HEALTH TIPS

ಜೂನ್‌ನಲ್ಲಿ 'ಅಪ್ಪಂದಿರ ದಿನ' ಯಾವಾಗ ? ಈ ಆಚರಣೆಯ ಹಿಂದಿದೆ ಈ ಹಿನ್ನೆಲೆ

 Father's day 2022: ಅಪ್ಪ ಎಂದರೇ ಆಕಾಶ ಎನ್ನುವುದೇಕೆ : ಬನ್ನಿ ಈ ದಿನ ತಂದೆಯ ತ್ಯಾಗವನ್ನು ನೆನೆಯೋಣ

ಅಮ್ಮ ಮಗುವನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿರಿಸಿ, ತನ್ನ ಕಂದಮ್ಮನಿಗೆ ಏನೂ ತೊಂದರೆಯಾಗದಂತೆ ನೋಡಿಕೊಂಡರೆ. ಅಪ್ಪ ತನ್ನ ಇಡೀ ಸರ್ವಸ್ವವನ್ನೇ ತನ್ನ ಮಗುಗಾಗಿ ಒತ್ತೆ ಇಡುತ್ತಾನೆ. ಮಗುವಿನ ಜೀವನಕ್ಕೆ ಸಂಪೂರ್ಣ ಆಸರೆಯಾಗಿ ನಿಲ್ಲುತ್ತಾನೆ. ಮಕ್ಕಳ ಜೀವನದಲ್ಲಿ ತಂದೆ-ತಾಯಿಗೆ ವಿಶೇಷ ಸ್ಥಾನಮಾನವಿದೆ.

ತಾಯಿಯಂತೆ ತಂದೆಯೂ ಮಕ್ಕಳಿಗಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾನೆ. ಆದರೆ ಎಲೆಮರೆ ಕಾಯಿಯಂತೆ ಅಪ್ಪ ಉಳಿದು ಬಿಡುತ್ತಾನೆ. ಇಷ್ಟೇಲ್ಲ ಪೀಠಿಕೆ ಹಾಕಲು ಕಾರಣ ಇಂದು ಅಪ್ಪಂದಿರ ದಿನಾಚರಣೆ. ಜಗತ್ತಿನ ವಿವಿಧೆಡೆ ಇಂದು ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲೂ ಈ ದಿನ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಗಲು ಬೆವರಿನ ಕೂಲಿಕಾರನಾಗಿ, ರಾತ್ರಿ ಮನೆಯ ಚೌಕಿದಾರನಾಗಿ, ಎಲ್ಲ ಕೊಡಿಸುವ ಸಾಹುಕಾರ ಅಪ್ಪನಾಗಿದ್ದಾನೆ. ಕೋಪ ಬಂದಾಗ ಗದರಿಸಿದರು ಅಪ್ಪನ ಮನಸು ನಿಜಕ್ಕೂ ಕೋಮಲ. ಹೀಗೆ ಅಪ್ಪನ ಬಗ್ಗೆ ಹೊಗಳಲು ಪದಗಳೇ ಸಾಲದು.

ತ್ಯಾಗಮಯಿ ಅಪ್ಪ!

ಅಪ್ಪ ಅದೆಷ್ಟೋ ನೋವು-ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದಿನವಿಡೀ ದುಡಿಯುತ್ತಾರೆ. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯ ಕಾಣುವವರೆಗೂ ಮಕ್ಕಳ ಕೈ ಹಿಡಿದು ನಡೆಸುವ ಪ್ರತ್ಯಕ್ಷ ದೇವರು ಅವರು. ಹಗಲಿರುಳು ದುಡಿದು- ತನ್ನ ಕಷ್ವ ಬದಿಗಿಟ್ಟು ಮಕ್ಕಳಿಗೆ ಪ್ರೀತಿಯನ್ನು ಮಾತ್ರ ಉಣಬಡಿಸುವವರು ಅಪ್ಪ. ಈ ಎರಡಕ್ಷರದ ಪದದಲ್ಲಿ ಅದೆಷ್ಟು ಗಾಂಭೀರ್ಯ, ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ ಇರುವುದಂತು ನಿಜ. ಅದಕ್ಕಾಗಿಯೇ ಅಪ್ಪ ಎಂದರೆ ಆಕಾಶ ಎನ್ನುತ್ತಾರೆ. ಅವರ ತ್ಯಾಗ, ಪ್ರೀತಿ ಆಕಾಶದಷ್ಟೇ ನಿಶ್ಕಲ್ಮಶ ಮತ್ತು ವಿಸ್ತಾರ. ದುಡಿದು ಮನೆಯ ಸಾಕುವ ಯಜಮಾನ. ತನ್ನ ದೇಹವನ್ನು ಕುಟುಂಬಕ್ಕಾಗಿ ಸವೆಯುತ್ತಾರೆ. ತನಗೆ ಚೆನ್ನಾಗಿರುವ ಬಟ್ಟೆ, ಶೂ ಇಲ್ಲದಿದ್ದರೂ ತನ್ನ ಮಗನನ್ನು ಉತ್ತಮ ಶಾಲೆಗೆ ಸೇರಿಸುತ್ತಾನೆ. ಉತ್ತಮ ಬಟ್ಟೆ, ಉತ್ತಮ ಆಹಾರ ಕೊಡಿಸುತ್ತಾನೆ. ಮಕ್ಕಳು ಕೇಳಿದ ಎಲ್ಲವನ್ನೂ ಕೊಡಿಸುವ ಸಕಾರ ಮೂರ್ತಿ ಅಪ್ಪ.

ಅಪ್ಪಂದಿರ ದಿನಕ್ಕೆ ಡೇಟ್ ಫಿಕ್ಸ್ ಆಗಿಲ್ಲ! ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್​ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಇಂತಹುದೇ ದಿನ ಎಂದು ಫಿಕ್ಸ್ ಆಗಿಲ್ಲ. ಜೂನ್ ತಿಂಗಳ ಮೂರನೇ ಭಾನುವಾರ ಯಾವ ದಿನ ಬರುತ್ತದೆ ಆ ದಿನದಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಸ್ಪೇನ್​ ಮತ್ತು ಪೋರ್ಚುಗಲ್​ನಂತಹ ದೇಶಗಳು ಮಾರ್ಚ್​ 19ರಂದು ಸೇಂಟ್​ ಜೋಸೆಫ್​ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್​ನಲ್ಲಿ ಆಗಸ್ಟ್​ 8ರಂದು ಹಾಗೂ ಥೈಲಾಂಡ್​ನಲ್ಲಿ ಡಿಸೆಂಬರ್​ 5ರಂದು ಆಚರಿಸಲಾಗುತ್ತದೆ.

ಅಪ್ಪಂದಿರ ದಿನದ ಹಿನ್ನೆಲೆ ಏನು? ಅಮೆರಿಕದಲ್ಲಿ ಭೀಕರವಾದ ಅಪಘಾತವೊಂದು ಅಪ್ಪನ ದಿನಾಚರಣೆಗೆ ನಾಂದಿ ಹಾಡಿತು. ಹೌದು, 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಈ ಪೈಕಿ ಓರ್ವರ ಮಗಳು ಗ್ರೇಸ್​ ಗೋಲ್ಡನ್​ ಕ್ಲೇಟನ್ ಎಂಬಾಕೆ​, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದ್ದಳು. ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್​ ಡಾಡ್​ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ತಂದೆಯ ದಿನಾಚರಣೆಯನ್ನು ಜೂನ್ ತಿಂಗಳ ಮೂರನೇ ಭಾನುವಾರ ಆಚರಿಸುವ ಬಗ್ಗೆ ಘೋಷಣೆ ಹೊರಡಿಸಿದ ಬಳಿಕ ಅಮೆರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ತದ ನಂತರ ಜೂನ್ ತಿಂಗಳ ಮೂರನೇ ಭಾನುವಾರ ಅಮೆರಿಕ, ಭಾರತ ಸೇರಿ ವಿವಿಧ ದೇಶಗಳಲ್ಲಿ ಅಪ್ಪಂದಿರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೋನೋರ ಸ್ಮಾರ್ಟ್​ ಡಾಡ್ ನಿಂದ ತಂದೆಯ ದಿನಾಚರಣೆ! ಅಮೆರಿಕ ಮೂಲದ ಸೋನೋರ ಸ್ಮಾರ್ಟ್​ ಡಾಡ್ ಎಂಬಾಕೆ ಮೊಟ್ಟ ಮೊದಲ ಬಾರಿಗೆ ಅಪ್ಪನ ದಿನಾಚರಣೆಯನ್ನು ಆರಂಭಿಸದಳು. ಅದಕ್ಕೆ ಕಾರಣ ಕೂಡ ಇದೆ. ಸೋನೋರ ಸ್ಮಾರ್ಟ್​ ಡಾಡ್ ಹಾಗೂ ಆಕೆಯ ಐವರು ಸಹೋದರ-ಸಹೋದರಿಯರು ಸಣ್ಣ ಪ್ರಾಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ತದ ನಂದರ ಇವರ ತಂದೆಯೇ ಇವರಿಗೆ ತಾಯಿಯಾಗಿದ್ದರು. ಮಕ್ಕಳ ಪೋಷಣೆ,. ವಿಧ್ಯಾಭ್ಯಾಸ, ಮಕ್ಕಳ ಆರೈಕೆ ಎಲ್ಲವೂ ಇವರ ತಂದೆ ನೋಡಿಕೊಳ್ಳುತ್ತಿದ್ದರು. ತಂದೆಯ ಆಶ್ರಯದಲ್ಲೇ ಮಕ್ಕಳು ಬೆಳೆದರು. ತಾಯಿ ಇಲ್ಲ ಎಂಬ ನೋವನ್ನು ಇವರ ತಂದೆ ದೂರ ಮಾಡಿದ್ದರು. ತಂದೆಯ ತ್ಯಾಗ, ಪ್ರೀತಿಗಾಗಿ ಸೋನೋರ ಸ್ಮಾರ್ಟ್​ ಡಾಡ್ ತಂದೆಯ ದಿನಾಚರಣೆಯನ್ನು ಮೊಟ್ಟ ಮೊದಲಿಗೆ ಆಚರಿಸದರು. ಇದು ಅಮೆರಿಕದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿತು. ತಂದೆಯ ತ್ಯಾಗಕ್ಕೆ ನಂತರ ಜನರು ಸಲಾಂ ಎಂದರು.

ಅಪ್ಪಂದಿರ ದಿನದ ಮಹತ್ವ! ಕುಟುಂಬದಲ್ಲಿ ತಂದೆಯ ಕೊಡುಗೆಯನ್ನು ಅರಿತುಕೊಳ್ಳುವ ಮತ್ತು ಗೌರವಿಸುವ ಉದ್ದೇಶದಿಂದ ತಂದೆಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ಪಿತೃತ್ವ, ಪಿತೃ ಬಂಧಗಳು ಮತ್ತು ಪುರುಷ ಪೋಷಕರು ತಮ್ಮ ಕುಟುಂಬ ಮತ್ತು ಅವರ ಮಕ್ಕಳಿಗಾಗಿ ಮಾಡಿದ ಕಾರ್ಯಗಳನ್ನು ಸ್ಮರಿಸುವ ದಿನ. ಅವರ ತ್ಯಾಗಕ್ಕೂ ಗೌರವ ಕೊಡುವ ದಿನ ಎಂದೇ ಈ ದಿನ ಖ್ಯಾತಿ ಪಡೆದಿದೆ. ಅಂದು ಅನೇಕ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಕಾರ್ಯಕ್ರಮ ನಡೆಸುತ್ತಾರೆ.

ತಂದೆಯ ದಿನಾಚರಣೆ ಆಚರಿಸುವುದು ಹೇಗೆ? ಕಣ್ಣ ಹನಿ ಕೆಳಗೆ ಬೀಳದಂತೆ, ಕಾಲಿಗೆ ಮುಳ್ಳು ಚುಚ್ಚದಂತೆ ಬೆನ್ನ ಮೇಲೆಯೇ ಹೊತ್ತು ಸಾಕಿದ ಪ್ರೀತಿ ಅಪ್ಪನಿಗಾಗಿ ಇಂದು ಸರ್ಪೈಸ್​​ ಗಿಫ್ಟ್​ ಕೊಟ್ಟು ಅವರ ಜೊತೆಗೆ ಸಮಯ ಕಳೆಯುವುದರ ಮೂಲಕ ಅಪ್ಪನ ದಿನವನ್ನು ಆಚರಿಸಿಕೊಳ್ಳಬಹುದು. ಭಾರತದಲ್ಲಿ ಬಹಳ ಪ್ರೀತಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ.ತಮ್ಮ ತಂದೆಗೆ ವಿಶೇಷ ಭಾವನೆ ಮೂಡಿಸಲು ಅವರು ಉಡುಗೊರೆಗಳು, ಹೃದಯಸ್ಪರ್ಶಿ ಕಾರ್ಡ್‌ಗಳು, ವಿಹಾರ ಮತ್ತು ಭೋಜನ ಮಾಡುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮಕ್ಕಳು ತಮ್ಮ ತಂದೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ವಿದೇಶದಲ್ಲಿ ಅವರದ್ದೇ ಆದ ರೀತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries