ಜನರಲ್ಲಿ ಅಭಿವೃದ್ದಿಯ ಬಗ್ಗೆ ಜಾಗೃತಿ ಮೂಡಿಸಲು ಮೈಲ್ಸ್: ಶಾಸಕ ಎಕೆಎಂ

 
              ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಸಾಮಥ್ರ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೈಲ್ಸ್ ಪ್ರಾಜೆಕ್ಟ್ ನಡೆಸಲಾಗುತ್ತಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಒಂದು ವರ್ಷದ ಅವಧಿಗೆ ಅಭಿವೃದ್ಧಿ ಸಾಮಥ್ರ್ಯ ಮತ್ತು ಹಿಂದುಳಿದಿರುವಿಕೆ ಕುರಿತು ನಡೆಸಿದ ವೈಜ್ಞಾನಿಕ ಅಧ್ಯಯನವನ್ನು ಆಧರಿಸಿ ಈ ಯೋಜನೆಯು ದೀರ್ಘಾವಧಿಯ ದೃಷ್ಟಿಕೋನದಿಂದ ಕ್ಷೇತ್ರದ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರು ತಿಳಿದುಕೊಳ್ಳುವ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮತ್ತು ಮೌಲ್ಯಮಾಪನ ಮಾಡುವ ರೀತಿಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮ ನಡೆಯಲಿದೆ ಎಂದು  ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.
            ಅವರು ಮಂಜೇಶ್ವರ ಮೊರತ್ತಣೆಯ ಎ.ಎಚ್ ಪ್ಯಾಲೇಸ್ ಸಭಾಂಗಣದಲ್ಲಿ ಶನಿವಾರ ಮಂಜೇಶ್ವರ ಇನಿಶಿಯೇಟಿವ್ ಫಾರ್ ಲೋಕಲ್ ಎಂಪವರ್‍ಮೆಂಟ್ (ಮೈಲ್ಸ್) ಯೋಜನೆಯ ಉದ್ಘಾಟನೆ ಸಮಾರಭದಲ್ಲಿ ಯೋಜನೆಯ ಬಗ್ಗೆ ದಿಕ್ಸೂಚಿ ಭಾಷಣಗೈದು ಮಾತನಾಡಿದರು.
                ತ್ರಿಸ್ಥರ ಪಂಚಾಯತಿಗಳ ವಾರ್ಡ್ ಸದಸ್ಯರು, ಕುಟುಂಬಶ್ರೀ ಕಾರ್ಯಕರ್ತರು, ಶಾಲಾ ಪಿಟಿಎ ಪದಾಧಿಕಾರಿಗಳು, ಆಡಳಿತ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು ಸೇರಿದಂತೆ ಜನಪ್ರತಿನಿಧಿಗಳು ವಿವಿಧ ವಿಷಯಗಳ ಕುರಿತು ಚರ್ಚೆ ಮತ್ತು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

         ಯೋಜನೆಯ ಆರಂಭವಾಗಿ ಮಂಜೇಶ್ವರ ಶಾಸಕರು ಓದಿದ ಶಾಲೆಯಿಂದಲೇ ಕಾರ್ಯಕ್ರಮ ಆರಂಭವಾಗಿದ್ದು  ಕ್ಷೇತ್ರದ ಎಲ್ಲಾ 26 ಹೈಯರ್ ಸೆಕೆಂಡರಿ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿಯಲಿದ್ದಾರೆ. ನಂತರ ಮೈಲ್ಸ್ ಯೋಜನೆಯ ಭಾಗವಾಗಿ ಯುವಜನರಲ್ಲಿ ಮಾದಕ ವ್ಯಸನ ಮುಕ್ತ ಅಭಿಯಾನದೊಂದಿಗೆ ಆರೋಗ್ಯ ಸಮಸ್ಯೆಗಳ ಅಧ್ಯಯನಕ್ಕಾಗಿ 'ನನ್ನ ಆಸ್ಪತ್ರೆಗೆ ಹೋಗಿ' ಮತ್ತು 'ನನ್ನ ಕ್ಲಬ್‍ಗೆ ಹೋಗಿ' ಎಂಬ ಕಾರ್ಯಕ್ರಮಗಳನ್ನು ನಡೆಸಲಾಗುವುದು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries