HEALTH TIPS

ಮಂಕಿಪಾಕ್ಸ್: ಸೆಕ್ಸ್ ನಿಲ್ಲಿಸಿ, ಇಲ್ಲವಾದರೆ...: ಇಂಗ್ಲೆಂಡ್ ಸರ್ಕಾರದ ಆರೋಗ್ಯ ಸಲಹೆ

                 ಲಂಡನ್:  ಮಂಕಿಪಾಕ್ಸ್ ಹರಡದಂತೆ ನಿಯಂತ್ರಿಸಲು ಸೋಂಕಿನ ಲಕ್ಷಣವಿರುವವರೊಂದಿಗೆ ಸೆಕ್ಸ್ ಹೊಂದುವುದನ್ನು ತಡೆಗಟ್ಟಬೇಕು ಎಂದು ಇಂಗ್ಲೆಂಡ್ ನಾದ್ಯಂತ ಆರೋಗ್ಯ ಪ್ರಾಧಿಕಾರಗಳು ಮಂಗಳವಾರ ಹೊಸ ಮಾರ್ಗಸೂಚಿ ಹೊರಡಿಸಿವೆ.

               ಇಂಗ್ಲೆಂಡ್ ನಲ್ಲಿ ಈ ವಾರದಲ್ಲಿ 71 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟಾರೇ ಪ್ರಕರಣಗಳ ಸಂಖ್ಯೆ 179ಕ್ಕೆ ಏರಿಕೆಯಾಗಿರುವುದರಿಂದ ಸ್ಕಾಟ್ ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ವೆಲ್ಸ್ ಗಳ ಆರೋಗ್ಯ ಪ್ರಾಧಿಕಾರಗಳೊಂದಿಗೆ ಯುಕೆ ಆರೋಗ್ಯ ಸುರಕ್ಷತಾ ಏಜೆನ್ಸಿ ಈ ಹೊಸ ಆದೇಶ ಮಾರ್ಗಸೂಚಿ ಬಿಡುಗಡೆ ಮಾಡಿದೆ.  ಮಂಕಿಪಾಕ್ಸ್ ಸೋಂಕಿತರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ಸಹ ನಿಲ್ಲಿಸುವಂತೆ ಸಲಹೆ ನೀಡಲಾಗಿದೆ. 

              ಮಂಕಿಪಾಕ್ಸ್ ಸಾಮಾನ್ಯವಾಗಿ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಭರವಸೆ ನೀಡುತ್ತೇವೆ. ಒಟ್ಟಾರೇ ಸಾಮಾನ್ಯ ಜನರಿಗೆ ತೊಂದರೆ ಕಡಿಮೆಯಾಗಿದೆ ಎಂದು ವೆಲ್ಸ್ ನ  ಹೆಲ್ತ್ ಪ್ರೊಟೆಕ್ಷನ್ ಫಾರ್ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕ  ಅನಿವಾಸಿ ಭಾರತೀಯ ಡಾ. ಗಿರಿ ಶಂಕರ್  ಹೇಳಿದ್ದಾರೆ.

                  ಈ ಮಾರ್ಗಸೂಚಿ ಅಭಿವೃದ್ಧಿಗೆ ಸ್ಕಾಟ್ ಲ್ಯಾಂಡ್, ಉತ್ತರ ಐರ್ಲೆಂಡ್ ನ ಸಾರ್ವಜನಿಕ ಆರೋಗ್ಯ ಏಜೆನ್ಸಿ  ಹಾಗೂ ಯುಕೆ ಹೆಲ್ತ್ ಸುರಕ್ಷತಾ ಏಜೆನ್ಸಿಯೊಂದಿಗೆ ಕಾರ್ಯೋನ್ಮುಖರಾಗಿರುವುದಾಗಿ ಅವರು ತಿಳಿಸಿದ್ದಾರೆ. 

                  ಮಂಕಿಪಾಕ್ಸ್ ದೃಢಪಟ್ಟ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಐಸೋಲೆಟೆಡ್ ಆಗಬೇಕು, ತಮ್ಮ ದೇಹದ ಯಾವುದೇ ಭಾಗದಲ್ಲಾದರೂ ಹೊಸ ಗಾಯ ಅಥವಾ ದದ್ದು, ಕಲೆಗಳು, ಕಾಣಿಸಿಕೊಂಡರೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ. ಸೆಕ್ಸ್ ಮೂಲಕವೂ ಮಂಕಿಪಾಕ್ಸ್ ಹರಡುವ ಬಗ್ಗೆ ಪುರಾವೆಗಳು ದೂರೆತಿರುವುದರಿಂದ ಅದಷ್ಟು ಅದನ್ನು ತಡೆಗಟ್ಟುವುದು ಒಳಿತು. ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸುವಂತೆ  ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries