ಸ್ವಾವಲಂಬಿ ಶಕ್ತಿ ಕೇಂದ್ರ: 30 ರಂದು ಜಿಲ್ಲೆಯಲ್ಲಿ ಬಿಜಿಲಿ ಮಹೋತ್ಸವ


 


            ಕಾಸರಗೋಡು: ಜಿಲ್ಲೆಯಲ್ಲಿ ಬಿಜಿಲಿ ಮಹೋತ್ಸವ ಜುಲೈ 30ರ ಶನಿವಾರ ಬೆಳಗ್ಗೆ 10.30ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್ ಸಭಾಂಗಣ ಮತ್ತು ಮಧ್ಯಾಹ್ನ 2.30ಕ್ಕೆ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭ  ವಿಶೇಷ ಅತಿಥಿಗಳು ವಿದ್ಯುತ್ ಸಚಿವಾಲಯದ ಸಾಧನೆಗಳನ್ನು ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ನಾಟಕ ಮತ್ತು ವಿದ್ಯುತ್ ಕ್ಷೇತ್ರದ ಕಿರುಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ.
           ಇಂಧನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಹಾಗೂ ಮತ್ತಷ್ಟು ಸಾರ್ವಜನಿಕ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಲು ಇಂಧನ ಸಚಿವಾಲಯವು ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
           2014ರಲ್ಲಿ ದೇಶದ ಸ್ಥಾಪಿತ ವಿದ್ಯುತ್ ಸಾಮಥ್ರ್ಯ 2,48,554 ಮೆಗಾವ್ಯಾಟ್ ಆಗಿದ್ದು, ಇಂದು ಅದು 4,00,000 ಮೆಗಾವ್ಯಾಟ್‍ಗೆ ಏರಿಕೆಯಾಗಿದೆ. ದೇಶದ ವಿದ್ಯುತ್‍ಅಗತ್ಯಕ್ಕಿಂತ 1,85,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ ಇಂದು ನೆರೆಯ ರಾಷ್ಟ್ರಗಳಿಗೆ ವಿದ್ಯುತ್ ರಫ್ತು ಮಾಡುತ್ತಿದೆ.
             1,63,000 ಅಏಒ ಪ್ರಸರಣ ಮಾರ್ಗಗಳನ್ನು ಸೇರಿಸುವ ಮೂಲಕ ಇಡೀ ದೇಶವನ್ನು ಒಂದೇ ಪವರ್ ಗ್ರಿಡ್‍ಗೆ ಸಂಪರ್ಕಿಸಲು ಕೇಂದ್ರ ವಿದ್ಯುತ್ ಸಚಿವಾಲಯಕ್ಕಾಗಿ. ಲಡಾಕ್ ನಿಂದ  ಕನ್ಯಾಕುಮಾರಿ ಮತ್ತು ಕಚ್‍ನಿಂದ ಮ್ಯಾನ್ಮಾರ್ ಗಡಿಯವರೆಗೆ ಏಕೀಕೃತ ರೀತಿಯಲ್ಲಿ ವಿದ್ಯುತ್ ರವಾನಿಸುವ ಸಾಮಥ್ರ್ಯದೊಂದಿಗೆ ವಿಶ್ವದ ಅತಿದೊಡ್ಡ ಸಮಗ್ರ ವಿದ್ಯುತ್ ವಿತರಣಾ ಜಾಲವಾಗಿ ಹೊರಹೊಮ್ಮಿದ್ದು, ಈ ಸಾಧನೆಗಳ ಬಗ್ಗೆ ಬಿಜಿಲಿ ಮಹೋತ್ಸವದಲ್ಲಿ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries