ಅವಕಾಶಗಳಿಗಾಗಿ 10 ವರ್ಷಗಳಿಂದ ನಿರೀಕ್ಷಿಸುತ್ತಿರುವೆ: ಎದೆಗುಂದದೆ ರಸ್ತೆಬದಿ ಫಲಕ ಸ್ಥಾಪಿಸಿದ ಯುವಕ


          ಸಿನಿಮಾ ಎನ್ನುವುದು ಅನೇಕರ ಕನಸು. ಕೆಲವರು ಆ ಕನಸನ್ನು ಬೇಗನೆ ತಲುಪಬಹುದು.
           ಬಹುತೇಕರು ಸಿನಿಮಾದ ಕನಸನ್ನು ಅರ್ಧದಲ್ಲೇ ಕೈಬಿಡುತ್ತಾರೆ. ನಮ್ಮ ಕನಸುಗಳಿಗಾಗಿ ನಾವು ಎಷ್ಟು ಶ್ರಮಿಸುತ್ತೇವೋ ಅಷ್ಟು ಅವುಗಳನ್ನು ಸಾಧಿಸಬಹುದು ಎಂದು ಹೇಳಲಾಗುತ್ತದೆ. ಇಲ್ಲೊಬ್ಬ ಯುವಕ ತನ್ನ ಕನಸನ್ನು ನನಸಾಗಿಸಲು ಶ್ರಮಿಸುತ್ತಿದ್ದಾನೆ.
       ಅನೇಕರು ತಮಗೆದುರಾಗುವ "ಸಿನಿಮಾದಲ್ಲಿ, ನೀವು?" ಎಂಬ ಪ್ರಶ್ನೆಗಳಿಗೆ ಹೆದರಿ ಅದನ್ನು ಒಳಗೆ ಅದುಮಿಡುತ್ತಾರೆ. ಆದರೆ ಕೊಟ್ಟಾಯಂ ಪಣಚಿಕ್ಕಾಡ್ ಮೂಲದ ಶರತ್ ಇಲ್ಲಿ ಸಿನಿಮಾದಲ್ಲಿ ನಟಿಸುವ ಕನಸನ್ನು ಸಮುದಾಯಕ್ಕೆ ತಿಳಿಸಿದ್ದಾರೆ. ಸುಮ್ಮನೆ ಕರೆದು ಹೇಳಲಿಲ್ಲ, ತನ್ನ ಕನಸನ್ನು ಹೇಳುತ್ತಾ ಪುತ್ತಿಕಾವ್- ತ್ರಿಪುಣಿತುರ ರಸ್ತೆಯ ಬಳಿ ಹೋಡಿರ್ಂಗ್ ಹಾಕಿರುವರು. ತಮ್ಮ ಭಾವ ಚಿತ್ರ ಮತ್ತು ಪೋನ್ ಸಂಖ್ಯೆ ಎಲ್ಲವನ್ನೂ ಬರೆಸಿದ್ದಾರೆ. ಶರತ್ ಮೂರು ತಿಂಗಳ ಉಳಿತಾಯದಲ್ಲಿ 25,000 ರೂ.ಗಳನ್ನು ಹೂಡಿಕೆ ಮಾಡಿ ಸ್ಥಾಪಿಸಿದ್ದಾರೆ.
          ಶರತ್ ಹತ್ತು ವರ್ಷಗಳಿಂದ ಸಿನಿಮಾದಲ್ಲಿ ಅವಕಾಶ ಕೇಳುತ್ತಿದ್ದಾರೆ. ಹಲವು ಆಡಿಷನ್‍ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ವಿಫಲವಾದರು. ಕೊನೆಯ ಪ್ರಯತ್ನವಾಗಿ ಯುವಕ ಈ ಸಾಹಸಕ್ಕೆ ಮುಂದಾಗಿದ್ದಾನೆ. 10ನೇ ತರಗತಿಯಿಂದ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಇನ್ನೂ ಒಳ್ಳೆಯ ಪಾತ್ರಗಳು ಸಿಕ್ಕಿಲ್ಲ ಎನ್ನುತ್ತಾರೆ ಶರತ್.
           ಬಹುತೇಕ ಚಿತ್ರ ನಿರ್ಮಾಪಕರು ಕೊಚ್ಚಿಯಲ್ಲಿದ್ದಾರೆ. ಅದಕ್ಕೇ ಇಲ್ಲಿ ಹೋಡಿರ್ಂಗ್ ಹಾಕಿರುವೆ. ಯಾರಾದರೂ ಕರೆ ಮಾಡುತ್ತಾರೆ ಎಂಬ ಭರವಸೆಯಿಂದ ಇದನ್ನು ಮಾಡಲಾಗಿದೆ. ಗೇಲಿ ಮಾಡುವವರೂ ಇರುತ್ತಾರೆ ಎಂಬುದು ಗೊತ್ತಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಶರತ್. ಮಮ್ಮುಟ್ಟಿ ನನ್ನ ರೋಲ್ ಮಾಡೆಲ್ ಎಂದು ಯುವಕ ಹೇಳಿಕೆ ನೀಡಿದ್ದು, 40 ವರ್ಷಗಳ ಹಿಂದೆ ಮಮ್ಮುಟ್ಟಿಯೂ ಇದೇ ರೀತಿಯ  ಜಾಹೀರಾತು ನೀಡಿದ್ದರೆಂದು ಶರತ್ ಹೇಳಿದ್ದಾರೆ.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries