ಜಿಲ್ಲೆಯಲ್ಲಿ 505 ನೈಸರ್ಗಿಕ ಕಿರು ಅರಣ್ಯದೊಂದಿಗೆ ಹಸಿರು ದ್ವೀಪ ಯೋಜನೆ ಯಶಸ್ವೀ ಜಾರಿ           
               ಕಾಸರಗೋಡು: ಹವಾಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸುವ ಹಾಗೂ ಪ್ರಾದೇಶಿಕ ಸ್ಥಿತಿಸ್ಥಾಪಕತ್ವ ಮಾದರಿಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 505 ಜೀವವೈವಿಧ್ಯ ಹಸಿರು ಬಯಲುಗಳು ಕಾಸರಗೋಡು ಜಿಲ್ಲೆಯಲ್ಲಿದೆ. ಶಾಲಾ ವಠಾರ, ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಖಾಲಿ ಪ್ರದೇಶಗಳಲ್ಲಿ ನೈಸರ್ಗಿಕ ಕಿರು-ಅರಣ್ಯಗಳನ್ನು ರಚಿಸುವ ಮೂಲಕ ಮತ್ತು ಆವಾಸಸ್ಥಾನವನ್ನು ಮರುಸ್ಥಾಪಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಹಸಿರು ದ್ವೀಪ ಯೋಜನೆಯನ್ನು ಆರಂಭಿಸಲಾಗಿದೆ.   ನೀರಿನ ಸಂರಕ್ಷಣೆ, ಕೃಷಿ ಮತ್ತು ತ್ಯಾಜ್ಯ ನಿರ್ವಹಣೆಯ ಮೂರು ಕ್ಷೇತ್ರಗಳನ್ನು ಪ್ರತಿನಿಧಿಸುವ ಹಸಿರು ದವೀಪ ಯೋಜನೆ ಸಂಪೂರ್ಣವಾಗಿ ಹೊಸ ದೃಷ್ಟಿಕೋನ ಒಳಗೊಂಡಿದ್ದು,  ಹಸಿರು ಕೇರಳ ಮಿಷನ್‍ನೇತೃತ್ವದಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
                  ಹಸಿರು ದ್ವೀಪ ಯೋಜನೆ ರಾಜ್ಯದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಕೃಷಿ ಭೂಮಿ ಅಥವಾ ಅರಣ್ಯ ಭೂಮಿಯ ರಚನೆಯನ್ನು ಬದಲಾಯಿಸದೆ, ಬಳಕೆಯಾಗದೆ ಉಳಿದಿರುವ ಸಾರ್ವಜನಿಕ ಯಾ ಖಾಸಗಿ ಜಮೀನುಗಳ ಗುಣಲಕ್ಷಣಗಳಿಗೆ ಹೊಂದಿಕೆಯಾಗುವ ಮರಗಳನ್ನು ನೆಡುವ ಮೂಲಕ ರೂಪುಗೊಂಡ ಸಣ್ಣ ಕಾಡುಗಳಾಗಿವೆ. ಜಿಲ್ಲೆಯಲ್ಲಿ 2019 ಜೂ.5ರಂದು ಅಂದಿನ ಕಂದಾಯ ಮತ್ತು ವಸತಿ ಇಲಾಖೆ ಸಚಿವ ಇ.ಚಂದ್ರಶೇಖರನ್ ಅವರು ಜಿಲ್ಲಾ ಮಟ್ಟದ ಹಸಿರುದ್ವೀಪ ಯೋಜನೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿದ್ದರು. ಆ ವರ್ಷ, ಜಿಲ್ಲೆಯ 30 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 89 ಹಸಿರು ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು. ನಂತರ 2020ರ ಪರಿಸರ ದಿನಾಚರಣೆಯ ಸಂದರ್ಭ ಜಿಲ್ಲೆಯಲ್ಲಿ 342 ಹಸಿರು ದ್ವೀಪ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಯಿತು. ಈ ಮೂಲಕ ಜಿಲ್ಲೆಯ 40 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು 431 ಗ್ರೀನ್ ಫೀಲ್ಡ್ ಗಳನ್ನು ಆರಂಭಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries