HEALTH TIPS

ಪ್ಲಸ್ ಟು ಪರೀಕ್ಷೆ ಫಲಿತಾಂಶ ಪ್ರಕಟ; ಉತ್ತೀರ್ಣರ ಪ್ರಮಾಣ ಕಡಿಮೆ ಎಂದ ಶಿಕ್ಷಣ ಸಚಿವರು; 83.87 ಶೇ. ಉತ್ತೀರ್ಣ: ನೂರು ಶೇ. ಯಶಸ್ಸನ್ನು ಪಡೆದ ಶಾಲೆಗಳ ಸಂಖ್ಯೆಯಲ್ಲಿ ಕುಸಿತ

                 ತಿರುವನಂತಪುರ: ಪ್ಲಸ್ ಟು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. 83.87 ಶೇ ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.87.94 ಇತ್ತು. ಈ ಬಾರಿ ಯಶಸ್ಸಿನ ಪ್ರಮಾಣ ಶೇಕಡ ನಾಲ್ಕಕ್ಕಿಂತ ಕಡಿಮೆಯಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಶಿವಂಕುಟ್ಟಿ ಮಾಹಿತಿ ನೀಡಿದರು.

                   ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು (87.79)ಮಂದಿ ಉತ್ತೀರ್ಣರಾಗಿದ್ದಾರೆ. ವಯನಾಡ್ ಜಿಲ್ಲೆ ಅತ್ಯಂತ ಕಡಿಮೆ ಶೇಕಡಾವಾರು (75.07) ಉತ್ತೀರ್ಣತೆಯನ್ನು ಹೊಂದಿದೆ. 78 ಶಾಲೆಗಳು ಶೇ 100ರಷ್ಟು ಯಶಸ್ಸು ಸಾಧಿಸಿವೆ. ಕಳೆದ ವರ್ಷ 136 ಶಾಲೆಗಳು ಶೇ.100ರಷ್ಟು ಯಶಸ್ಸು ಸಾಧಿಸಿದ್ದವು. ಮಲಪ್ಪುರಂ ಜಿಲ್ಲೆ  ಎ ಪ್ಲಸ್ ನೊಂದಿಗೆ ಅತಿ ಹೆಚ್ಚು (4283) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 


              ಈ ವರ್ಷ ರಾಜ್ಯದಲ್ಲಿ ಒಟ್ಟು 3,61,091 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,02,865 ಮಂದಿ ಉತ್ತೀರ್ಣರಾಗಿದ್ದಾರೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 27 ಆಗಿದೆ. ಸೇ ಮತ್ತು ಸುಧಾರಣಾ ಪರೀಕ್ಷೆಗಳಿಗೆ ಅರ್ಜಿಗಳನ್ನು ಜೂನ್ 25 ರೊಳಗೆ ಸಲ್ಲಿಸಬೇಕು. ಜುಲೈ 25ರಿಂದ ಪರೀಕ್ಷೆ ಆರಂಭವಾಗಲಿದೆ.

                  ಪ್ಲಸ್ ಟು ಫಲಿತಾಂಶ ಮಧ್ಯಾಹ್ನ 12ರಿಂದ ವೆಬ್‍ಸೈಟ್‍ಗಳಲ್ಲಿ ಲಭ್ಯವಿದೆ. ಫಲಿತಾಂಶ ವೀಕ್ಷಿಸಲು ಕೆಳಗಿನ ಜಾಲತಾಣ ಸಂಪರ್ಕಿಸಬಹುದು. www.dhsekerala.gov.in, www.prd.kerala.gov.in, www.examresults.kerala.gov.in, www.results.kite.kerala.gov.in, www.keralaresults.gov.in


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries