2022 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಕಟ: ಪ್ರಥಮ ಬಹುಮಾನ ಲತಾ ಹೆಗಡೆ ಹುಬ್ಬಳ್ಳಿ ಇವರ ಪಾಲಿಗೆ

                                                    

                ಕುಂಬಳೆ: ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ 2022ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಥಮ ಸ್ಥಾನ  ಶ್ರೀಮತಿ ಲತಾ ಹೆಗಡೆ ಹುಬ್ಬಳ್ಳಿ ಅವರ ಮುಡಿಗೇರಿದೆ. ದ್ವಿತೀಯ ಸ್ಥಾನ ಶ್ರೀಮತಿ ಸಂಧ್ಯಾ ಭಟ್ ಅರಂತಾಡಿ ಆಯ್ಕೆಯಾಗಿದ್ದಾರೆ. ತೃತೀಯ ವಿಜೇತೆಯಾಗಿ  ಶ್ರೀಮತಿ ಸತ್ಯವತಿ ಕೊಳಚ್ಚಿಪ್ಪು ಆಯ್ಕೆಯಾಗಿದ್ದಾರೆ.

                   ಲತಾ ಹೆಗಡೆ ಹುಬ್ಬಳ್ಳಿ   ಗೃಹಿಣಿಯಾಗಿದ್ದು,  ಬಿ.ಎಸ್.ಎನ್.ಎಲ್ ನ ನಿವೃತ್ತ ಡೆಪ್ಯುಟಿ ಜನರಲ್ ಮೆನೇಜರ್ ತ ಉದಯಶಿವರಾಮ ಹೆಗಡೆಯವರ ಪತ್ನಿ. ಇಬ್ಬರು ಗಂಡುಮಕ್ಕಳ ತಾಯಿ. ಅಪರಂಜಿ ಮಾಸಪತ್ರಿಯಲ್ಲಿ; ನಗೆ ಲೇಖನದಲ್ಲಿ ಪ್ರಥಮ, ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಪ್ರೇಮಾಭಟ್ ದತ್ತಿನಿಧಿ ಬಹುಮಾನ,ಪ್ರಜಾವಾಣಿ ಹಾಗೂ ಉತ್ಥಾನಮಾಸಪತ್ರಿಕೆಯಲ್ಲಿ ವೈಚಾರಿಕ ಲೇಖನಗಳಿಗೆ ಬಹುಮಾನ ಬಂದಿರುವ ಇವರು ಅಡುಗೆ ಸ್ಪರ್ಧೆಯಲ್ಲೂ ಬಹುಮಾನಗಳನ್ನು ಪಡೆದಿರುತ್ತಾರೆ.  ಸಾಹಿತ್ಯ ಕೃಷಿಯೊಂದಿಗೆ ಸಂಗೀತ, ಚಿತ್ರಕಲೆ,ರಂಗೋಲಿ ಕಲೆಗಳಲ್ಲೂ ಸಾಧಕರಾಗಿದ್ದಾರೆ. 

              ದ್ವಿತೀಯ ವಿಜೇತೆ ಸಂಧ್ಯಾ ಭಟ್ ಅರಂತಾಡಿ ಅವರು ಗೃಹಿಣಿಯಾಗಿದ್ದು, ಶಿಕ್ಷಕ ಗಣಪತಿ ಭಟ್ ಅರಂತಾಡಿಯವರ ಪತ್ನಿ. ಪ್ರಸ್ತುತ ಮಂಗಳೂರಲ್ಲಿ ವಾಸಿಸುವ ಇವರಿಗೆ ಪುತ್ರಿ ಅಪೂರ್ವ ಹಾಗೂ ಪುತ್ರ ಅಖಿಲೇಶ ಇಬ್ಬರು ಮಕ್ಕಳು. ಇವರು ಸಣ್ಣಕತೆ,ಲೇಖನಗಳನ್ನು ಬರೆದು ಪ್ರತಿಲಿಪಿ ಬ್ಲಾಗ್ ಹಾಗೂ ಗ್ರೂಪುಗಳಲ್ಲಿ ಕಳುಹಿಸುವ ಹವ್ಯಾಸಿ.

               ತೃತೀಯ ವಿಜೇತೆ  ಶ್ರೀಮತಿ ಸತ್ಯವತಿ ಕೊಳಚ್ಚಿಪ್ಪು ಎಳವೆಯಲ್ಲೇ ಸಾಹಿತ್ಯಾಸಕ್ತೆಯಾಗಿದ್ದು, ಅನುಭವಿ ಹಿರಿಯರು.  ಸಂಸಾರ ಜವಾಬ್ದಾರಿಗಳಿಂದ  ನಿವೃತ್ತಿ ಹೊಂದಿದ ನಂತರ ಸಂಪೂರ್ಣವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡು ಹಲವು ಪ್ರಕಾರಗಳಲ್ಲಿ ಬರೆಯುವ ಸಾಮಥ್ರ್ಯ ಹೊಂದಿರುವುದಲ್ಲದೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನುಭವವಿದೆ. ಕೆಲವಾರು ಸಾಹಿತ್ಯ ಬಳಗದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು ಉನ್ನತ ಮಟ್ಟದ ಸ್ಥಾನ ದೊರಕಿಸಿಗೊಂಡಿದ್ದಾರೆ.ಇವರ ನಾಲ್ಕು ಕವನ ಸಂಕಲನ ಬಿಡುಗಡೆಯಾಗಿದೆ.'ಕಾಮನಬಿಲ್ಲು' ಮಕ್ಕಳ ಕವನ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದವರು ಕೊಡಮಾಡಲ್ಪಟ್ಟ ಪ್ರತಿಷ್ಠಿತ ನಾ ಡಿಸೋಜ ಮತ್ತು ರಾಜರತ್ನಂ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆಯಲ್ಲದೆ ಹಿರಿಯ ಸಾಹಿತಿ ಎಂಬ ಗೌರವಾನ್ವಿತದ ವೈದೇಹಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. 

               ಕಥಾ ಸ್ಪರ್ಧೆಗೆ ಡಾ. ಬೇ.ಸಿ.ಗೋಪಾಲಕೃಷ್ಣ ಭಟ್ ಬದಿಯಡ್ಕ, ಡಾ. ಹರಿಕೃಷ್ಣ ಭರಣ್ಯ ಕುಂಬಳೆ, ಶ್ರೀಮತಿ ಲಲಿತಾಲಕ್ಷ್ಮಿ ಸಿದ್ದಾಪುರ ತೀರ್ಪುಗಾರರಾಗಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries