HEALTH TIPS

ಕೇರಳ ಪರಸ್ಪರ ಅವಲಂಬನೆ ಮತ್ತು ಜವಾಬ್ದಾರಿಯ ಮಾದರಿಯಾಗಿದೆ; ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್: ಸ್ನೇಹ ಮನೆಯ ಕೀಲಿಕೈ ಹಸ್ತಾಂತರಿಸಿ ಅಭಿಮತ

                   ಕಾಸರಗೋಡು: ಕೇರಳವು ಪರಸ್ಪರ ಅವಲಂಬನೆ ಮತ್ತು ಜವಾಬ್ದಾರಿಯ ಮಾದರಿಯಾಗಿದೆ ಎಂದು ಹಣಕಾಸು ಸಚಿವ ಕೆ. ಎನ್.ಬಾಲಗೋಪಾಲನ್ ಹೇಳಿದರು. 

               ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಅಸೋಸಿಯೇಶನ್ ನಿರ್ಮಿಸಿದ ಸ್ನೇಹ ಭವನದ ಕೀಲಿಕೈ ಹಸ್ತಾಂತರಿಸಿ ಅವರು ಮಾತನಾಡಿದರು. 

               ನಮ್ಮಲ್ಲಿರುವದರಲ್ಲಿ ಸ್ವಲ್ಪ ಭಾಗವನ್ನು ಇತರರಿಗೆ ನೀಡುವುದು ಸಣ್ಣ ವಿಷಯವಲ್ಲ. ಕೇರಳವು ಪರಸ್ಪರ ಅವಲಂಬನೆ ಮತ್ತು ಜವಾಬ್ದಾರಿಗೆ ಉತ್ತಮ ಉದಾಹರಣೆಯಾಗಿದೆ. ಕೇರಳ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿ ಕೆಲಸ ಮಾಡುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸಾಮಾಜಿಕ ಅರಿವು ಮತ್ತು ಶಿಸ್ತು ಮೂಡಿಸಲು ಸಹಾಯ ಮಾಡುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇತರರಿಗೆ ಸಹಾಯ ಮಾಡಲು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಮುಂದೆ ಬಂದಿದ್ದರು. ಕೇರಳದ ಅನೇಕ ಸ್ವಯಂಸೇವಾ ಸಂಸ್ಥೆಗಳು ಇತರರಿಗೆ ಸಹಾಯ ಮಾಡಲು ಸಿದ್ಧವಾಗಿವೆ ಎಂಬುದು ಗಮನಾರ್ಹ. ಸ್ಥಳೀಯಾಡಳಿತ  ಸಂಸ್ಥೆಗಳು ಜಾರಿಗೆ ತಂದಿರುವ ಮಂಸೋಡಿತಿರಿ ಮಣ್ಣು ಯೋಜನೆಯಲ್ಲಿ ಅನೇಕರು ಬೇರೆಯವರಿಗೆ ನಿವೇಶನ ನೀಡಲು ಮುಂದೆ ಬರುತ್ತಿದ್ದಾರೆ ಎಂದರು. 

             ನಗರಸಭೆಯ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಶಾಸಕ ಸಿ.ಎಚ್.  ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಮೂರು ಉಪಜಿಲ್ಲಾ ಶಾಲೆಗಳಾದ ಕಾಸರಗೋಡು ಉಪಜಿಲ್ಲೆಯ ಜಿಎಚ್‍ಎಸ್‍ಎಸ್ ಬಂದಡ್ಕ, ಕುಂಬಳೆ  ಉಪಜಿಲ್ಲೆಯ ಎಸ್‍ಎಸ್‍ಎಚ್‍ಎಸ್‍ಎಸ್ ಶೇಣಿ ಮತ್ತು ಮಂಜೇಶ್ವರ ಉಪಜಿಲ್ಲೆಯ ಎಸ್‍ಎಸ್‍ಬಿಎಯುಪಿಎಸ್‍ಸಿ ಐಲ ಶಾಲೆಗೆ ಸ್ನೇಹ ಭವನವನ್ನು ನಿರ್ಮಿಸಲಾಗಿದೆ. ನಾಲ್ಕನೇ ಸ್ನೇಹ ಭವನವನ್ನೂ ಸಚಿವರು ಘೋಷಿಸಿದರು. ನಾಲ್ಕನೇ ಸ್ನೇಹ ಭವನ ಕಾಸರಗೋಡು ಕ್ಷೇತ್ರದ ಉಕ್ಕಿನಡ್ಕದಲ್ಲಿ ನಿರ್ಮಾಣವಾಗಲಿದೆ. ಮಾರ್ಗದರ್ಶಿ ಶಿಕ್ಷಕ ಕೆ. ಭಾರ್ಗವಿ ವರದಿ ಮಂಡಿಸಿದರು.

                  ಕೆಎಸ್‍ಬಿಎಸ್‍ಜಿ ರಾಜ್ಯ ಕಾರ್ಯದರ್ಶಿ ಎನ್. ಕೆ. ಪ್ರಭಾಕರ ಪ್ರಧಾನ ಭಾಷಣ ಮಾಡಿದರು. ಶಾಸಕರಾದ ಎನ್. ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಗಳಾಗಿದ್ದರು. ಪುತ್ತಿಗೆ ಪಂಚಾಯಿತಿ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಕುತ್ತಿಕೋಲ್ ಪಂಚಾಯತ್ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಜೆ. ಎಸ್. ಸೋಮಶೇಖರ, ಅಪರ ಜಿಲ್ಲಾ ಎಇಒಗಳಾದ ಯತೀಶ್ ಕುಮಾರ್ ರೈ, ವಿ. ದಿನೇಶ್, ಪಿ. ಪ್ರಶಾಂತ್ ಮಾತನಾಡಿದರು. ಡಿಇಒ ಮತ್ತು ಜಿಲ್ಲಾ, ಮುಖ್ಯ ಆಯುಕ್ತ ಎನ್. ನಂದಿಕೇಶನ್ ಸ್ವಾಗತಿಸಿ, ಕಾಸರಗೋಡು ಎಇಒ ಆಗಸ್ಟಿನ್ ಬೆರ್ನಾಡ್ ವಂದಿಸಿದರು. 

                 ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇರಳದಲ್ಲಿ ಇದುವರೆಗೆ 200 ಮನೆಗಳನ್ನು ನಿರ್ಮಿಸಿದೆ. ಜಿಲ್ಲೆಯಲ್ಲಿ 7 ಮನೆಗಳನ್ನು ನಿರ್ಮಿಸಲಾಗಿದೆ. ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ 500 ಚದರ ಅಡಿಯ 3 ಮನೆಗಳನ್ನು 4 ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.  ಕಾಞಂಗಾಡು ಶಿಕ್ಷಣ ಜಿಲ್ಲೆಯಲ್ಲಿ 4 ಮನೆಗಳನ್ನು ನಿರ್ಮಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries