ಎಕೆಜಿ ಕೇಂದ್ರಕ್ಕೆ ಸ್ಪೋಟಕ ಎಸೆತ ಪ್ರಕರಣ: ತನಿಖೆ ಕ್ರೈಂ ಬ್ರಾಂಚ್ ಗೆ

           ತಿರುವನಂತಪುರ: ಎಕೆಜಿ ಸೆಂಟರ್‍ಗೆ ಸಿಡಿಮದ್ದು ಎಸೆದ ಘಟನೆಯ ತನಿಖೆಯನ್ನು ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿದೆ. ದಾಳಿ ನಡೆದು 23 ದಿನ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಈ ಸಂಬಂಧ ರಾಜ್ಯ ಪೆÇಲೀಸ್ ವರಿμÁ್ಠಧಿಕಾರಿ ಆದೇಶ ಹೊರಡಿಸಿದ್ದಾರೆ.

         ಕಳೆದ ತಿಂಗಳು ಸಿಪಿಐ(ಎಂ)ನ ರಾಜ್ಯ ಸಮಿತಿ ಕಚೇರಿ ಮೇಲೆ ಬೈಕ್‍ನಲ್ಲಿ ಬಂದವರು ಸ್ಫೋಟಕಗಳನ್ನು ಎಸೆದಿದ್ದರು. ನಂತರ, ಕಾಂಗ್ರೆಸ್ ಮತ್ತು ಎಲ್ಡಿಎಫ್ ಘಟನೆಯ ಬಗ್ಗೆ ಪರಸ್ಪರ ಆರೋಪಿಸಿತ್ತು.  24 ಗಂಟೆಯೊಳಗೆ ಪ್ರಕರಣದ ತನಿಖೆಗೆ 12 ಸದಸ್ಯರ ವಿಶೇಷ ತಂಡವನ್ನು ನೇಮಿಸಲಾಗಿತ್ತು, ಆದರೆ ಪೆÇಲೀಸರು ಇನ್ನೂ ದಾಳಿಕೋರನನ್ನು ಪತ್ತೆ ಹಚ್ಚಿಲ್ಲ.

          ತನಿಖಾಧಿಕಾರಿಗಳು ಆರಂಭದಲ್ಲಿ ಆ ಪ್ರದೇಶದ ಸಿಸಿಟಿವಿ ದೃಶ್ಯಗಳ ಮೇಲೆ ಕೇಂದ್ರೀಕರಿಸಿದರು. ದಾಳಿಕೋರನ ಮುಖವಾಗಲಿ, ಪ್ರಯಾಣಿಸುತ್ತಿದ್ದ ಸ್ಕೂಟರ್ ನ ನಂಬರ್ ಪ್ಲೇಟ್ ಆಗಲಿ ಗುರುತಿಸಲಾಗಲಿಲ್ಲ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಕೆಜಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ತನಿಖೆ ಕೇಂದ್ರೀಕೃತವಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಬಂಧನಕ್ಕೊಳಗಾಗಿದ್ದವರನ್ನೂ ಬಿಡುಗಡೆ ಮಾಡಲಾಯಿತು.

         ನಂತರ, ದಾಳಿಕೋರರು ಸವಾರಿ ಮಾಡಿದ್ದ  ಡಿಯೋ ಸ್ಕೂಟರ್‍ನ ಮೇಲೆ ತನಿಖೆ ಕೇಂದ್ರೀಕರಿಸಲಾಯಿತು. ಅದರಲ್ಲೂ ಅಧಿಕಾರಿಗಳು ವಿಫಲರಾಗಬೇಕಾಯಿತು. ಇದೇ ವೇಳೆ ಸ್ಫೋಟಕ ಸಾಧನ ಬಾಂಬ್ ಅಲ್ಲ ಮತ್ತು ಕೆಲವು ಪಟಾಕಿಗಳಂತೆ ಕಡಿಮೆ ಸಾಮಥ್ರ್ಯ ಹೊಂದಿದೆ ಎಂದು ವಿಧಿವಿಜ್ಞಾನ ವರದಿಯೂ ಹೊರಬಿದ್ದಿದೆ. ಫೆÇೀರೆನ್ಸಿಕ್ ವರದಿ ಆಧರಿಸಿ ಪೆÇಲೀಸರು ಜಿಲ್ಲೆಯ ಪಟಾಕಿ ಕಾರ್ಖಾನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ತಂಡಕ್ಕೆ ಇದರಿಂದ ಯಾವುದೇ ಸುಳಿವು ಸಿಕ್ಕಿಲ್ಲ. ಆ ಬಳಿಕ ಮೊಬೈಲ್ ಟವರ್ ಮೇಲೆಯೇ ತನಿಖೆ ಕೇಂದ್ರೀಕೃತವಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಅಧಿಕಾರಿಗಳಿಗೆ ಸಿಕ್ಕಿಲ್ಲ.ಈ ನಡುವೆ ಪೆÇಲೀಸರು ಮೊಬೈಲ್ ಟವರ್ ಗಳಿಂದ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂಬ ಆರೋಪವೂ ಇದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries