ಮುಖ್ಯಮಂತ್ರಿ ವಿರುದ್ಧ ಕೊಲೆ ಸಂಚು ಪ್ರಕರಣ; ಕೆ ಎಸ್ ಶಬರಿನಾಥನಿಗೆ ಜಾಮೀನು

                  ತಿರುವನಂತಪುರ: ಮುಖ್ಯಮಂತ್ರಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಶಬರೀನಾಥನ್ ಗೆ ಜಾಮೀನು ಮಂಜೂರು ಮಾಡಲಾಗಿದೆ.  ತಿರುವನಂತಪುರ ಪ್ರಧಾನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಷರತ್ತುಗಳಿಗೆ ಒಳಪಟ್ಟಿರುತ್ತದೆ.

               ಜಾಮೀನು ವ್ಯವಸ್ಥೆಯಲ್ಲಿ ಮೂರು ಷರತ್ತುಗಳಿವೆ. ಇದರಲ್ಲಿ ಮೊದಲನೆಯದು ತನಿಖಾ ತಂಡದ ಮುಂದೆ ಮೊಬೈಲ್ ಪೋನ್ ಅನ್ನು ಹಾಜರುಪಡಿಸುವುದು. ಇದಲ್ಲದೆ, 20, 21 ಮತ್ತು 22 ರಂದು ಬೆಳಿಗ್ಗೆ 10 ಗಂಟೆಗೆ ತನಿಖಾ ತಂಡದ ಮುಂದೆ ಹಾಜರಾಗಲು ಮತ್ತು ತಲಾ 50,000 ರೂ.ಗಳ ಎರಡು ಶ್ಯೂರಿಟಿ ಸಲ್ಲಿಸಲು ಇತರ ಷರತ್ತುಗಳನ್ನು ವಿಧಿಸಲಾಗಿದೆ.

                ಪಿತೂರಿ ಪ್ರಕರಣದಲ್ಲಿ ಶಬರಿನಾಥನ್ ನಾಲ್ಕನೇ ಆರೋಪಿ. ಪ್ರಕರಣದಲ್ಲಿ ಬಂಧಿಸಿದ ನಂತರ ತಡರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತೀವ್ರ ವಾದ-ಪ್ರತಿವಾದಗಳ ನಂತರ ನ್ಯಾಯಾಲಯ ಕೆಲಕಾಲ ಮುಂದೂಡಿತು. ಇದಾದ ಬಳಿಕ ಜಾಮೀನು ತೀರ್ಪು ನೀಡಲಾಯಿತು.

             ತನ್ನ ಬಂಧನ ಕಾನೂನುಬದ್ಧವಾಗಿಲ್ಲ ಮತ್ತು  ಕಸ್ಟಡಿಗೆ ಕೊಡುವ ಅಗತ್ಯವಿಲ್ಲ ಎಂದು ಶಬರಿನಾಥನ್ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದೆ. ಪೋಲೀಸ್ ಕಸ್ಟಡಿ ಅರ್ಜಿಯಲ್ಲಿ, ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ ಮತ್ತು ಇತರ ಆರೋಪಿಗಳೊಂದಿಗೆ ಶಬರಿನಾಥನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ.

           ಶಬರಿನಾಥನ್ ಅವರನ್ನು ತಿರುವನಂತಪುರ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ನಿನ್ನೆ ಹಾಜರುಪಡಿಸಲಾಯಿತು.ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಬಾಲಕೃಷ್ಣನ್ ಅವರು ನಡೆಸಿದರು.  ಶಬರಿನಾಥನ್ ಅವರನ್ನು ಕಸ್ಟಡಿಯಲ್ಲಿ ಇರಿಸಬೇಕೆಂದು ಪೋಲೀಸರು ಒತ್ತಾಯಿಸಿದರು. ಪೋಲೀಸರು ರಿಮಾಂಡ್ ವರದಿ ಮತ್ತು ಕಸ್ಟಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

               ವಿಚಾರಣೆಯ ವೇಳೆ ಈ ಒಂದು ಸ್ಕ್ರೀನ್ ಶಾಟ್ ಆಧಾರದಲ್ಲಿ ಕಸ್ಟಡಿಗೆ ಬೇಡಿಕೆ ಇಟ್ಟಿಲ್ಲವೇ ಮತ್ತು ಬೇರೆ ಯಾವುದಾದರೂ ಸಾಕ್ಷಿ ಇದೆಯೇ ಎಂದು ಕೋರ್ಟ್ ವಿಚಾರಣೆ ನಡೆಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಸಿಕ್ಯೂಷನ್, ಶಬರಿನಾಥನ್ ಪಿತೂರಿಯ ಭಾಗವಾಗಿದ್ದಕ್ಕೆ ಸಾಕ್ಷ್ಯಾಧಾರಗಳಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಬೇಕು ಎಂದು ನ್ಯಾಯಾಲಯದಲ್ಲಿ ತಿಳಿಸಿತು.

                   ಶಬರಿನಾಥ್ ಅವರ ಸಂದೇಶವೇ ವಿಮಾನದಲ್ಲಿ ಎಲ್ಲ ನಾಟಕಗಳ ಆರಂಭ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಪುನರುಚ್ಚರಿಸಿತು. ಶಬರಿನಾಥನ್ ವಿರುದ್ಧ ನಿರ್ಣಾಯಕ ಸಾಕ್ಷ್ಯಗಳಿವೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಹೇಳಿದೆ.

                   ವಿಮಾನ ಹತ್ತುವ ಮೊದಲು ಶಬರೀನಾಥ್ ಮೊದಲ ಮತ್ತು ಎರಡನೇ ಆರೋಪಿಗಳಿಗೆ ನೇರವಾಗಿ ಕರೆ ಮಾಡಿದ್ದು, 4 ಬಾರಿ ನೇರವಾಗಿ ಸಂಪರ್ಕಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತು.12.47 ಕ್ಕೆ ಮೊದಲ ಆರೋಪಿ ಶಬರಿನಾಥನ್ ಬಳಸಿದ ನಂಬರ್ ಅನ್ನು ಸಂಪರ್ಕಿಸಿದ್ದ. ಶಬರಿನಾಥನ್ ಮೂರನೇ ಆರೋಪಿಯ ಸಂಖ್ಯೆಯನ್ನು 3.08 ಕ್ಕೆ ಮತ್ತೆ ಸಂಪರ್ಕಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.

                  ಏತನ್ಮಧ್ಯೆ, ಫೆÇೀನ್ ಅನ್ನು ಈಗ ನ್ಯಾಯಾಲಯಕ್ಕೆ ಹಸ್ತಾಂತರಿಸಬಹುದು ಮತ್ತು ತನಿಖಾಧಿಕಾರಿ ಕೇಳಿದರೆ, ತಕ್ಷಣ ನ್ಯಾಯಾಲಯಕ್ಕೆ ಪೋನ್ ನೀಡುತ್ತೇನೆ ಎಂದು ಶಬರಿನಾಥ್ ನ್ಯಾಯಾಲಯಕ್ಕೆ ತಿಳಿಸಿದರು.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries