'ಹಾರುವ ಶವಪೆಟ್ಟಿಗೆ'ಗೆ ಗುಡ್ ಬೈ: 2025 ರ ವೇಳೆಗೆ ಎಲ್ಲಾ ಮಿಗ್-21 ನಿವೃತ್ತಿಗೊಳಿಸಲು ಐಎಎಫ್ ಸಜ್ಜು

 

           ನವದೆಹಲಿ: ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ, ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾಗುತ್ತಿದ್ದ ರಷ್ಯಾ ನಿರ್ಮಿತ ಮಿಗ್‌- 21 ಯುದ್ಧ ವಿಮಾನಗಳನ್ನು ಹಂತಹಂತವಾಗಿ ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆಯಲು ಭಾರತೀಯ ವಾಯುಪಡೆ (ಐಎಎಫ್) ನಿರ್ಧರಿಸಿದ್ದು, ಸೆಪ್ಟೆಂಬರ್ 30 ರೊಳಗೆ ಮಿಗ್-21 ಬೈಸನ್ ವಿಮಾನದ ಮತ್ತೊಂದು ಸ್ಕ್ವಾಡ್ರನ್ ಹಾರಾಟ ನಿಲ್ಲಿಸಲಿದೆ.

                 ನಿನ್ನೆ ಸಂಜೆಯಷ್ಟೇ ಐಎಎಫ್‌ನ ಎರಡು ಸೀಟರ್‌ನ ಮಿಗ್- 21 ತರಬೇತಿ ವಿಮಾನವು ರಾಜಸ್ಥಾನದ ಬಾರ್ಮರ್‌ನಲ್ಲಿ ಪತನಗೊಂಡಿದ್ದು, ಈ ಭೀಕರ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಉತರ್ಲಾಲ್ ವಾಯು ನೆಲೆಯಿಂದ ತರಬೇತಿ ಭಾಗವಾಗಿ ಹಾರಾಟ ನಡೆಸುತ್ತಿದ್ದಾಗ ಈ ದುರದೃಷ್ಟಕರ ಘಟನೆ ನಡೆದಿದೆ.

             ಶ್ರೀನಗರ ವಾಯುನೆಲೆಯಿಂದ ಹೊರಗಿರುವ 51 ಸ್ಕ್ವಾಡ್ರನ್ ಅನ್ನು ಸೆಪ್ಟೆಂಬರ್ 30 ರಂದು ಸ್ಥಗಿತಗೊಳಿಸಲಾಗುತ್ತಿದೆ. ಇದರ ನಂತರ, ಕೇವಲ ಮೂರು ಸ್ಕ್ವಾಡ್ರನ್ ವಿಮಾನಗಳು ಸೇವೆಯಲ್ಲಿ ಉಳಿಯುತ್ತವೆ ಮತ್ತು ಅವುಗಳನ್ನು 2025 ರ ವೇಳೆಗೆ ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು" ಎಂದು ಐಎಎಫ್ ಮೂಲಗಳು ಎಎನ್‌ಐಗೆ ತಿಳಿಸಿವೆ.

                ಫೆಬ್ರವರಿ 27, 2019 ರಂದು ಭಾರತ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದಾಗ ವಿಂಗ್ ಕಮಾಂಡರ್(ಈಗ ಗ್ರೂಪ್ ಕ್ಯಾಪ್ಟನ್) ಅಭಿನಂದನ್ ವರ್ಧಮಾನ್ ಹಾರಿಸಿದ ಯುದ್ಧ ವಿಮಾನವನ್ನು 51 ಸ್ಕ್ವಾಡ್ರನ್ ನಿಂದ ತೆಗೆದುಕೊಳ್ಳಲಾಗಿತ್ತು.

               ಮಿಗ್-21 ವಿಮಾನವು ಎಫ್-16 ಅನ್ನು ವೈಮಾನಿಕ ದಾಳಿಯಲ್ಲಿ ಹೊಡೆದುರುಳಿಸಿದ ಏಕೈಕ ನಿದರ್ಶನ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

          ಭಾರತೀಯ ವಾಯುಪಡೆಯು  ಮಿಗ್-21 ಯುದ್ಧ ವಿಮಾನಗಳನ್ನು ಎಸ್ ಯು-30 ಯುದ್ಧ ವಿಮಾನ ಮತ್ತು ಸ್ವದೇಶಿ ಲಘು ಯುದ್ಧ ವಿಮಾನ(LCA) ನಂತಹ ಹೆಚ್ಚು ಸಾಮರ್ಥ್ಯದ ವಿಮಾನಗಳೊಂದಿಗೆ ಬದಲಾಯಿಸುತ್ತಿದೆ.


         


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries