HEALTH TIPS

ಈ ಬಾರಿಯ ಓಣಂ ಗೌಜಿ-ಗದ್ದಲಗಳೊಂದಿಗೆ ನಡೆಸಲು ತೀರ್ಮಾನ: ಸಂಭ್ರಮಕ್ಕೆ 7.47 ಕೋಟಿ ಮಂಜೂರು ಮಾಡಿದ ಸರ್ಕಾರ

         
                  ತಿರುವನಂತಪುರ: ಈ ಬಾರಿ ಓಣಂ ಅನ್ನು ಅತ್ಯಂತ ಸಂತಸದಿಂದ ಆಚರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ 7.47 ಕೋಟಿ ಮಂಜೂರಾಗಿದೆ. ರಾಜ್ಯಮಟ್ಟದ ಓಣಂ ಸಪ್ತಾಹವನ್ನು ಸೆ.6ರಿಂದ 12ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.
                ಕೊನೆಯ ಬಾರಿಗೆ ಗೌಜಿ-ಗದ್ದಲದೊಂದಿಗೆ ಓಣಂ ಆಚರಣೆ 2019 ರಲ್ಲಿ ಆಯೋಜಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಓಣಂ ವಾರದ ಆಚರಣೆ ಇದ್ದಿರಲಿಲ್ಲ. 1980 ರ ದಶಕದಲ್ಲಿ ರಾಜ್ಯದಲ್ಲಿ ಓಣಂ ಆಚರಣೆ ಆರಂಭವಾಯಿತು.
                  ರಾಜ್ಯ ಮಟ್ಟದ ಓಣಂ ಆಚರಣೆಗೆ ಐದು ಕೋಟಿ ರೂ.ಮಂಜೂರಾಗಿದೆ. ಡಿಟಿಪಿಸಿ ನಡೆಸುವ ಜಿಲ್ಲಾ ಮಟ್ಟದ ಓಣಂ ಆಚರಣೆಗೆ 2.47 ಕೋಟಿ ರೂ.ನೀಡಲಾಗುತ್ತದೆ. ಆಚರಣೆಗೆ ಜಿಲ್ಲೆಗಳಿಗೆ ಮೀಸಲಿಟ್ಟ ಹಣದಲ್ಲಿ ಏರುಪೇರಾಗಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ. ಓಣಂ ಆಚರಣೆಗೆ ವಿವಿಧ ಜಿಲ್ಲೆಗಳಿಗೆ 8ರಿಂದ 36 ಲಕ್ಷ ರೂ. ಬೇಕಾಗಿ ಬರಲಿದೆ.
                     ಓಣಂ ಆಚರಣೆಗೆ ಅನುಮತಿಸಲಾದ ಮೊತ್ತ: (ಲಕ್ಷಗಳಲ್ಲಿ) ಜಿಲ್ಲೆಗಳಿಗೆ:  ತಿರುವನಂತಪುರಂ- 27, ಕೊಲ್ಲಂ- 27, ಕಣ್ಣೂರು- 27, ಎರ್ನಾಕುಳಂ- 36, ಕೋಝಿಕ್ಕೋಡ್- 36, ತ್ರಿಶೂರ್- 30, ಆಲಪ್ಪುಳ- 8, ಪತ್ತನಂತಿಟ್ಟ- 8, ಕೊಟ್ಟಾಯಂ- 8, ಇಡುಕ್ಕಿ 8, ಪಾಲಕ್ಕಾಡ್ - 8, ಮಲಪ್ಪುರಂ- 8, ವಯನಾಡ್- 8, ಕಾಸರಗೋಡು- 8.
                     ಏತನ್ಮಧ್ಯೆ, ಓಣಂ ಹಬ್ಬದ ಜೊತೆಗೆ ಇಂದಿನಿಂದ ಅಕ್ಟೋಬರ್ 31 ರವರೆಗೆ ಇಡುಕ್ಕಿ-ಚುರುತೋಣಿ ಅಣೆಕಟ್ಟುಗಳಿಗೆ ಭೇಟಿ ನೀಡಬಹುದು. ಟಿಕೆಟ್ ದರ ವಯಸ್ಕರಿಗೆ 40 ಮತ್ತು ಮಕ್ಕಳಿಗೆ 20 ರೂ. ಚುರುತೋಣಿ ಅಣೆಕಟ್ಟಿನಿಂದ ಪ್ರಾರಂಭವಾಗಿ ಇಡುಕ್ಕಿ ಆರ್ಚ್ ಅಣೆಕಟ್ಟು ಮತ್ತು ವೈಶಾಲಿ ಗುಹೆಯನ್ನು ನೋಡಲು ಆರು ಕಿಲೋಮೀಟರ್ ನಡೆದು ಹಿಂತಿರುಗಬೇಕು. ಅಣೆಕಟ್ಟಿನ ಮೇಲೆ ನಡೆಯಲು ಕಷ್ಟವಾಗುವವರಿಗೆ ಕಾರು ವ್ಯವಸ್ಥೆಯೂ ಕೂಡ ಇದೆ. ಕಾರಿನಲ್ಲಿ ಪ್ರಯಾಣಿಸಲು ಎಂಟು ಜನರಿಗೆ 600 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

                ಭೇಟಿಯ ಸಮಯವು ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ ಇರಲಿದೆ. ಬುಧವಾರದಂದು ಅಣೆಕಟ್ಟೆಗೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ, ಕಾರಣ ಅಂದು ನೀರಿನ ಮಟ್ಟ ಮತ್ತು ತಾಂತ್ರಿಕ ತಪಾಸಣೆ ನಡೆಸಲಾಗುತ್ತದೆ.  ಭದ್ರತಾ ವ್ಯವಸ್ಥೆಗಳ ಭಾಗವಾಗಿ, ಮೊಬೈಲ್ ಫೆÇೀನ್‍ಗಳು ಮತ್ತು ಕ್ಯಾಮೆರಾಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಕಟ್ಟುನಿಟ್ಟಾಗಿ ನಿμÉೀಧಿಸಲಾಗಿದೆ. ಚೆರುತೋಣಿ-ತೊಡುಪುಳ ರಸ್ತೆಯಲ್ಲಿ ಪರೆಮಾವ್ ಕಡೆಯಿಂದ ಗೇಟ್ ಮೂಲಕ ಅಣೆಕಟ್ಟಿಗೆ ಪ್ರವೇಶ ವ್ಯವಸ್ಥೆ ಇರಲಿದೆ.  ಇಡುಕ್ಕಿ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries