16 ವರ್ಷ ಮೇಲ್ಪಟ್ಟ ಮುಸ್ಲಿಂ ಯುವತಿ ಆಕೆ ಇಷ್ಟಪಟ್ಟ ಪುರುಷನನ್ನು ವಿವಾಹವಾಗಬಹುದು: ಹರಿಯಾಣ ಹೈಕೋರ್ಟ್

 ನವದೆಹಲಿ: 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಯುವತಿ ಆಯ್ಕೆ ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಮದುವೆಯಾಗಬಹುದು ಎಂದು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಮುಸ್ಲಿಂ ದಂಪತಿಯ ರಕ್ಷಣೆ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಸ್ಚಿತ್ ಸಿಂಗ್ ಬೇಡಿ ಅವರು ಈ ಆದೇಶ ನೀಡಿ ಅರ್ಜಿಯ ವಿಲೇವಾರಿ ಮಾಡಿದ್ದಾರೆ. ಈ ಪ್ರಕರಣದಲ್ಲಿ 21 ವರ್ಷದ ಯುವಕ ಮತ್ತು 16 ವರ್ಷದ ಯುವತಿ ಕುಟುಂಬ ಸದಸ್ಯರಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಅರ್ಜಿದಾರರ ಪ್ರಕಾರ, ದಂಪತಿಗಳು ಕೆಲ ವರ್ಷದಿಂದ ಪ್ರೀತಿಸುತ್ತಿದ್ದು ಅದರಂತೆ 2022ರ ಜೂನ್ 8ರಂದು ಮುಸ್ಲಿಂ ವಿಧಿ ಮತ್ತು ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದರು. ಇನ್ನು ಇವರಿಗೆ ಪೋಷಕರಿಂದ ಜೀವ ಬೆದರಿಕೆ ಇದ್ದಿದ್ದರಿಂದ ದಂಪತಿ ಪಠಾಣ್ ಕೋಟ್ ನ ಹಿರಿಯ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು. 

ಅರ್ಜಿದಾರ ದಂಪತಿಗಳು, ತಮ್ಮ ವಕೀಲರು ಮುಸ್ಲಿಂ ಕಾನೂನಿನಲ್ಲಿ, ಋತುಮತಿಯಾಗುವುದು ಮತ್ತು ಪ್ರಾಪ್ತೆ ಒಂದೇ ಆಗಿರುತ್ತದೆ. ಹುಡುಗಿ 15 ವರ್ಷ ವಯಸ್ಸಿನಲ್ಲಿ ಋತುಮತಿಯಾಗುತ್ತಾಳೆ. ಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಹುಡುಗ ಅಥವಾ ಮುಸ್ಲಿಂ ಹುಡುಗಿ ತಾನು ಇಷ್ಟಪಡುವ ಯಾರನ್ನಾದರೂ ಮದುವೆಯಾಗಲು ಸ್ವಾತಂತ್ರ್ಯವಿದೆ ಮತ್ತು ಪೋಷಕರಿಗೆ ಮಧ್ಯಪ್ರವೇಶಿಸುವ ಹಕ್ಕಿಲ್ಲ ಎಂದು ವಾದಿಸಿದರು.

ನ್ಯಾಯಮೂರ್ತಿ ಬೇಡಿ ಅವರು ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ ಎಂದು ಕಾನೂನು ಸ್ಪಷ್ಟವಾಗಿದೆ. ಸರ್ ದಿನ್‌ಶಾ ಫರ್ದುಂಜಿ ಮುಲ್ಲಾ ಅವರ 'ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ' ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರೆ 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥರಾಗಿದ್ದಾರೆ. ಅರ್ಜಿದಾರ ನಂ.1 (ಹುಡುಗ) ವಯಸ್ಸು 21 ವರ್ಷಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಹೀಗಾಗಿ, ಇಬ್ಬರೂ ಅರ್ಜಿದಾರರು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿದ್ದಾರೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries