ಬಿಡುಗಡೆ ಆಗಲಿದೆಯೇ 2011ರ ಜಾತಿಗಣತಿ?; ಕೇಂದ್ರ ಸಚಿವರಿಂದಲೇ ಸ್ಪಷ್ಟನೆ

 

         ನವದೆಹಲಿ: ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ (ಸೋಷಿಯೋ ಎಕನಾಮಿಕ್ ಆಯಂಡ್ ಕಾಸ್ಟ್​ ಸೆನ್ಸಸ್​- ಎಸ್​ಇಸಿಸಿ) 2011 ದೇಶಾದ್ಯಂತ ಬಹಳಷ್ಟು ಚರ್ಚೆಯಲಿದ್ದು, ಇದು ಬಿಡುಗಡೆ ಆಗಲಿದೆಯೇ ಇಲ್ಲವೇ ಎಂಬ ಕುರಿತೂ ಮಾತುಕತೆಗಳು ನಡೆಯುತ್ತಿವೆ.

ಆದರೆ ಈಗ ಈ ಕುರಿತು ಕೇಂದ್ರ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.

           ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಈ ಕುರಿತ ಪ್ರಶ್ನೆಯೊಂದಕ್ಕೆ ಸದನದಲ್ಲಿ ಉತ್ತರಿಸಿದ್ದು, ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಹಂತದಲ್ಲಿ ಜಾತಿ ಗಣತಿಯ ವಿವರ ಬಿಡುಗಡೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ ಕೇಂದ್ರ ಸರ್ಕಾರ ಎಸ್​ಸಿ-ಎಸ್​ಟಿ ಹೊರತಾಗಿ ಜಾತಿವಾರು ಎಣಿಕೆ ನಡೆಸಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.

                 ಜಾತಿ ಹೊರತಾದ ಎಸ್​ಇಸಿಸಿ 2011ರ ವಿವರ ಅಂತಿಮವಾಗಿದ್ದು, ಅದು https://www.ecc.gov.in ವೆಬ್​ಸೈಟ್​ನಲ್ಲಿ ಲಭ್ಯವಿದೆ. ಆದರೆ ಜಾತಿ ವಿವರವನ್ನು ಬಿಡುಗಡೆ ಮಾಡುವಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಹೇಳಿದ್ದಾರೆ.

                   2021ರ ಜನಗಣತಿ ವಿಳಂಬದ ಕುರಿತ ಪ್ರಶ್ನೆಗೂ ಅವರು ಪ್ರತಿಕ್ರಿಯಿಸಿದ್ದು, ಆ ಕುರಿತ ವರದಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಜನಸಂಖ್ಯಾ ಆಯೋಗದ ಬಳಿ ಇದೆ. ಆದರೆ ಕೋವಿಡ್ ಪಿಡುಗಿನ ಸಂದರ್ಭದಲ್ಲಿ 2021ರ ಜನಗಣತಿ ಕುರಿತ ಕ್ಷೇತ್ರ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ತಿಳಿಸಲಾಗಿತ್ತು ಎಂಬುದನ್ನೂ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries