ಆ.5 ರಂದು ಸಂತಡ್ಕದಲ್ಲಿ 19ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ

               ಮಂಜೇಶ್ವರ: 'ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ'  ವತಿಯಿಂದ ಹತ್ತೊಂಬತ್ತನೇ  ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಆ. 5 ಎಂದು ಬೆಳಿಗ್ಗೆ 8.30ಕ್ಕೆ 'ಅರಸು ಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ'ದಲ್ಲಿ ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಜರಗಲಿದೆ. 

              ಆ ಬಗೆಗಿನ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು  ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ. ಶ್ರೀಧರ ಭಟ್ ವಹಿಸಲಿದ್ದು, ಸಿ.ಡಿ.ಎಸ್ ಅಧ್ಯಕ್ಷೆ  ಶಾಲಿನಿ ಬಿ ಶೆಟ್ಟಿ ಕಲ್ಲೆಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಹಿಂಪ ದುರ್ಗಾವಾಹಿನಿ ಸಂಯೋಜಕಿ  ಸೌಮ್ಯಪ್ರಕಾಶ್ ಮದಂಗಲ್ಲು ಧಾರ್ಮಿಕ ಪ್ರವಚನ ನೀಡುವರು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ ಎಂದು ಕೇತ್ರ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














grama rajya

Qries