HEALTH TIPS

ಚೀನಾ ಜೊತೆ ಬ್ರಿಟನ್ ವ್ಯಾಪಾರ ಸಂಬಂಧ ಮುರಿದು ಬೀಳುತ್ತಾ? ಉದ್ಯಮಿಗಳ ನಡೆ ಏನು?

 

          ಲಂಡನ್: ಬ್ರಿಟನ್‌ನಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಾಗೂ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಚೀನಾ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಪರಿಣಾಮವಾಗಿ ಚೀನಾದಲ್ಲಿನ ತಮ್ಮ ಉದ್ಯಮಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಹಾಗೂ ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಬೇಕಾಗಬಹುದನ್ನು ಬ್ರಿಟನ್ ಉದ್ಯಮಿಗಳು ಎದುರು ನೋಡುತ್ತಿದ್ದಾರೆ.

               ಇತ್ತೀಚೆಗೆ ಏಷ್ಯಾದ ಬಲಿಷ್ಠ ದೇಶವು (ಚೀನಾ) ದೇಶೀಯವಾಗಿ ಮತ್ತು ಜಾಗತಿಕ ಭದ್ರತೆಗೆ ನಂಬರ್ ಒನ್ ಬೆದರಿಕೆಯಾಗಿದೆ ಎಂದು ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಹೇಳಿದ್ದರು. ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರೆ ಚೀನಾ ವಿರುದ್ಧ ಕಠಿಣ ನಿರ್ಧಾರಗಳ ಭರವಸೆಯನ್ನು ಅವರು ನೀಡಿದ್ದರು.

                    'ಕಾನ್ಫಿಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿ'ಯ ಮುಖ್ಯಸ್ಥರು ಶನಿವಾರ ಫಿನಾನ್ಸಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, 'ಚೀನಾದಲ್ಲಿನ ವ್ಯಾಪಾರ ಸಂಬಂಧಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದನ್ನು ತಾವು ಎದುರು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ.

                    ಸಂದರ್ಶನದಲ್ಲಿ ಮಾತನಾಡಿರುವ ಕಾನ್ಫಿಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿಯ ನಿರ್ದೇಶಕ ಟೋನಿ ಡಾಂಕರ್ ಅವರು, 'ಈ ಸಮಯದಲ್ಲಿ ನಾವು ಹೇಳುವ ಪ್ರತಿಯೊಂದು ಕಂಪನಿಯು ಚೀನಾದೊಂದಿಗಿನ ತಮ್ಮ ಪೂರೈಕೆ ಸರಪಳಿಗಳನ್ನು ಕಡಿತಗೊಳಿಸುವ ಚಿಂತನೆಯಲ್ಲಿ ತೊಡಗಿಸಿಕೊಂಡಿದೆ. ಏಕೆಂದರೆ ನಮ್ಮ ರಾಜಕಾರಣಿಗಳು ಅನಿವಾರ್ಯವಾಗಿ ಚೀನಾದಿಂದ ಬೇರ್ಪಡುವುದನ್ನು ನಿರೀಕ್ಷಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

                  ಚೀನಾ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಶೇ 13ರಷ್ಟಿದೆ ಎಂದು ಅವರು ಹೇಳಿದ್ದಾರೆ.

                   ಹಾಂಗ್‌ಕಾಂಗ್‌ ಮೇಲೆ ಚೀನಾದ ದಬ್ಬಾಳಿಕೆ ವಿರೋಧಿಸಿ ಬ್ರಿಟನ್ ಕೈಗೊಂಡ ನಿರ್ಣಯಗಳು ಹಾಗೂ ಇತ್ತೀಚಿನ ದಿನಮಾನಗಳಲ್ಲಿ ಚೀನಾ ವಿರುದ್ಧದ ಬ್ರಿಟನ್ ಅಭಿಯಾನಗಳು ಚೀನಾದ ಜೊತೆ ಸಂಬಂಧ ಹೊಂದಿರುವ ಉದ್ಯಮಿಗಳನ್ನು ಆತಂಕಕ್ಕೆ ಈಡು ಮಾಡಿವೆ.

                   ಭಾರತದಂತೆ ಬ್ರಿಟನ್ ಕೂಡ ರಾಷ್ಟ್ರೀಯ ಭದ್ರತೆಗೆ ದಕ್ಕೆಯೊಡ್ಡುವ ಅನೇಕ ಚೈನೀಸ್ ಟೆಕ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು.

                     ಚೀನಾದ ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನೀ ಪ್ರಭಾವವನ್ನು ಹೆಚ್ಚಿಸುವುದನ್ನು ತಡೆಯಲು ಬ್ರಿಟನ್‌ನ ಎಲ್ಲಾ 30 ಕನ್ಫ್ಯೂಷಿಯಸ್ ಧಾರ್ಮಿಕ ಸಂಸ್ಥೆಗಳನ್ನು ಮುಚ್ಚುವುದಾಗಿ ರಿಷಿ ಸುನಕ್ ತಮ್ಮ ಪ್ರಸ್ತಾಪದಲ್ಲಿ ತಿಳಿಸಿದ್ದರು. ಇದೇವೇಳೆ, ಚೀನೀ ಕಮ್ಯುನಿಸ್ಟ್ ಪಕ್ಷವನ್ನು ನಮ್ಮ ವಿಶ್ವವಿದ್ಯಾಲಯಗಳಿಂದ ಹೊರಹಾಕುವುದಾಗಿಯೂ ಅವರು ಭರವಸೆ ನೀಡಿದ್ದರು.

                     ಬ್ರಿಟನ್‌ನ ದೇಶೀಯ ಬೇಹುಗಾರಿಕೆ ಸಂಸ್ಥೆ ಎಂಐ5 ಅನ್ನು ಚೀನೀ ಬೇಹುಗಾರಿಕೆಯನ್ನು ಎದುರಿಸಲು ಬಳಸಲಾಗುವುದು ಮತ್ತು ಅಂತರ್ಜಾಲದ ಚೀನಾದ ಬೆದರಿಕೆಗಳನ್ನು ನಿಭಾಯಿಸಲು 'ನ್ಯಾಟೊ-ಶೈಲಿಯ' ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ಸುನಕ್ ಹೇಳಿದ್ದರು.

                     ಆಯಕಟ್ಟಿನ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಪ್ರಮುಖ ಬ್ರಿಟಿಷ್ ಸ್ವತ್ತುಗಳನ್ನು ಚೀನೀಯರು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸುವ ಕುರಿತು ಅಧ್ಯಯನ ಮಾಡುವುದಾಗಿಯೂ ಸುನಕ್ ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries