ಶಾಪಿಂಗ್​ ಕಾಂಪ್ಲೆಕ್ಸ್​ ನುಗ್ಗಿ ಪತ್ರ ಬರೆದಿಟ್ಟು ಬಂದ ಖದೀಮ! ಕಳ್ಳನ ಪತ್ರ ನೋಡಿ ಬೆಚ್ಚಿ ಬಿದ್ದ ಅಂಗಡಿ ಮಾಲೀಕ​!

 ಮನಂತವಾಡಿ: ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿದ ಖದೀಮನೊಬ್ಬ ಏನು ಸಿಗದೇ ಖಾಲಿ ಕೈಯಲ್ಲಿ ವಾಪಸ್​ ಬರುವಾಗ 'ಹಣ ಇಲ್ಲಾ ಅಂದ್ರೆ ಬಾಗಿಲಿಗೆ ಬೀಗ ಯಾಕೆ ಹಾಕ್ತೀರಾ?' ಎಂಬ ಸೊಕ್ಕಿನ ಬರಹವುಳ್ಳ ಪತ್ರ ಬರೆದಿಟ್ಟಿರುವ ಪ್ರಸಂಗ ಕೇರಳದ ಕುಂಡಮಕುಲಂನಲ್ಲಿ ನಡೆದಿದ್ದು, ಖತರ್ನಾಕ್​ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶ್ವರಾಜ್​ (40) ಬಂಧಿತ ಖದೀಮ. ಈತ ಪುಲ್​ಪಲ್ಲಿಯ ನಿವಾಸಿ. ಶಾಪಿಂಗ್​ ಕಾಂಪ್ಲೆಕ್ಸ್​ ನುಗ್ಗಿ ಕಳ್ಳತನ ಮಾಡಿದ ಬಳಿಕ ಆತ ಬರೆದಿಟ್ಟಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ.

ಕುಂಡಮಕುಲಂನ ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿದ ಖದೀಮ ಮೊದಲ ಅಂಗಡಿಯಲ್ಲಿ 12 ಸಾವಿರ ರೂ., ಎರಡನೇ ಅಂಗಡಿಯಲ್ಲಿ 500 ರೂ. ಕದ್ದಿದ್ದಾನೆ. ಇದಾದ ಬಳಿಕ ಮೂರನೇ ಅಂಗಡಿಗೆ ನುಗ್ಗಿದ ಖದೀಮ ಖಾಲಿ ಕೈಯಲ್ಲಿ ವಾಪಸ್​ ಬಂದಿದ್ದಾನೆ. ಹೀಗೆ ಬರುವಾಗ ಹಣ ಇಲ್ಲಾ ಅಂದ್ರೆ ಬಾಗಿಲು ಯಾಕೆ ಹಾಕ್ತೀರಾ? ಎಂದು ಪತ್ರ ಬರೆದಿಟ್ಟು ಬಂದಿದ್ದಾನೆ.

ಖದೀಮ ವಿಶ್ವರಾಜ್, ಈ ಹಿಂದೆ ಕಲ್ಪೆಟ್ಟಾದಲ್ಲಿ ಕಳ್ಳತನಕ್ಕೆ ಯತ್ನಿಸಿ ಬಂಧಿತನಾಗಿದ್ದ. ಈತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸುಮಾರು 53 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕಲ್ಪೆಟ್ಟ, ಕೊಯಿಲಾಂಡಿ, ಫಾರೂಕ್, ಗುರುವಾಯೂರು, ಕಣ್ಣೂರು, ಕಾಸರಗೋಡು, ಬತ್ತೇರಿ ಸೇರಿದಂತೆ ಹಲವು ಕಡೆ ಪ್ರಕರಣಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries