HEALTH TIPS

ಇಂಧನ ದರ ಪರಿಷ್ಕರಿಸುವಂತೆ ಮನವಿ; ಡೀಸೆಲ್​ಗೆ 20-25 ರೂ. ಪೆಟ್ರೋಲ್​ಗೆ 14-18 ರೂ. ನಷ್ಟ

 ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿದ್ದರೂ ಇದಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಆಗುತ್ತಿಲ್ಲ. ಇದರಿಂದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಡೀಸೆಲ್​ಗೆ 14ರಿಂದ 18 ರೂಪಾಯಿ ಮತ್ತು ಡೀಸೆಲ್​ಗೆ 20ರಿಂದ 25 ರೂಪಾಯಿ ನಷ್ಟವಾಗುತ್ತಿದೆ.

ಇಂಧನವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದು ಅಸಮರ್ಥನೀಯ. ಹೀಗಾಗಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಭಾರತೀಯ ಪೆಟ್ರೋಲಿಯಂ ಇಂಡಸ್ಟ್ರಿ ಫೆಡರೇಷನ್ (ಎಫ್​ಐಪಿಐ) ಮನವಿ ಮಾಡಿದೆ. ಜಿಯೊ-ಬಿಪಿ, ನಯರ ಎನರ್ಜಿ, ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್​ಪಿಸಿಎಲ್ ತೈಲ ಸಂಸ್ಕರಣಾ ಕಂಪನಿಗಳನ್ನು ಒಳಗೊಂಡ ಎಫ್​ಐಪಿಐ, ಈ ಸಂಬಂಧ ತೈಲ ಸಚಿವಾಲಯಕ್ಕೆ ಪತ್ರ ಬರೆದಿದೆ.

ನಷ್ಟದಲ್ಲಿ ಇಂಧನ ಮಾರಾಟ ಮಾಡುವುರಿಂದ ಚಿಲ್ಲರೆ ವ್ಯಾಪಾರದಲ್ಲಿ ಹೂಡಿಕೆಯನ್ನು ಮೊಟಕುಗೊಳಿಸುತ್ತದೆ. ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಗಗನಕ್ಕೇರಿದೆ. ಆದರೆ ದೇಶೀಯ ಮಾರುಕಟ್ಟೆಯನ್ನು ಶೇ. 90ರಷ್ಟು ನಿಯಂತ್ರಿಸುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ವೆಚ್ಚದಲ್ಲಿ ಮೂರನೇ ಎರಡರಷ್ಟು ಸ್ಥಗಿತಗೊಳಿಸಿವೆ. ಇದು ಖಾಸಗಿ ಕಂಪನಿಗಳಿಗೆ ಬೆಲೆ ಹೆಚ್ಚಿಸಲು, ತನ್ಮೂಲಕ ಗ್ರಾಹಕರನ್ನು ಕಳೆದುಕೊಳ್ಳಲು ಹಾಗೂ ಮಾರಾಟವನ್ನು ಕಡಿತಗೊಳಿಸಲು ಪ್ರೇರೇಪಿಸಿದೆ.

ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್​ಗಳನ್ನು ಮುಚ್ಚಿ ಕೃತಕ ಕೊರತೆ ಸೃಷ್ಟಿಸಲಾಗಿತ್ತು ಎಂದು ಎಫ್​ಐಪಿಐ ಪತ್ರದಲ್ಲಿ ತಿಳಿಸಿದೆ. 2022 ಮಾರ್ಚ್ 22ರಿಂದ ಜಾರಿಗೆ ಬರುವಂತೆ ಚಿಲ್ಲರೆ ಮಾರಾಟ ಬೆಲೆಯನ್ನು ದಿನಕ್ಕೆ ಸರಾಸರಿ ಲೀಟರ್​ಗೆ 80 ಪೈಸೆಯಂತೆ 14 ಸಂದರ್ಭಗಳಲ್ಲಿ ಪರಿಷ್ಕರಿಸಲಾಯಿತು. ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಪ್ರತಿ ಲೀಟರ್​ಗೆ ಒಟ್ಟಾರೆ 10 ರೂ. ಹೆಚ್ಚಳಕ್ಕೆ ಕಾರಣವಾಯಿತು. ಆದಾಗ್ಯೂ ಡೀಸೆಲ್​ಗೆ ಲೀಟರ್​ಗೆ 20ರಿಂದ 25 ರೂ. ಮತ್ತು ಪೆಟ್ರೋಲ್​ಗೆ 14ರಿಂದ 18 ರೂ. ವ್ಯಾಪ್ತಿಯಲ್ಲಿ ನಷ್ಟ ಮುಂದುವರಿದಿದೆ ಎಂದು ಎಫ್​ಐಪಿಐ ನಿರ್ದೇಶಕ ಗುರ್ವಿುತ್ ಸಿಂಗ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries