ಜಾಮೀನು ಅರ್ಜಿ ತಿರಸ್ಕಾರದಿಂದ ಮಾನಸಿಕ ಹಿನ್ನಡೆ: ಒತ್ತಡದಲ್ಲಿ ಪಲ್ಸರ್ ಸುನಿ; ಆತ್ಮಹತ್ಯೆ ಪ್ರವೃತ್ತಿ: ಪೋಲೀಸ್ ಭದ್ರತೆ

                                           

                    ಕೊಚ್ಚಿ: ತ್ರಿಶೂರ್ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿರುವ ಪಲ್ಸರ್ ಸುನಿಗೆ ಭದ್ರತೆ ಹೆಚ್ಚಿಸಲು ಪೋಲೀಸರು ಸಜ್ಜಾಗಿದ್ದಾರೆ. ಮಾನಸಿಕ ಒತ್ತಡದ ಜೊತೆಗೆ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾದ ಕಾರಣ ಸುನಿ ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ವೈದ್ಯರ ಸೂಚನೆಯಂತೆ ಮಂಗಳವಾರ ಸಂಜೆ ಆರೋಪಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ.

                    ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದರಿಂದ ಸುನಿ ಅವರು ತೀವ್ರ ಮಾನಸಿಕ ಒತ್ತಡ ಮತ್ತು ಆತ್ಮಹತ್ಯೆ ಪ್ರವೃತ್ತಿಯಿಂದ ಬಳಲುತ್ತಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಚಿಕಿತ್ಸೆ ಮುಗಿಸಿ ಮರಳಿದ ಬಳಿಕ ಪ್ರತ್ಯೇಕವಾಗಿ ನಿಗಾ ವಹಿಸಲು ನಿರ್ಧರಿಸಲಾಗಿದೆ. ಪಲ್ಸರ್ ಸುನಿ ಎರ್ನಾಕುಳಂ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ.

              ಹಲವು ಸಮಯಗಳಿಂದ  ಜೈಲಿನಲ್ಲಿದ್ದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸುನಿ ಈ ಹಿಂದೆ ಹೈಕೋರ್ಟ್‍ಗೆ ತಿಳಿಸಿದ್ದರು. ನಂತರ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಅವರನ್ನು ಮೊದಲು ಎರ್ನಾಕುಳಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಕಲಮಸೇರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. 13ರಂದು ಸುನಿ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries