ಆಹಾರ ಗಂಟಲಿಗೆ ಸಿಕ್ಕಿ 48 ವರ್ಷದ ವ್ಯಕ್ತಿ ಸಾವು;ಕಳೆದೆರಡು ದಿನದಲ್ಲಿ ಎರಡನೇ ಸಾವು: ಅಪಘಾತಗಳನ್ನು ತಪ್ಪಿಸಲು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು..

            
              ಪತ್ತನಂತಿಟ್ಟ: ಆಹಾರ ಗಂಟಲಲ್ಲಿ  ಸಿಲುಕಿ 48 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಪತ್ತನಂತಿಟ್ಟದ ತಿರುವಲ್ಲಾದ ಮುಂಡಿಯಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಕುನ್ನಂತಾನಂನ ಮುಂಡಿಯಪಲ್ಲಿಯಲ್ಲಿರುವ ವರವುಂಕಲ್ ಮನೆಯ  ರೆಗಿ ಸೆಬಾಸ್ಟಿಯನ್ ನಿಧನರಾದರು. ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಅಪಘಡ  ಸಂಭವಿಸಿದೆ.
             ಬೆಳಗಿನ ಉಪಾಹಾರ ಸೇವಿಸುವಾಗ ಗಂಟಲಲ್ಲಿ ಆಹಾರ ಸಿಕ್ಕಿಬಿದ್ದಿದ್ದರಿಂದ ರೆಗಿ ಅವರನ್ನು ತಿರುವಲ್ಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರು.  ತಿರುವಳ್ಳ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
            ನಿನ್ನೆ ಕೋಝಿಕ್ಕೋಡ್‍ನಲ್ಲೂ ಇಂತಹದ್ದೇ ಘಟನೆ ವರದಿಯಾಗಿತ್ತು. ಅಲ್ಲಿ 28 ವರ್ಷದ ಯುವಕ ಮೃತಪಟ್ಟಿದ್ದ. ಊಟ ಸೇವನೆ ವೇಳೆ ಗಂಟಲಿಗೆ ಸಿಲುಕಿ ಮೂರ್ಛೆ ಬಂದು ಸಾವನ್ನಪ್ಪಿದ್ದ.
                ಈ ರೀತಿಯ ಸಾವು ಅಜಾಗರೂಕತೆಯಿಂದ ಅಥವಾ ತುಂಬಾ ವೇಗವಾಗಿ ತಿನ್ನುವುದರಿಂದ ಗಂಟಲಿಗೆ ಸಿಲುಕಿಕೊಳ್ಳುವ ಧಾವಂತದಲ್ಲಿ ಉಂಟಾಗುವ ಸಾವುಗಳಾಗಿವೆ.  ಇದು ಶಿಶುಗಳಿಂದ ಹಿಡಿದು ಯಾವುದೇ ವಯಸ್ಸಿನ ಯಾರಿಗಾದರೂ ಸಂಭವಿಸಬಹುದು. ಮಕ್ಕಳಿಗೆ ಇಂತಹ ಅವಘಡ ಸಂಭವಿಸಿದರೆ ಅವರನ್ನು ಬೆನ್ನು ಮೇಲೆ ಹಾಕಿಕೊಂಡು ನಿಧಾನವಾಗಿ ಹೊರಗೆ ಬಿಡಬೇಕು. ಮಗು ಪ್ರಜ್ಞೆ ಕಳೆದುಕೊಂಡರೆ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು.
             ಹಿರಿಯ ಹರೆಯದವರಾಗಿದ್ದರೆ , ಅವರನ್ನು ಕೆಳಗೆ ಬಾಗಿಸಿ ಬೆನ್ನಿನ ಭಾಗದಲ್ಲಿ ತಟ್ಟಬೇಕು. ಕೆಮ್ಮು ಸಹ ಪ್ರಯೋಜನಕಾರಿಯಾಗಿದೆ. ಹೊರಹಾಕುವ ಸಮಯದಲ್ಲಿ ಉಂಟಾಗುವ ಒತ್ತಡದಿಂದ ಗಂಟಲಿಗೆ ಸಿಲುಕಿದ ಆಹಾರವು ಹೊರಬರುತ್ತದೆ ಎಂದು ತಜ್ಞರು ಹೇಳುತ್ತಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries