ಸೈಬರ್ ಸೇನೆ ವಿಫಲಗೊಳಿಸಲು ಭಾರತ ಸಿದ್ಧ: ಅಮಿತ್ ಶಾ

 ನವದೆಹಲಿ:ಭಾರತದ ವಿರುದ್ಧ ಸೈಬರ್ ದಾಳಿಯನ್ನು ಆರಂಭಿಸಲು ಭಾರತ ವಿರೋಧಿ ಶಕ್ತಿಗಳು 'ಸೈಬರ್ ಸೇನೆ'ಯನ್ನು ರೂಪಿಸಿವೆ. ಆದರೆ, ಅಂತಹ ಪ್ರಯತ್ನವನ್ನು ವಿಫಲಗೊಳಿಸಲು ಗೃಹ ಸಚಿವಾಲಯ ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಹಿನ್ನೆಲೆಯಲ್ಲಿ ಸೈಬರ್ ದಾಳಿಯಿಂದ ದತ್ತಾಂಶ ಗೌಪ್ಯತೆ ಹಾಗೂ ನಿರ್ಣಾಯಕ ಮೂಲಸೌಕರ್ಯದ ರಕ್ಷಣೆ ಸನ್ನಿಹಿತವಾಗಿರುವ ಸವಾಲಾಗಿದೆ. ಅಲ್ಲದೆ, 80 ಕೋಟಿ ಭಾರತೀಯರು ಆನ್‌ಲೈನ್‌ನಲ್ಲಿ ಇರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.

ಸೈಬರ್ ಸುರಕ್ಷತೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅಮಿತ್ ಶಾ ಅವರು ಮಾತನಾಡಿದರು. ದೇಶದಲ್ಲಿ ಸೈಬರ್ ಅಪರಾಧವನ್ನು ತಡೆಯಲು ಸಾಮೂಹಿಕ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಗೃಹ ಸಚಿವಾಲಯ ಈ ಸಮಾವೇಶ ಆಯೋಜಿಸಿತ್ತು.
ತಂತ್ರಜ್ಞಾನ ದೇಶದ ಅತ್ಯಂತ ಕೆಳಗಿನ ಹಂತಕ್ಕೂ ಪ್ರವೇಶಿಸಿದೆ. ಸೈಬರ್ ಕ್ಷೇತ್ರವನ್ನು ರಕ್ಷಿಸಲು ಕ್ರಮ ಕೈಗೊಳ್ಳದೇ ಇದ್ದರೆ, ಅದು ನಮಗೆಲ್ಲರಿಗೂ ಸವಾಲಾಗಬಹುದು ಎಂದು ಅವರು ಹೇಳಿದರು.

ಪ್ರತಿ ಭಾರತೀಯನೂ ಅಂತರ್ಜಾಲ ಹಾಗೂ ತಂತ್ರಜ್ಞಾನದಲ್ಲಿ ಸಬಲೀಕರಣಗೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರು ನಿಲುವು ಎಂದು ಅವರು ಹೇಳಿದರು.
ಇಂದು 130 ಕೋಟಿ ಜನರು ನೇರ ಸೌಲಭ್ಯ ವರ್ಗಾವಣೆ ಸ್ವೀಕರಿಸಲು ಸಮರ್ಥರಾಗಿದ್ದಾರೆ. ಭ್ರಷ್ಟಾಚಾರ ಹಾಗೂ ಇತರ ಕಾರಣಗಳಿಂದಾಗಿ 60 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳೇ ಇಲ್ಲದಿದ್ದುದರಿಂದ 2014ಕ್ಕಿಂತ ಹಿಂದೆ ಇದನ್ನು ಚಿಂತಿಸಲು ಕೂಡ ಸಾಧ್ಯವಿರಲಿಲ್ಲ ಎಂದು ಅಮಿತ್ ಶಾ ಅವರು ಹೇಳಿದರು.

ಕಳೆದ ಕೆಲವು ದಿನಗಳಿಂದ ಜಾರ್ಖಂಡ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸೈಬರ್ ವಂಚನೆ ನಡೆಸಿದ ಜಾರ್ಖಂಡ್‌ನ ಈ ''ಮಕ್ಕಳ'' ಬಗ್ಗೆ ನೀವು ಜಾಗೃತಿ ಹೊಂದಬೇಕು. ರಾಜ್ಯದಲ್ಲಿ ಕೂಡ ಈ ಅಭಿಯಾನ ನಡೆಯುತ್ತಿರುವುದು ತನಗೆ ಸಂತಸ ಉಂಟು ಮಾಡಿದೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries