HEALTH TIPS

ಲಡಾಖ್‌ನ 2 ಪರ್ವತ ಶಿಖರ ಏರಿ ವಿಶ್ವ ದಾಖಲೆ ಬರೆದ 13ರ ಬಾಲಕ

                 ನವದೆಹಲಿ:ಲಡಾಖ್‌ನ ಮರ್ಖಾ ಕಣಿವೆಯಲ್ಲಿರುವ ಕಾಂಗ್ ಯಾಟ್ಸೆ ಹಾಗೂ ಡ್ಜೋ ಜೋಂಗೊ ಪರ್ವತ ಶ್ರೇಣಿಗಳನ್ನು ಏರುವಲ್ಲಿ ಸಫಲನಾಗುವ ಮೂಲಕ ಹೈದರಾಬಾದ್‌ನ 13 ವರ್ಷದ ಬಾಲಕ ವಿಶ್ವನಾಥ್ ಕಾರ್ತಿಕೇಯ ಹೊಸ ವಿಶ್ವ ದಾಖಲೆ ಬರೆದಿದ್ದಾನೆ.

            ''ನಾನು ಕಾಂಗ್ ಯಾಟ್ಸೆ ಹಾಗೂ ಡ್ಜೊ ಜೋಂಗೊಗೆ ಜುಲೈ 9ರಂದು ಚಾರಣ ಆರಂಭಿಸಿದೆ.

ಜುಲೈ 22ರಂದು ಪೂರ್ಣಗೊಳಿಸಿದೆ. ಪರ್ವತದ ಬೇಸ್ ಕ್ಯಾಂಪ್‌ನಿಂದ ಪ್ರಯಾಣ ಆರಂಭಿಸಿ ಶಿಖರ ತಲುಪುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಅತ್ಯಧಿಕ ಎತ್ತರದಲ್ಲಿ ವಾಯುವಿನ ಒತ್ತಡ ಇಳಿಕೆಯಾಗುತ್ತದೆ. ಆದರೆ, ನಾನು ಪ್ರಯತ್ನ ಬಿಡಲಿಲ್ಲ. ನನ್ನ ಮೊದಲ ಅನುಭವ ಅವಿಸ್ಮರಣೀಯ. ನಾನು ನನ್ನ ಕಠಿಣ ಪರಿಶ್ರಮವನ್ನು ನೆನಪಿಸಿಕೊಂಡೆ. ನಾನು ಈ ಸಾಧನೆ ಮಾಡಲು ಪಣ ತೊಟ್ಟಿದ್ದೆ. ಈಗ ಅದು ಸಾಕಾರಗೊಂಡಿದೆ'' ಎಂದು ಕಾರ್ತಿಕೇಯನ್ ಹೇಳಿದ್ದಾನೆ.

                ''ಪರ್ವತ ಏರುವ ಸಂದರ್ಭ ಗಾಳಿಯಲ್ಲಿ ತೇವಾಂಶದ ಕೊರತೆ ಇದ್ದುದರಿಂದ ನಾನು ಉಸಿರಾಡಲು ಸಾಕಷ್ಟು ಸಮಸ್ಯೆ ಎದುರಿಸಿದೆ. ಡ್ಜೋ ಜೋಂಗೊ ಪರ್ವತ ಏರುವ ಸಂದರ್ಭ ನನ್ನ ಬಾಯಿ ಒಣಗಿತ್ತು. ದೀರ್ಘ ನಡಿಗೆ ನನ್ನಲ್ಲಿ ಆಯಾಸ ಹಾಗೂ ಹಸಿವು ಉಂಟು ಮಾಡಿತ್ತು'' ಎಂದು ಆತ ವಿವರಿಸಿದ್ದಾನೆ.

                        ಈ ಚಾರಣಕ್ಕೆ ಮೊದಲು ತಾನು ಹಲವು ವೈಫಲ್ಯಗಳನ್ನು ಎದುರಿಸಿದ್ದೇನೆ ಎಂದು 9ನೇ ತರಗತಿಯ ಕಾರ್ತಿಕೇಯ ಹೇಳಿದ್ದಾನೆ. ಉತ್ತರಾಖಂಡದ ಮೌಂಟ್ ರುದುಗೈರಾ ಹಾಗೂ ರಶ್ಯದ ಮೌಂಟ್ ಎಲ್‌ಬ್ರಸ್ ಚಾರಣವನ್ನು ಪೂರ್ಣಗೊಳಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ಆತ ತಿಳಿಸಿದ್ದಾನೆ. ಆದರೆ, ವಿಫಲ ಪ್ರಯತ್ನ ಪರೋಕ್ಷವಾಗಿ ವರದಾನವಾಗಿ ಪರಿಣಮಿಸಿದೆ ಎಂದು ಆತ ಹೇಳಿದ್ದಾನೆ.

                      ಫಿಟ್ನೆಸ್ ಉತ್ಸಾಹಿ ಹಾಗೂ ಚಾರಣವನ್ನು ಆನಂದಿಸುವ ಸಹೋದರಿ ತನಗೆ ಪ್ರೇರಣೆ. ಆಕೆಗೆ ಕೂಡ ಪರ್ವತ ಚಾರಣದಲ್ಲಿ ಆಸಕ್ತಿ ಇದೆ ಎಂದು ಆತ ತಿಳಿಸಿದ್ದಾನೆ.

                 ''ನನ್ನ ಮೊದಲ ಚಾರಣ ಮೌಂಟ್ ರುದುಗೈರಾಕ್ಕೆ. ನನಗೆ ಪರ್ವತದ ಬೇಸ್ ಕ್ಯಾಂಪ್‌ಗೆ ತಲುಪಲು ಕೂಡ ಸಾಧ್ಯವಾಗಲಿಲ್ಲ. ಅನಂತರ ನಾನು ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೈನೀಯರಿಂಗ್‌ಗೆ ತೆರಳಿ 10 ದಿನಗಳ ತರಬೇತಿ ಪಡೆದೆ. ಅನಂತರ ಕೂಡ ವಿಫಲನಾದೆ. ಮತ್ತೆ ಮೌಂಟ್ ಎಲ್‌ಬ್ರಸ್‌ಗೆ ಏರಲು ತರಬೇತಿ ಪಡೆದುಕೊಂಡೆ. ಆದರೂ ವಿಫಲನಾದೆ. ಬಳಿಕ ನಿರಂತರ ಅಭ್ಯಾಸ ಹಾಗೂ ಫಿಟ್ನೆಸ್ ತರಬೇತಿಯಿಂದ ನೇಪಾಲದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಹಾಗೂ ಮನಾಲಿಯಲ್ಲಿರುವ ಫ್ರೆಂಡ್‌ಶಿಪ್ ಶಿಖರದ ಚಾರಣ ಪೂರ್ಣಗೊಳಿಸಿದೆ'' ಎಂದು ವಿಶ್ವನಾಥ್ ಕಾರ್ತಿಕೇಯನ್ ಹೇಳಿದ್ದಾನೆ.

             ಚಾರಣವನ್ನು ಪೂರ್ಣಗೊಳಿಸಲು ನೆರವು ನೀಡಿದ ಸಲಹೆಗಾರರಾದ ಭರತ್ ಹಾಗೂ ರೋಮಿಲ್ ಅವರಿಗೆ ಕಾರ್ತಿಕೇಯನ್ ಕೃತಜ್ಞತೆ ಸಲ್ಲಿಸಿದ್ದಾನೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries