ಕೆಎಸ್ ಆರ್ ಟಿಸಿಗೆ 12,100 ಕೋಟಿ ಸಾಲ ಬಾಕಿ; ಸರ್ಕಾರಕ್ಕೆ 8713.05 ಕೋಟಿ; ಅಫಿಡವಿಟ್ ಸಲ್ಲಿಕೆ

                    ಕೊಚ್ಚಿ: ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೆಎಸ್ ಆರ್ ಟಿಸಿಯ ಸಾಲ ಬಾಕಿ 12,100 ಕೋಟಿ ರೂ.ಎಂದು ಹೇಳಲಾಗಿದೆ.  ಕೆಎಸ್ ಆರ್ ಟಿಸಿ ನೌಕರರಿಗೆ ವೇತನ ಪಾವತಿ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮಾಹಿತಿ ಬಹಿರಂಗಗೊಂಡಿದೆ. 

                    ಸರ್ಕಾರಕ್ಕೆ 8713.05 ಕೋಟಿ ಮತ್ತು ಕೆಟಿಡಿಎಫ್‍ಸಿಗೆ `356.65 ಕೋಟಿ.ಸಾಲ ಬಾಕಿಯಿದೆ.  ಬ್ಯಾಂಕ್ ಕನ್ಸೋರ್ಟಿಯಂ 3030.64 ಕೋಟಿ ರೂ.ಇದೆ.  ಒಟ್ಟು 5,255 ಬಸ್‍ಗಳು ಸಂಚರಿಸುತ್ತಿದ್ದು, ಅದರಲ್ಲಿ 300 ಬಸ್‍ಗಳು ನಿರುಪಯುಕ್ತವಾಗಿವೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

            ಈ ಮಧ್ಯೆ, ಕೆಎಸ್‍ಆರ್‍ಟಿಸಿಯಲ್ಲಿ ವೇತನ ವಿಳಂಬ ವಿರೋಧಿಸಿ ಸಿಐಟಿಯು ಸೇರಿದಂತೆ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ತೀವ್ರಗೊಳಿಸಿವೆ. ಮಹಿಳಾ ಕಾರ್ಮಿಕರು ಸೇರಿದಂತೆ ಸುಮಾರು 300 ಮಂದಿ ಮುಷ್ಕರ ನಡೆಸುತ್ತಿರುವರು.  ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಗೇಟ್ ಒಳಗೆ ನುಗ್ಗಲೆತ್ನಿಸಿರುವರು.  ಕಳೆದ 14 ದಿನಗಳಿಂದ ಸೆಕ್ರೆಟರಿಯೇಟ್ ಎದುರು ಬಿಎಂಎಸ್ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ. ಐಎನ್‍ಟಿಯುಸಿ ಕೂಡ ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಗೆ ಮೆರವಣಿಗೆ ನಡೆಸಿತು. ಮುಷ್ಕರದ ಹಿನ್ನೆಲೆಯಲ್ಲಿ ಇದೇ 27ರಂದು ಚರ್ಚೆಗೆ ಸಾರಿಗೆ ಸಚಿವ ಆಂಟನಿ ರಾಜು ಕರೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries