ಎಡನೀರಲ್ಲಿ 29 ರಿಂದ ಶ್ರೀಕೃಷ್ಣ ಚರಿತಮ್ ತಾಳಮದ್ದಳೆ ಸಪ್ತಾಹ

  
                    ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಭಾಗವಾಗಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಪ್ರಾಯೋಜಕತ್ವದಲ್ಲಿ ಜು.29 ರಿಂದ ಆ.4ರ ವರೆಗೆ ಶ್ರೀಮಠದ ಸಭಾಂಗಣದಲ್ಲಿ ಪ್ರತಿನಿತ್ಯ ಸಂಜೆ 6 ರಿಂದ ಶ್ರೀಕೃಷ್ಣ ಚರಿತಮ್ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ.
                ಮೊದಲ ದಿನ ರುಕ್ಮಿಣೀ ಸ್ವಯಂವರ, ಜು.30 ರಂದು ಜಾಂಬವತೀ ಕಲ್ಯಾಣ, 31 ರಂದು ಸುಭದ್ರಾ ಕಲ್ಯಾಣ, ಆ.1 ರಂದು ಮಾಗಧ ವಧೆ, 2 ರಂದು ಕೃಷ್ಣಾರ್ಜುನ ಕಾಳಗ, 3 ರಂದು ಶ್ರೀಕೃಷ್ಣ ಸಂಧಾನ ಹಾಗೂ 4 ರಂದು ಭೀಷ್ಮಾರ್ಜುನ ಪರಸಂಗಗಳ ತಾಳಮದ್ದಳೆ ಕೂಟ ನಡೆಯಲಿದ್ದು ತೆಂಕುತಿಟ್ಟಿನ ಅಗ್ರಗಣ್ಯ ಹಿಮ್ಮೇಳ-ಮುಮ್ಮೇಳ ಕಲಾವಿದರು ಭಾಗವಹಿಸುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries