಲಾ ಪಶು ಸಂಗೋಪನಾ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣದ ಗರಿಮೆಯನ್ನು ಹೆಗಲಿಗೇರಿಸಿದ್ದರಲ್ಲದೆ ರೋಗ ನಿಯಂತ್ರಣಾಧಿಕಾರಿಯಾಗಿ ಪಶುಗಳ ಕಾಲುಬಾಯಿ ಜ್ವರ, ಆಡುಗಳ ರೋಗ ನಿಯಂತ್ರಣದಲ್ಲಿ ಸಕ್ರಿಯರಾಗಿ ಯಶಸ್ಸು ಗಳಿಸಿದ್ದರು.

    ಆರ್ಥಿಕ ಕಾರಣಗಳಿಂದ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ವಾನಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯನ್ನು ಪುನಃ ಆರಂಭಿಸಿದ ಕೀರ್ತಿ ಡಾ.ಶಿವ ನಾಯ್ಕರ ಸೇವಾ ತತ್ಪರತೆಯ ಸಂಕೇತ. 

        ತಮ್ಮ ಅವಧಿಯಲ್ಲಿ ಪಕ್ಷಿ ಜ್ವರ ಕರ್ನಾಟಕದಿಂ|ದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ತಡೆಹಿಡಿಯುವ ಸಮರೋಪಾದಿಯ ಚಟುವಟಿಕೆಗಳ ನೇತೃತ್ವ ವಹಿಸಿದ್ದ ಡಾ.ಶಿವ ನಾಯ್ಕ ಅವರು ಇತರ ಸಾಂಕ್ರಾಮಿಕ ಕಾಯಿಲೆಗಳ ಪರಿಣಾಮಕಾರಿ ನಿಯಂತ್ರಣ ಮತ್ತು ರಾಜ್ಯದಲ್ಲಿಯೇ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಗಮನಾರ್ಹ ಪ್ರಗತಿ ಪಡೆದ ಅತ್ಯುತ್ತಮ ಪಶುವೈದ್ಯರಾಗಿ ಗುರುತಿಸಿಕೊಂಡರು.

              2019 ರಲ್ಲಿ ಮುಖ್ಯ ಪಶುವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡ ನಂತರ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆ ತನ್ನ ಸಂಪೂರ್ಣ ವೈಭವವನ್ನು ತಲುಪಿತು. ಕಾಸರಗೋಡು ಜನರಲ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಬೆಕ್ಕೊಂದು ವಾಸಿಸುತ್ತಿದ್ದುದು ಕಂಡುಬಂದ ಘಟನೆ ಮತ್ತು ಕೋವಿಡ್ ವ್ಯಾಪಕತೆಯ ಸಂದರ್ಭ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ತೀವ್ರ ಸ್ವರೂಪದ ಕಾಯಿಲೆಗಳು ಬಂದ ಸಂದರ್ಭ ಡಾ. ಶಿವ ನಾಯ್ಕ  ತಮ್ಮ ಕೌಶಲ್ಯಗಳಿಂದ ನಿಭಾಯಿಸಿದ ಕಾರ್ಯಚಟುವಟಿಕೆಗಳು ಗಮನಾರ್ಹವಾಗಿದ್ದವು. 

           ಹಣದ ಕೊರತೆಯಿಂದಾಗಿ ಸ್ಥಗಿತಗೊಂಡಿದ್ದ ಎಬಿಸಿ ಯೋಜನೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವರಿಕೆ ಮಾಡಿಸಿ  ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಹೆಚ್ಚಿನ ನಿಧಿಯೊಂದಿಗೆ ಪುನರಾರಂಭಿಸಲು ಶಿವ ನಾಯ್ಕರ ಬೆಂಬಿಡದ ಲಕ್ಷ್ಯ ಪ್ರಾಪ್ತಿಯ ಕಾರ್ಯೋನ್ಮುಖತೆ ಪ್ರಮುಖ ಕಾರಣವಾಗಿದೆ. 

         ಪ್ರಸ್ತುತ ಪಾಲಕ್ಕಾಡ್‍ನಲ್ಲಿ ಕಚೇರಿಯಿರುವ ರಾಜ್ಯ ಪಶುಸಂಗೋಪನಾ ಇಲಾಖೆಯ 19 ಚೆಕ್ ಪೋಸ್ಟ್ ಗಳು, ಜೊತೆಗೆ 4 ವಿಜಿಲೆನ್ಸ್ ಘಟಕಗಳು, 4 ರಾಷ್ಟ್ರೀಯ ಪ್ರಯೋಗಾಲಯಗಳನ್ನು ಸಕ್ರಿಯಗೊಳಿಸಿ ಕೇರಳಕ್ಕಿರುವ ಮೃಗ, ಪಕ್ಷಿ, ಮೊಟ್ಟೆ ಮೊದಲಾದವುಗಳ ಉತ್ಪಾದನೆಗೆ ಪ್ರಾಮುಖ್ತೆ ನೀಡುವುದು, ಸಾಂಕ್ರಾಮಿಕ ರೋಗಗಳಿಂದ ಪಾರಾಗುವ ಯೋಜನೆಗಳನ್ನು ಜಾರಿಗೊಳಿಸುವ ಚಟುವಟಿಕೆಗಳ ನೇತೃತ್ವವನ್ನು ಇವರು ವಹಿಸಿದ್ದರು. ಕಾಸರಗೋಡು ಜಿಲ್ಲೆಯ ಅತ್ಯುತ್ತಮ ಪಶು ವೈದ್ಯರು ಸಹಿತ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

   ಎಣ್ಮಕಜೆ ಗ್ರಾ.ಪಂ. ನ ಶೇಣಿ ಮೂಲದವರಾದ ಡಾ.ಶಿವ ನಾಯ್ಕ, ಪತ್ನಿ ಮಂಗಳೂರು ಅಂಚೆ ಇಲಾಖೆಯ ಉದ್ಯೋಗಿ ಮಮತಾ,  ಮೆಕ್ಯಾನಿಕಲ್ ಇಂಜಿನಿಯರ್ ಶಿಖಿತ್ ನಾಯ್ಕ್ ಮತ್ತು ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಶಿಶಿರ್ ನಾಯಕ್ ಪುತ್ರರು. ಆರೋಗ್ಯ ಇಲಾಖೆಯ ಡಾ. ನಾರಾಯಣ ನಾಯ್ಕ್ ಸಹೋದರರಾಗಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries