2100ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ 41 ಕೋಟಿಯಷ್ಟು ಕುಸಿತ: ವಿಶ್ವಸಂಸ್ಥೆ ಜನಸಂಖ್ಯಾ ಅಧ್ಯಯನ ವರದಿ

           ನವದೆಹಲಿ :ಭಾರತವು ಪ್ರಸಕ್ತ ಜಗತ್ತಿನಲ್ಲೇ ಎರಡನೆ ಅತ್ಯಧಿಕ ಜನಸಂಖ್ಯೆಯ ರಾಷ್ಟ್ರವಾಗಿದೆ. ಆದರೆ ಮುಂದಿನ 78 ವರ್ಷಗಳಲ್ಲಿ ಅದರ ಜನಸಂಖ್ಯೆ 41 ಕೋಟಿಯಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ತಿಳಿಸಿದೆ.

           ಭಾರತದಲ್ಲಿ ಪ್ರಸಕ್ತ ಸರಾಸರಿ ಪ್ರತಿ ಚದರ ಕಿ.ಮೀ.ಗೆ 476 ಮಂದಿ ವಾಸವಾಗಿರುತ್ತಾರೆ. ಆದರೆ ಚೀನಾದಲ್ಲಿ ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆಯ ಕೇವಲ 148 ಆಗಿದೆ. 2100 ರ ವೇಳೆಗೆ ಭಾರತದ ಜನಸಾಂಧ್ರತೆಯು ಪ್ರತಿ ಚದರ ಕಿ.ಮೀ.ನಲ್ಲಿ 335 ವ್ಯಕ್ತಿಗಳಿಗೆ ಕುಸಿಯುವ ಸಾಧ್ಯತೆಯಿದೆ. ಸಮಗ್ರ ಜಗತ್ತಿನಲ್ಲಿ ಕುಸಿಯಲಿರುವ ಜನಸಾಂಧ್ರತೆಗಿಂತ ಭಾರತದಲ್ಲಿ ಜನಸಂಖ್ಯಾ ಸಾಂಧ್ರತೆಯ ಕುಸಿತವು ಅಧಿಕವಾಗಿರುವುದು ಎಂದು ವರದಿ ಹೇಳಿದೆ.

            2022ರಲ್ಲಿ 141.2 ಕೋಟಿಯಷ್ಟಿರುವ ಭಾರತದ ಜನಸಂಖ್ಯೆಯು 2100ರ ವೇಳೆಗೆ 100.3 ಕೋಟಿಗೆ ಕುಸಿಯಲಿದೆಯೆಂದು ವಿಶ್ವಸಂಸ್ಥೆ ಯೋಜನೆಗಳ ಜನಸಂಖ್ಯಾ ವಿಬಾಗವು ಪ್ರಕಟಿಸಿದ ನೂತನ ವರದಿ ತಿಳಿಸಿದೆ.

                 ಈ ಮಧ್ಯೆ, ಚೀನಾ ಹಾಗೂ ಅಮೆರಿಕದಂತಹ ಇತರ ದೇಶಗಳಲ್ಲಿಯೂ ಇದೇ ರೀತಿಯ ಪ್ರವೃತ್ತಿ ಕಂಡುಬರುವ ನಿರೀಕ್ಷೆಯಿದೆ. 2100 ವೇಳೆಗೆ ಚೀನಾದ ಜನಸಂಖ್ಯೆಯು 93.2 ಕೋಟಿಯಷ್ಟು ಕಡಿಮೆಯಾಗಲಿದ್ದು ಕೇವಲ 49.4 ಕೋಟಿಗೆ ಇಳಿಯಲಿದೆ. ಕಡಿಮೆ ಫಲವಂತಿಕೆಯ ವಿದ್ಯಮಾನಗಳನ್ನು ಆಧರಿಸಿ ಈ ಅಂದಾಜುಗಳನ್ನು ಮಾಡಲಾಗಿದೆ.
ಫಲವಂತಿಕೆಯ ದರದಲ್ಲಿನ ಕುಸಿತದಿಂದಾಗಿ ಜನಸಂಖ್ಯೆಯಲ್ಲಿ ಕುಸಿತವುಂಟಾಗುವ ನಿರೀಕ್ಷೆಯಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಭಾರತದಲ್ಲಿ ಪ್ರಸಕ್ತ ಮಹಿಳೆಯರ ಫಲವಂತಿಕೆಯ ದರವು 1.39 ಆಗಿದ್ದು 2032ರಲ್ಲಿ ಅದು 1.39ಕ್ಕೆ, 2052ರಲ್ಲಿ 1.28 ಹಾಗೂ 2100ರಲ್ಲಿ 1.19ಕ್ಕೆ ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

        ''ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಫಲವಂತಿಕೆ ದರವು ತೀವ್ರ ಇಳಿಮುಖದ ಪ್ರವೃತ್ತಿಯನ್ನು ಕಾಣಲಿರುವುದು ಸ್ಪಷ್ಟವಾಗಿದೆ. ದೇಶಗಳು ಶ್ರೀಮಂತವಾದಂತೆ ಫಲವಂತಿಕೆಯ ದರಗಳು ಕೂಡಾ ಸ್ಥಿರವಾಗಿ ಕುಸಿಯುತ್ತಿರುವಂತೆ ಕಂಡುಬರುತ್ತಿದೆ ಎಂದು ಸ್ಟ್ಯಾನ್‌ಫೋರ್ಡ್ ವಿವಿಯ ಸಹಯೋಗದಲ್ಲಿ ನಡೆಸಿದ ಈ ಅಧ್ಯಯನ ವರದಿ ಹೇಳಿದೆ.

             ಆದರೆ ಈ ಶತಮಾನದ ದ್ವಿತೀಯಾರ್ಧದಲ್ಲಿ ಆಫ್ರಿಕದ ದೇಶಗಳ ಜನಸಂಖ್ಯೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬರಲಿದ್ದು, ಇದರಿಂದಾಗಿ ಅವರು ದೇಶದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಕೊಡುಗೆಯನ್ನು ನೀಡುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ.
ಆಫ್ರಿಕ ಖಂಡದ ರಾಷ್ಟ್ರಗಳಾದ ಕಾಂಗೊ, ಈಜಿಪ್ಟ್, ಇಥಿಯೋಪಿಯಾ ಹಾಗೂ ನೈಜೀರಿಯಗಳಲ್ಲಿನ ಜನಸಂಖ್ಯಾ ಹೆಚ್ಚಳವು ಅಧಿಕವಾಗಿ ಕಂಡುಬರಲಿದೆಯೆಂದು ವರದಿಯು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries