"ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ: ಪೊಲೀಸರು ಬದುಕಲು ಅವಕಾಶ ನೀಡುತ್ತಿಲ್ಲ ಸಾರ್”; ಮೊಬೈಲ್ ಟವರ್ ಮೇಲೇರಿ ಯುವಕನಿಂದ ಆತ್ಮಹತ್ಯೆ ಬೆದರಿಕೆ: ಕಾಸರಗೋಡಲ್ಲಿ ಘಟನೆ


      ಕಾಸರಗೋಡು: ಕಾಸರಗೋಡಿನಲ್ಲಿ ಯುವಕನೊಬ್ಬ ಮೊಬೈಲ್ ಟವರ್ ಮೇಲೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಇಂದು ನಡೆದಿದೆ.  ಪಾಲಕ್ಕುನ್ನು ಮೂಲದ ಶೈಜು ಎಂಬಾತ ಟವರ್ ಮೇಲೇರಿ ಆತ್ಮಹತ್ಯೆ ಮಾಡುವುದಾಗಿ  ಬೆದರಿಕೆ ಹಾಕುತ್ತಿದ ವ್ಯಕ್ತಿ.  ತನ್ನ  ವಿರುದ್ಧ ವಿನಾ ಕಾರಣ ಪೋಲೀಸರು ಹಾಕಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದ.
       ‘ಸಿಎಂ’ ಎಂಬ ಶೀರ್ಷಿಕೆಯ ವಿಡಿಯೋವನ್ನೂ ಚಿತ್ರೀಕರಿಸಿ ಟವರ್ ಮೇಲಿಂದ ಮೊದಲು ಕಳಿಸಿದ್ದ.  ಮಾನ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್, ಕಾಸರಗೋಡು ಪೊಲೀಸರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೇಟೆಯಾಡುತ್ತಿದ್ದಾರೆ.  ಬದುಕಲು ಬಿಡುವುದಿಲ್ಲ.  ಕಳ್ಳತನ ಪ್ರಕರಣದಲ್ಲಿ ಸಿಲುಕಿಸಿ  ನನ್ನನ್ನು ಬದುಕಲು ಬಿಡುವುದಿಲ್ಲ.  ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಶೈಜು ವಿಡಿಯೋದಲ್ಲಿ ಹೇಳಿಕೊಂಡಿದ್ದ.
      ಶೈಜು ಕುತ್ತಿಗೆಗೆ ಹಗ್ಗ ಹಾಕಿಕೊಂಡು ನಿಂತಿದ್ದ.  ಏತನ್ಮಧ್ಯೆ, ಶೈಜು ವಿರುದ್ಧ ಥಳಿತ, ಮಾದಕ ದ್ರವ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ ಎಂ ಎದು ಪೊಲೀಸರು ಹೇಳುತ್ತಾರೆ.
       ಸ್ಥಳೀಯರು ಮೊದಲು ಮಾಹಿತಿ ಪಡೆದರು.  ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.  ಎಲ್ಲರೂ ಶೈಜು ಮನವೊಲಿಸಲು ಪ್ರಯತ್ನಿಸಿದರೂ ಜಪ್ಪಯ್ಯ ಎನ್ನದ ಆತನ ಮನವೋಲಿಕೆಗೆ ಪತ್ರಕರ್ತರು ಶ್ರಮಿಸಿ ಯಶಸ್ವಿಯಾದರು. ಬಳಿಕ ಪ್ರಮುಖರ ನೇತೃತ್ವದಲ್ಲಿ ಸಂಧಾನಕ್ಕೆ ಏರ್ಪಾಡು ಮಾಡಲಾಗಿದೆ. ಇಂದು ಬೆಳಿಗ್ಗೆವರೆಗೆ 10 ರಿಂದ 12 ರ ಮಧ್ಯೆ ಈ ನಾಟಕೀಯ ವಿದ್ಯಮಾನ ನಡೆದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries